ರಕ್ತದಾನ ಮಾಡಿ ಉತ್ತಮ ಆರೋಗ್ಯ ಪಡೆಯಿರಿ: ಡಾ. ಶರಣಗೌಡ ಪಾಳಾ

ನಗರದ

ಸುದ್ದಿ ಸಂಗ್ರಹ ಶಹಾಬಾದ್
ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ. ಹಳೆಯ ರಕ್ತವನ್ನು ಫಿಲ್ಟರ್​ ಮಾಡುವುದಕ್ಕಿಂತ ಉತ್ತಮವಾಗಿರುತ್ತದೆ. ಹಾಗಾಗಿ ರಕ್ತದಾನ ಮಾಡುವುದರಿಂದ ಅತ್ಯುತ್ತಮ ಆರೋಗ್ಯ ಪಡೆಯಬಹುದಾಗಿದೆ ಎಂದು ಎಂ.ಆರ್.ಎಮ್.ಸಿ ಮೆಡಿಕಲ್ ಕಾಲೇಜಿನ ಮುಖ್ಯಸ್ಥ ಡಾ. ಶರಣಗೌಡ ಪಾಳಾ ಹೇಳಿದರು.

ನಗರದ ಗಂಗಮ್ಮ ಶಾಲೆಯ ಆವರಣದಲ್ಲಿ ಸಂತೋಷಕುಮಾರ ಇಂಗಿನಶೆಟ್ಟಿ ಅಭಿಮಾನಿಗಳ ಬಳಗ ಹಾಗೂ ಪತ್ರಕರ್ತರ ಸಂಘ ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಉಪಯುಕ್ತ ಕಾರ್ಯಕ್ರಮಗಳಿಗೆ ಸದಾ ಬೆಂಬಲ ಇರುತ್ತದೆ, ಇದೆ ರೀತಿ ಸಾಮಾಜಿಕ ಕಾರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಪತ್ರಕರ್ತರ ಸಂಘದ ಅಧ್ಯಕ್ಷ ಕೆ ರಮೇಶ ಭಟ್ ಮತ್ತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಜಯಕುಮಾರ ಮುತ್ತಟ್ಟಿ ಮಾತನಾಡಿದರು.

ವೇದಿಕೆ ಮೇಲೆ ಪತ್ರಕರ್ತ ವಾಸುದೇವ ಚವ್ಹಾಣ, ಮುಖಂಡರಾದ ಅನಿಲಕುಮಾರ ಮರಗೋಳ, ಭೀಮಶಂಕರ ಕುಂಬಾರ, ರಾಜೇಶ್ವರಿ ಧನಶೆಟ್ಟಿ, ಶಂಕರ ಬಾಬು ಕಣಿಕೆ, ಗೋರಕನಾಥ ಖಾನಾಪುರ್, ಶಿವಕುಮಾರ ಇಂಗಿನಶೆಟ್ಟಿ, ಡಾ. ಎಂ.ಎ ರಶೀದ ಉಪಸ್ಥಿತರಿದ್ದರು.

ಶಿಬಿರದಲ್ಲಿ ನೂರಾರು ಜನರಿಗೆ ಆರೋಗ್ಯ ತಪಾಸಣೆ ಮಾಡಿ ಔಷಧ ವಿತರಿಸಲಾಯಿತು.‌

ಶಿಬಿರದಲ್ಲಿ 30ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ಬಸವೇಶ್ವರ ಆಸ್ಪತ್ರೆ ಆಡಳಿತ ಮಂಡಳಿಯ ಸದಸ್ಯರು, ವೈದ್ಯರು, ಸಿಬ್ಬಂದಿ ವರ್ಗದವರು, ಪತ್ರಕರ್ತ ಶಿವಕುಮಾರ ಕುಸಾಳೆ, ಪ್ರಮುಖರಾದ ಅಣವೀರ ಇಂಗಿನಶೆಟ್ಟಿ, ಶರಣಬಸಪ್ಪ ಕೋಬಾಳ, ನಿಂಗಣ್ಣ ಹುಳುಗೋಳ್ಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. …ರಾಜು ಕೋಬಾಳ ನಿರೂಪಿಸಿದರು, ಪತ್ರಕರ್ತ ಲೋಹಿತ್ ಕಟ್ಟಿ ಸ್ವಾಗತಿಸಿದರು ಮತ್ತು ಪಾರ್ವತಿ ವಂದಿಸಿದರು.

Leave a Reply

Your email address will not be published. Required fields are marked *