ರಾಯರನ್ನ ಅಪಮಾನ ಮಾಡಿದವರು ಉದ್ಧಾರವಾದ ಇತಿಹಾಸವಿಲ್ಲ: ಸಿಎಂ ನಡೆಗೆ ಜಗ್ಗೇಶ್ ಖಂಡನೆ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡಿದೆ ಫೋಟೋವನ್ನು ತಳ್ಳಿದ ನಡೆಗೆ ರಾಜ್ಯಸಭಾ ಸದಸ್ಯರಾದ ನಟ ಜಗ್ಗೇಶ್‌ ತೀವ್ರ ಬೇಸರ ಹೊರಹಾಕಿದ್ದಾರೆ.

ಸಿದ್ರಾಮಯ್ಯ ಅವರು ರಾಘವೇಂದ್ರ ಸ್ವಾಮಿಯ ಫೋಟೋ ತಳ್ಳುತ್ತಿರುವ ವಿಡಿಯೋ ಜೊತೆಗೆ ಸಂದೇಶವೊಂದನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಯರನ್ನ ಅಪಮಾನ ಮಾಡಿದ ಯಾರು ಉದ್ಧಾರವಾದ ಇತಿಹಾಸವಿಲ್ಲಾ. ರಾಯರ ಸಣ್ಣ ಕೃಪೆ ನಮ್ಮ ಮೇಲೆ ಬೀಳಲಿ ಎಂದು ಕೋಟ್ಯಂತರ ಭಕ್ತವೃಂದ ಜಪತಪವೈರಾಗ್ಯ ಉಪವಾಸದಿಂದ ಸೇವೆಮಾಡುತ್ತಾರೆ, ಭಕ್ತಿಯಿಂದ ಬಂದದ್ದು ಹೀಗೆ ತಿರಸ್ಕರಿಸಿದ ಪ್ರಥಮ ವ್ಯೆಕ್ತಿಯನ್ನು ನಾನು ನನ್ನ ಬದುಕಲ್ಲಿ ಕಂಡದ್ದು. ರಾಯರಿದ್ದಾರೆ.. ಎದ್ದುಬರುತ್ತಾರೆ.. ಕಾಯಬೇಕು ಅಂತ ಬರೆದುಕೊಂಡಿದ್ದಾರೆ.

ಏನಿದು ಘಟನೆ ?
ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಘವೇಂದ್ರ ಸ್ವಾಮಿಗಳ ಫೋಟೋ ನೀಡಲು ಬಂದಾಗ ಫೋಟೋ ಸ್ವೀಕಾರ ಮಾಡದೆ ಫೋಟೋವನ್ನು ತಳ್ಳಿದ್ದರು. ಮುಖ್ಯಮಂತ್ರಿಗಳ ಕಾವೇರಿ ನಿವಾಸದ ಬಳಿ ಈ ಘಟನೆ ನಡೆದಿದೆ. ಬೆಳಗಾವಿ ಪ್ರವಾಸಕ್ಕೆ ತೆರಳಲು HAL ಗೆ ತೆರಳುವ ವೇಳೆ ಕಾವೇರಿ ನಿವಾಸದ ಗೇಟ್ ಬಳಿ ಸಾರ್ವಜನಿಕರಿಂದ ಸಿಎಂ ಸಿದ್ದರಾಮಯ್ಯ ಮನವಿ ಪತ್ರ ಸ್ವೀಕಾರ ಮಾಡ್ತಿದ್ದರು. ಆಗ ಅಭಿಮಾನಿಯೊಬ್ಬರು ಸಿಎಂ ಸಿದ್ದರಾಮಯ್ಯ ಅವರಿಗೆ ರಾಘವೇಂದ್ರ ಫೋಟೋ ಕೊಡಲು ಮುಂದಾದರು.

ಈ ವೇಳೆ ಸಿಎಂ ರಾಘವೇಂದ್ರ ಸ್ವಾಮಿ ಫೋಟೋ ಸ್ವೀಕಾರ ಮಾಡದೆ ಫೋಟೋ ತಳ್ಳಿದರು. ಅಲ್ಲದೆ ಅಭಿಮಾನಿ ಮೇಲೆ ಗರಂ ಆದ್ರು. ಈ ಹಿಂದೆ ಕುಂಕುಮ, ಪೇಟ ತಿರಸ್ಕರಿಸುತ್ತಿದ್ದ ಸಿಎಂ ಇದೀಗ ರಾಘವೇಂದ್ರ ಸ್ವಾಮಿ ಫೋಟೋ ತಿರಸ್ಕಾರ ಮಾಡಿದ ಘಟನೆ ನಡೆದಿದೆ. ಇದಕ್ಕೆ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *