ಸ್ತ್ರೀ ಕುಲಕ್ಕೆ ಮಾದರಿ ಹೇಮರೆಡ್ಡಿ ಮಲ್ಲಮ್ಮ: ಜೇಮಸಿಂಗ್ ಮಹಾರಾಜ

ತಾಲೂಕು

ಸುದ್ದಿ ಸಂಗ್ರಹ ಶಹಾಬಾದ್
ಸ್ತ್ರೀ ಕುಲಕ್ಕೆ ಮಾದರಿಯಾಗಿ, ಸಮಾಜದ ಉದ್ಧಾರಕ್ಕಾಗಿ, ಭಕ್ತಿಯ ಸಾಕಾರ ಮೂರ್ತಿಯಾಗಿರುವ ಮಲ್ಲಮ್ಮಳ ಜೀವನ ಪ್ರತಿಯೊಬ್ಬರಿಗೂ ಆದರ್ಶಪ್ರಾಯ ಎಂದು ಮಠದ ಪೀಠಾಧಿಪತಿ ಜೇಮಸಿಂಗ್ ಮಹಾರಾಜ ಹೇಳಿದರು.

ತಾಲೂಕಿನ ಮಹಾನಗರ ಯಲ್ಲಾಲಿಂಗ ಪುಣ್ಯಾಶ್ರಮದಲ್ಲಿ 35ನೇ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ‘ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ರ ಪುರಾಣ ಪ್ರವಚನ ಶ್ರೀಮಠದ ಪೀಠಾಧಿಪತಿ ಜೇಮಸಿಂಗ್ ಮಹಾರಾಜ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸದ್ಗುರುಗಳ ಕೃಪೆಯಿಂದ ಭಕ್ತಿ ಮತ್ತು ಧರ್ಮದ ಹಾದಿಯಲ್ಲಿ ನಡೆಯುವುದು ಜೀವನದ ಮುಖ್ಯ ಉದ್ದೇಶವಾಗಬೇಕು ಎಂದರು.

ಪ್ರವಚನ ಮತ್ತು ಸಂಗೀತ ಸೇವೆ ನೀಡಲು ಕಾರ್ಯಕ್ರಮದ ಮುಖ್ಯ ಪ್ರವಚನಕಾರರಾಗಿ ಆಗಮಿಸಿದ ಸಿದ್ಧೇಶ್ವರ ಶಾಸ್ತ್ರಿಗಳು ಹೇಮರೆಡ್ಡಿ ಮಲ್ಲಮ್ಮನವರ ಆದರ್ಶ ಜೀವನ ಮತ್ತು ಅವರ ಭಕ್ತಿ ಮಾರ್ಗದ ಕುರಿತು ಮನಮುಟ್ಟುವಂತೆ ಪ್ರವಚನ ನೀಡುತ್ತಾರೆ ಎಂದರು.

ಗಾಯಕ ದತ್ತರಾಜ ಕಲಶೆಟ್ಟಿ ಅವರ ಸುಶ್ರಾವ್ಯ ಗಾಯನ ಹಾಗೂ ಸುರೇಶ ಬೆನಕಟ್ಟಿ ಅವರ ತಬಲಾ ಸಾಥ್ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತರುತ್ತದೆ ಎಂದರು. …. ಈ ಸಂದರ್ಭದಲ್ಲಿ ತಾ.ಪಂ ಮಾಜಿ ಸದಸ್ಯ ನಾಮದೇವ ರಾಠೋಡ, ಗ್ರಾ.ಪಂ ಮಾಜಿ ಅಧ್ಯಕ್ಷ ಹೀರಾಸಿಂಗ್ ರಾಠೋಡ, ಮಠದ ಕಾರ್ಯದರ್ಶಿ ನೀಲಕಂಠ್ ಚವ್ಹಾಣ್, ಪ್ರಮುಖರಾದ ಮೈರಾವಣ ರಾಠೋಡ, ಕಿಶನ್ ಚವ್ಹಾಣ್, ಆನಂದ ಚವ್ಹಾಣ್, ಗಣಪತಿ ಜಾಧವ, ಮಹೇಶ್ ಕುಲಕರ್ಣಿ, ದೇವಸಿಂಗ ಚವ್ಹಾಣ್, ಸೂರತಕುಮಾರ ಉಪಾಧ್ಯಾಯ, ಪ್ರಕಾಶ್ ರಾಠೋಡ ಮತ್ತು ಡಾ. ಶ್ರೀನಾಥ್ ರಾಠೋಡ ಸೇರಿದಂತೆ ಮಠದ ಪದಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ನೂರಾರು ಜನ ಸದ್ಭಕ್ತರು ಉಪಸ್ಥಿತರಿದ್ದರು.

ಪುರಾಣ ಪ್ರವಚನದ ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು.

Leave a Reply

Your email address will not be published. Required fields are marked *