ಸುದ್ದಿ ಸಂಗ್ರಹ ವಾಡಿ
ಸತ್ಯದ ಮಾರ್ಗದಲ್ಲಿ ನಡೆಯುವುದೆ ಮಾನವ ಧರ್ಮ ಎಂದು ರೇಣುಕಾಚಾರ್ಯರು ತಿಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಹೇಳಿದರು.
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಜಯಂತೋತ್ಸವ ಆಚರಣೆ ಸಂದರ್ಭದಲ್ಲಿ ಮಾತನಾಡಿದ ಅವರು, ಪಂಚಾಚಾರ್ಯರಲ್ಲಿ ಬಹಳ ಪ್ರಮುಖವಾದ ಆಚಾರ್ಯರಾಗಿದ್ದ ಇವರು ಪ್ರಭಾವಶಾಲಿಯಾದ ರಂಭಾಪುರಿ ಪೀಠದ ಸಂಸ್ಥಾಪಕರಾಗಿದ್ದರು. ಸತ್ಯದ ಮಾರ್ಗದೊಂದಿಗೆ ಸಾಮರಸ್ಯದಿಂದ ಸಮಾಜ ನಡೆಯುವುದಕ್ಕೆ ಅನುಸರಿಸಬೇಕಾದ ಅಂಶಗಳು ಧಾರೆಯೆರಿದಿದ್ದಾರೆ ಎಂದರು.
ರೇಣುಕಾಚಾರ್ಯರರ ಸರ್ವಶ್ರೇಷ್ಠ ಮೌಲಿಕ ಗ್ರಂಥವಾದ ಸಿದ್ಧಾಂತ ಶಿಖಾಮಣಿಯ ತತ್ವ ಸಿದ್ದಾಂತದ ಬೋಧನೆ, ಮಾನವಕುಲ ದೈವತ್ವದೆಡೆಗೆ ಸಾಗಲು ದಾರಿ ದೀಪವಾಗಿದೆ. ಸಮಾಜದಲ್ಲಿನ ಜಾತೀಯತೆ, ಮೂಢನಂಬಿಕೆ ಹೋಗಲಾಡಿಸಿ ಸಮಾನತೆ ಎತ್ತಿಹಿಡಿದು, ಸಾಮಾಜಿಕ ಸುಧಾರಣೆಯ ಕ್ರಾಂತಿಗೆ ಪಾತ್ರರಾದವರು ಅವರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಮುಖಂಡರಾದ ಭೀಮಶಾ ಜೀರೊಳ್ಳಿ, ರವೀಂದ್ರ ನಾಯಕ, ಕಾಶಿನಾಥ ಶೆಟಗಾರ, ರವಿ ಸಿಂದಗಿ, ಶಿವಕುಮಾರ ವಡ್ಡಡಗಿ, ಕುಮಾರ ಜಾಧವ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ, ಸಿದ್ದಣ್ಣ ಸೊಡ್ಡೆ, ಗುಂಡುಗೌಡ ಚಾಮನೂರ, ನಾಗರಾಜ ಹೂಗಾರ ಸೇರಿದಂತೆ ಅನೇಕರು ಇದ್ದರು.