ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜನ್ಮದಿನಾಚರಣೆ ಅಂಗವಾಗಿ ವಿಶೇಷ ಧ್ಯಾನ, ಪ್ರಾಣಾಯಾಮ ಹಮ್ಮಿಕೊಳ್ಳಲಾಯಿತು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ಸ್ವಾಮಿ ವಿವೇಕಾನಂದರ ಈ ಪವಿತ್ರ ದಿನದಂದು ಅವರನ್ನು ಧ್ಯಾನಿಸಿ ಅವರ ಜಯಂತಿ ಆಚರಿಸುತ್ತಿರುವುದು ನಮ್ಮ ಆತ್ಮ ಉನ್ನತಿಗೆ ಸ್ಪೂರ್ತಿ ಸಿಕ್ಕಂತೆ ಎಂದರು.
ಧ್ಯಾನವನ್ನು ಆಧ್ಯಾತ್ಮಿಕ ಬೆಳವಣಿಗೆ, ಮಾನಸಿಕ ಶಕ್ತಿ ಮತ್ತು ಆತ್ಮಸಾಕ್ಷಾತ್ಕಾರದ ಪ್ರಮುಖ ಸಾಧನವೆಂದು ಪರಿಗಣಿಸಿದರು, ಏಕಾಗ್ರತೆಯೆ ಎಲ್ಲಾ ಜ್ಞಾನದ ಸಾರ ಎಂದು ಹೇಳುತ್ತಾ, ಧ್ಯಾನವು ಏಕಾಗ್ರತೆ ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ಒತ್ತಿಹೇಳಿದರು, ಪಾಶ್ಚಿಮಾತ್ಯ ಜಗತ್ತಿಗೆ ಯೋಗ ಮತ್ತು ಧ್ಯಾನವನ್ನು ಪರಿಚಯಿಸಿ, ಆಂತರಿಕ ಶಾಂತಿ ಮತ್ತು ಸ್ವಯಂ-ಅರಿವಿಗೆ ಧ್ಯಾನ ಮುಖ್ಯವೆಂದು ಬೋಧಿಸಿದರು ಎಂದರು.
ಪಟ್ಟಣದ ಈಶ್ವರಿ ವಿಶ್ವವಿದ್ಯಾಲಯದ ಓಂ ಶಾಂತಿ ಕೇಂದ್ರದ ಮುಖ್ಯಸ್ಥ ಬಿ.ಕೆ ಮಹಾನಂದ ಅಕ್ಕ ಅವರು ಎಲ್ಲರಿಗೂ ಧ್ಯಾನ ಮಾಡಿಸಿ ಅದರ ಮಹತ್ವವನ್ನು ಹೇಳಿದ ಅವರು, ಸ್ವಾಮಿ ವಿವೇಕಾನಂದರ ಪ್ರಕಾರ, ಧ್ಯಾನ ಕೇವಲ ಅಭ್ಯಾಸವಲ್ಲ, ಅದು ಒಂದು ಜೀವನ ವಿಧಾನ. ನಿಯಮಿತ ಧ್ಯಾನದಿಂದ ಏಕಾಗ್ರತೆ ಮತ್ತು ಸಾವಧಾನತೆ ಹೆಚ್ಚಾಗುತ್ತದೆ, ಇದು ಆಳವಾದ ಆಧ್ಯಾತ್ಮಿಕ ಅರಿವು ಮೂಡಿಸುತ್ತದೆ. ತಮ್ಮ ಅನುಯಾಯಿಗಳಿಗೆ ನಿರಂತರವಾಗಿ ಧ್ಯಾನ ಮಾಡಲು ಪ್ರೋತ್ಸಾಹಿಸಿ ಸಹಸ್ರಾರು ಜನರ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಮುಖಂಡರಾದ ಶರಣಗೌಡ ಚಾಮನೂರ, ಭೀಮರಾವ ದೊರೆ, ಆರ್ಜನ ಕಾಳೆಕರ್, ಕಿಶನ ಜಾಧವ, ವಿಶ್ವರಾಧ್ಯ ತಳವಾರ, ಪ್ರಕಾಶ ಪವಾರ, ಸುಭಾಷ ಬಳಚಡ್ಡಿ, ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ, ಉಮಾಭಾಯಿ ಗೌಳಿ ಸೇರಿದಂತೆ ಅನೇಕರು ಇದ್ದರು.