ವಾಡಿ: ಸಂಕ್ರಾಂತಿ ಸ್ನಾನಕ್ಕೆ 10 ಸಾವಿರ ಉಚಿತ ಕಡಲೆ ಹಿಟ್ಟಿನ ಪ್ಯಾಕ್ ವಿತರಣೆ

ಪಟ್ಟಣದ

ಸುದ್ದಿ ಸಂಗ್ರಹ ವಾಡಿ
ಮಕರ ಸಂಕ್ರಾಂತಿಯಂದು ಸಾವಿರಾರು ಜನ ಪಟ್ಟಣದ ಪಕ್ಕದ ಭೀಮಾ-ಕಾಗಿಣ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ಆಗಮಿಸುತ್ತಾರೆ. ಇವರಿಗೆ ನದಿಯ ಪಾವಿತ್ರೃ ಮತ್ತು ಶುದ್ಧತೆ ಬಗ್ಗೆ ಅರಿವು ಮೂಡಿಸಲು ವಿಷಮುಕ್ತ ಪುಣ್ಯಸ್ನಾನ ಅಭಿಯಾನವನ್ನು ವರದಶ್ರೀ ಫೌಂಡೇಶನ್ ಸಂಸ್ಥೆ ಹಮ್ಮಿಕೊಂಡಿದೆ‌ ಎಂದು ಸಂಸ್ಥೆಯ ಸದಸ್ಯ ವೀರಣ್ಣ ಯಾರಿ ಹೇಳಿದ್ದಾರೆ.

ಬುಧವಾರ ಮತ್ತು ಗುರುವಾರ ಕುಂದನೂರಿನ ಸಂಗಮೇಶ್ವರ ದೇವಸ್ಥಾನದಲ್ಲಿನ ಸಂಗಮದಲ್ಲಿ ವಿಷಮುಕ್ತ ಪುಣ್ಯಸ್ನಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ, ನದಿ ನೀರಿಗೆ ಶಾಂಪೂ, ಸಾಬೂನು ಸೇರಿದಂತೆ ಮುಂತಾದ ರಾಸಾಯನಿಕ ಸೇರಿಸದೆ ಪುಣ್ಯಸ್ನಾನ ಮಾಡುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ನದಿಯ ನೀರನ್ನು ಕಾಪಾಡುವ ಪಣ ನಾವೆಲ್ಲರೂ ತೊಡಬೇಕಾಗಿದೆ ಎಂದರು.

ವರದಶ್ರೀ ಫೌಂಡೇಶನ್‌ ಸಂಸ್ಥಾಪಕ ಮಲ್ಲಿಕಾರ್ಜುನ ರಡ್ಡೇರ ಅವರು ಪಟ್ಟಣದ ಸುತ್ತಮುತ್ತಲಿನ ನದಿಗಳಲ್ಲಿ ಪುಣ್ಯಸ್ನಾನ
ಕೈಗೊಳ್ಳುವ ಜನರಿಗೆ ಕಡಲೆ ಹಿಟ್ಟಿನ 10 ಸಾವಿರ ಪ್ಯಾಕ್‌ಗಳನ್ನು ಉಚಿತವಾಗಿ ಕಳುಹಿಸಿದ್ದಾರೆ ಆದ್ದರಿಂದ ಜನರು ಇದರ ಮಹತ್ವ ಅರಿತು ಎಲ್ಲರಿಗೂ ವಿಷಯುಕ್ತ ಪುಣ್ಯಸ್ನಾನದ ಅರಿವು ಮೂಡಿಸಬೇಕಾಗಿದೆ ಎಂದರು.

Leave a Reply

Your email address will not be published. Required fields are marked *