ಮನವಿ ಪತ್ರ
ಇವರಿಗೆ ದಿ- 6-1-2026
ಮಾನ್ಯ ಲೋಕಸಭಾ ಸಂಸದರು
ಉಡುಪಿ- ಚಿಕ್ಕಮಗಳೂರು
ಕ್ಷೇತ್ರ.
ನಾಗಾವಿ ಪುರಾತತ್ವ ಸ್ಥಳವನ್ನು ಪ್ರೇಕ್ಷಣಾ ಸ್ಮಾರಕವೆಂದು ಘೋಷಿಸಲು ಮತ್ತು ನಾಗಾವಿ ವಿಶ್ವವಿದ್ಯಾಲಯ ಪುನಃ ಸ್ಥಾಪಿಸಲು ಮನವಿ
ಚಿತ್ತಾಪುರ: ಗೆಜೆಟ್’ನಲ್ಲಿ ಕೇವಲ ಮಸಿದಿ ಎಂದು ನಮೂದಿಸಿರುವ ಶಬ್ದವನ್ನು ಮರುಪರಿಶೀಲನೆ ಮಾಡಿ ನಾಗಾವಿಯನ್ನು ಭಾರತೀಯ ಪುರಾತತ್ವ ಪ್ರೇಕ್ಷಣಾ ಸ್ಮಾರಕವೆಂದು ಘೋಷಿಸಬೇಕು ಮತ್ತು ನಳಂದ ಕಾಲದ ನಾಗಾವಿ ವಿಶ್ವವಿದ್ಯಾಲಯವನ್ನು ಪುನಃ
ನಾಗಾವಿ ಎಂಬುವುದು ರಾಷ್ಟ್ರಕೂಟರ ಕಾಲದಿಂದಲೂ ಒಂದು ಪ್ರಾಚೀನ ಘಟಿಕಾಲಯವಾಗಿತ್ತು. (ವಿಶ್ವವಿದ್ಯಾಲಯ) ನಾಗಾವಿ ಕಾಲಕ್ರಮೇಣ ದಕ್ಷಿಣ ಭಾರತದಲ್ಲೆ ವಸತಿಸಹಿತ ಕಲಿಕಾ ಕೇಂದ್ರವಾಗಿ ವಾಸ್ತುಶಿಲ್ಪ ಕಲೆ ಸಾಹಿತ್ಯಕ್ಕೆ ಹೆಸರುವಾಸಿಯಾಗಿತ್ತು. ಕಾಲಕ್ರಮೇಣ ದಾಳಿಗೆ ಹೋಳಗಾಗಿ ಪ್ರಸ್ತುತ ಅಳಿವಿನ ಅಂಚಿನಲ್ಲಿದೆ.ಸ್ವಾತಂತ್ರ ಭಾರತದಲ್ಲಿ ಯಾವುದೆ ರೀತಿಯ ಸೂಕ್ತ ರೀತಿಯ ಅಧ್ಯಯನ ನಡೆದಿಲ್ಲ, ಆದ ಕಾರಣ
ನಾಗಾವಿ ಕ್ಷೇತ್ರಾ ಹಿತರಕ್ಷಣಾ ವೇದಿಕೆ ಮತ್ತು ಸಮಸ್ತ ಚಿತ್ರಾಪೂರ ನಾಗರಿಕರಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೆಂದರೆ, ಪುಸ್ತುತ ನಡೆಯುತ್ತಿರುವ ಕಾಮಗಾರಿಯನ್ನು ಪ್ರಾಚ್ಯವಸ್ತು ಇಲಾಖೆಯೆ ಲಿಖಿತ ಬರಹದಲ್ಲಿ ಕೊಟ್ಟಿರುವಂತೆ ಯಾವುದೇ ಸತ್ಯಶೋಧನೆ, ಉತ್ಪನನ ಪರಿಶೀಲನೆ ಹಾಗೂ ಸಂಶೋಧನೆಗಳಿಲ್ಲದೆ ಒಂದು ನರ‍್ದಿಷ್ಟ ಸ್ಥಳವನ್ನು ಖಾಲಿ ಮಸೀದಿ ಎಂದು ಕಾಮಗಾರಿಯನ್ನು ನಡೆಸಲಾಗುತ್ತಿದೆ.
ಆದರೆ ನವೀಕರಣ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಈಗಾಗಲೇ ಎಳು ಹೆಡೆಯ ರ‍್ವ, (ನಾಗಮರ‍್ತಿ) ತ್ರಿಶೂಲ, ಕಮಲ, ಹೆಬ್ಬಾಗಿಲಿಗೆ ಗಜಲಕ್ಷ್ಮಿಯ ಕೆತ್ತನೆಗಳನ್ನು ಒಳಗೊಂಡಂತೆ ಇನ್ನೂ ಅನೇಕ ಹಿಂದೂ-ಸನಾತನ ರ‍್ಮದ ಕುರುಹುಗಳು ಪತ್ತೆಯಾಗಿವೆ.
ಅಷ್ಟು ಮಾತ್ರವಲ್ಲದೇ, ಸ್ಥಳ ಪುರಾಣ ಮತ್ತು ಐತಿಹಾಸಿಕ ದಾಖಲೆಗಳ ಪ್ರಕಾರ ನಾಗರಾಜನನ್ನು ಗರುಡನ ವೇಷದಲ್ಲಿದ್ದ ರಾಕ್ಷಸನು ಎತ್ತಿಕೊಂಡು ಹೋಗುವಾಗ ಆ ನಾಗರಾಜನ ರಕ್ಷಣೆಗಾಗಿ ದೇವಿ ಯಲ್ಲಮ್ಮಳು ಅವತಾರ ಎತ್ತಿ ನಂತರ ಕಾಳಿಯಾಗಿ ಆ ಗರುಡ ವೇಷದಲ್ಲಿದ್ದ ರಾಕ್ಷಸನನ್ನು ಕೊಂದಳು. ಈ ಘೋರ ಕಾಳಗ ನಡೆದ್ದದ್ದು ಇದೇ ನಾಗಾವಿ ಕ್ಷೇತ್ರದಲ್ಲಿ ಈ ಕದನದಲ್ಲಿ ಕಾಳಿ ರೂಪ ತಾಳಿದ ತಾಯಿ ಯಲ್ಲಮ್ಮಳನ್ನು ಅನುಸರಿಸಿದ್ದು, ಶಿವನ ವಾಹನ ನಂದಿ. ಆದ್ದರಿಂದಲೇ ಇಂದಿಗೂ ಸಹ ನಂದಿ ಭಾವಿಯ ಪಕ್ಕದಲ್ಲಿ ನಂದಿ ವಿಗ್ರಹ ಮತ್ತು ಉತ್ಪನನ ನಡೆಯುತ್ತಿರುವ ಸ್ಥಳದಲ್ಲಿರುವ ಕಾಳಿ ಮಾತೆಯ ಮಂದಿರ ಸ್ಥಾಪಿತವಾಗಿದೆ. ಈ ಹಿನ್ನೆಲೆಯಲ್ಲಿ ಅವತಾರ ತಾಳಿದ ಸ್ಥಳವನ್ನು ನಾಗಾವಿ ಕ್ಷೇತ್ರ ಎಂತಲೂ ಕರೆಯುತ್ತಾರೆ.
ಇಂತಹ ಅಮೋಘ ಹಿನ್ನೆಲೆಯುಳ್ಳ ಕ್ಷೇತ್ರ ಮತ್ತು ದೇವಿಯನ್ನು ಅಂದಿನ ರಾಷ್ಟ್ರಕೂಟ ಹಾಗೂ ಕಲ್ಯಾಣಿಯ ಚಾಲುಕ್ಯ ಅರಸು ವಂಶದವರು ಕುಲದೇವಿಯನ್ನಾಗಿ ಹೊಂದಿ ಅನೇಕ ಅಭಿವೃದ್ಧಿ ಕರ‍್ಯಗಳನ್ನು ಕೈಗೊಳ್ಳುವುದರ ಜೊತೆಗೆ, ಪುಣ್ಯ ಕ್ಷೇತ್ರವಾದ್ದರಿಂದಲೇ ಅದನ್ನು ವಿಶ್ವವಿದ್ಯಾಲಯವನ್ನಾಗಿ ಅಭಿವೃದ್ಧಿ ಪಡಿಸಿದರು. ಈ ಹಿನ್ನೆಲೆಯುಳ್ಳ ಸ್ಥಳದಲ್ಲಿ ದೊರಕುತ್ತಿರುವ ಕುರುಹುಗಳು ಮತ್ತು ಸ್ಥಳ ಮಹಾತ್ಮಯ ಹಿನ್ನೆಲೆಗಳು ಒಂದಕ್ಕೊಂದು ಪೂರಕವಾಗಿವೆ.
ಈ ಸ್ಥಳವು ಯಾವುದೇ ಕಾಲದಲ್ಲಿ ಅನ್ಯರ ವಶದಲ್ಲಿ ಇರುವುದಕ್ಕೆ ಇಂದಿನತನಕ ದಾಖಲೆಗಳು ಅಥವಾ ಕುರುಹುಗಳು ಇರುವುದಿಲ್ಲ. ಯಾವುದೇ ಸೂಕ್ತ ದಾಖಲೆಗಳು ಇಲ್ಲದೇ ಅಥವಾ ಸೂಕ್ತ ಉತ್ಪನನ ನಡೆಸದೇ ಗೆಜೆಟ್ ನಲ್ಲಿ ಖಾಲಿ ಮಸೀದಿ ಎಂದು ನಮೂದಿಸಿ, ಅಭಿವೃದ್ಧಿ ಕರ‍್ಯ ನಡೆಸುತ್ತಿದ್ದು ಕೇವಲ ಶಿಕ್ಷಣ ಪ್ರೇಮಿಗಳಿಗಲ್ಲದೆ ಚಿತ್ರಾಪೂರ ತಾಲೂಕಿನ ಸಮಸ್ತ ನಾಗಾವಿ ಯಲ್ಲಮ್ಮ ದೇವಸ್ಥಾನದ ಸದ್ಭಕ್ತರಿಗೆ ಮಾತ್ರವಲ್ಲದೇ ಇಡಿ ರ‍್ನಾಟಕ ಮತ್ತು ಹೊರ ರಾಜ್ಯದ ದೇವಿ ಭಕ್ತರ ಭಾವನೆಗಳಿಗೆ ಘಾಸಿಯಾಗಿದೆ.
ಆದ್ದರಿಂದ ಈ ಕೂಡಲೇ ಗೆಜೆಟ್ ಅಧಿಸೂಚನೆಯಲ್ಲಿ ನಮೂದಿಸಿರುವ ಮಸೀದಿ ಎಂಬ ಶಬ್ದವನ್ನು ಮರುಪರಿಶೀಲನೆ ಮಾಡಿ, ಹೊಸ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಅಲ್ಲಿ ದೊರಕಿರುವ ಕುರುಹುಗಳನ್ನು ಅಲ್ಲಿಯೇ ರಕ್ಷಿಸಬೇಕು. ನಾಗಾವಿಯನ್ನು ಭಾರತೀಯ ಪುರಾತತ್ವ ರ‍್ವೇಕ್ಷಣಾ ಸ್ಮಾರಕವೆಂದು ಘೋಷಿಸಿ ಸ್ಥಳಿಯರನ್ನೊಳಗೊಂಡ ಸತ್ಯಶೋಧನಾ ಸಮೀತಿ ರಚಿಸಿ,ಪರ‍್ಣ ಪ್ರಮಾಣದಲ್ಲಿ ವೈಜ್ಞಾನಿಕವಾಗಿ ಉತ್ಪನನ ಸಂಶೋದನೆ ಕೈಗೊಳ್ಳಬೇಕು, ಅಲ್ಲದೆ ನಳಂದದಂತೆ ನಾಗಾವಿ ವಿಶ್ವವಿದ್ಯಾಲಯವನ್ನು ಮರು ಸ್ಥಾಪನೆಗೊಳಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೇಳಿಕೊಳ್ಳುತ್ತೇವೆ.
ಧನ್ಯವಾದಗಳೊಂದಿಗೆ,
ಇಂತಿ ತಮ್ಮ ವಿಶ್ವಾಸಿ.
ನಾಗಾವಿ ಸ್ಮಾರಕವನ್ನು ರಾಷ್ಟ್ರೀಯ ಪಾರಂಪರಿಕ ತಾಣವನ್ನಾಗಿ ಘೋಷಿಸಲು ಮನವಿ
ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಐತಿಹಾಸಿಕ, ಪೌರಾಣಿಕ ಹಾಗೂ ಸಾಂಸ್ಕೃತಿಕ ಮಹತ್ವವುಳ್ಳ ನಾಗಾವಿ ಕ್ಷೇತ್ರವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧೀನದ ರಾಷ್ಟ್ರೀಯ ಪಾರಂಪರಿಕ ತಾಣವೆಂದು
ಘೋಷಿಸಿ. ಸಂಪೂರ್ಣ ಪ್ರಮಾಣದ ವೈಜ್ಞಾನಿಕ ಉತ್ಪನನ ಹಾಗೂ ಸಂಶೋಧನೆ ಕೈಗೊಳ್ಳಬೇಕು. ಜೊತೆಗೆ ಪ್ರಾಚೀನ
ಕಾಲದ ಪ್ರಸಿದ್ಧ ಘಟಿಕಾಲಯವಾಗಿದ್ದ ನಾಗಾವಿ ವಿಶ್ವವಿದ್ಯಾಲಯವನ್ನು ನಳಂದಾ ಮಾದರಿಯಲ್ಲಿ ಪುನಃ ಸ್ಥಾಪಿಸಬೇಕು ಎಂದು ನಾಗಾವಿ ಕ್ಷೇತ್ರ ಹಿತರಕ್ಷಣಾ ವೇದಿಕೆ
ಹಾಗೂ ಸಮಸ್ತ ಚಿತ್ತಾಪುರ ನಾಗರಿಕರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಪೂಜಾರಿ ಅವರ ಗಮನಕ್ಕಾಗಿ ಮನವಿ ಸಲ್ಲಿಸಿದ್ದಾರೆ.
ಕ್ಷೇತ್ರವು ರಾಷ್ಟ್ರಕೂಟರ ಕಾಲದಿಂದಲೂ ಪ್ರಸಿದ್ಧ ಶಿಕ್ಷಣ, ಸಂಸ್ಕೃತಿ ಮತ್ತು ಧಾರ್ಮಿಕ ಕೇಂದ್ರವಾಗಿದ್ದು, ದಕ್ಷಿಣ
ಭಾರತದ ಪ್ರಮುಖ ವಸತಿ ಸಹಿತ ಕಲಿಕಾ ಕೇಂದ್ರವಾಗಿ ವಾಸ್ತುಶಿಲ್ಪ, ಶಿಲ್ಪಕಲೆ ಮತ್ತು ಸಾಹಿತ್ಯಕ್ಕೆ ಖ್ಯಾತಿ ಪಡೆದಿತ್ತು. ಕಾಲಕ್ರಮೇಣ ಆಕ್ರಮಣಗಳು ಹಾಗೂ ನಿರ್ಲಕ್ಷ್ಯದಿಂದಾಗಿ 1
ಈ ಮಹತ್ವದ ಕೇಂದ್ರವು ಇಂದು ಅಳಿವಿನ
ಅಂಚಿಗೆ ತಲುಪಿದೆ. ಸ್ವಾತಂತ್ರ್ಯಾ ನಂತರ ಇಷ್ಟೊಂದು ಐತಿಹಾಸಿಕ ಹಿನ್ನೆಲೆಯುಳ್ಳ $ ಕ್ಷೇತ್ರದ ಕುರಿತು ಯಾವುದೇ ಸಮಗ್ರ, ವೈಜ್ಞಾನಿಕ ಅಧ್ಯಯನ ಅಥವಾ ಉತ್ಪನನ
ತಿ ನಡೆಯದೇ ಇರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ನಾಗಾವಿ ಕ್ಷೇತ್ರದಲ್ಲಿ ನಡೆಯುತ್ತಿರುವ ನವೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾಚ್ಯವಸ್ತು
ಇಲಾಖೆಯ ಲಿಖಿತ ಸೂಚನೆಗಳಿದ್ದರೂ ಸಹ, ಸೂಕ್ತ ಸತ್ಯಶೋಧನೆ, ಉತ್ಪನನ ಮತ್ತು ಸಂಶೋಧನೆ ಇಲ್ಲದೇ ಕೈಗೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪವನ್ನು
ಮನವಿದಾರರು ಮಾಡಿದ್ದಾರೆ. ಗೆಜೆಟ್ ಅಧಿಸೂಚನೆಯಲ್ಲಿ ಖಾಲಿ ಮಸೀದಿ ಎಂದು ನಮೂದಿಸಿ ಕಾಮಗಾರಿ ನಡೆಸಲಾಗುತ್ತಿದ್ದು, ಇದಕ್ಕೆ ಯಾವುದೇ ದೃಢವಾದ ಐತಿಹಾಸಿಕ ದಾಖಲೆಗಳು ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಅವರು ಆದರೆ ನವೀಕರಣ ನಡೆಯುತ್ತಿರುವ ಸ್ಥಳದಲ್ಲೇ ಈಗಾಗಲೇ ಏಳು ಹೆಡೆಯ ಸರ್ಪ (ನಾಗಮೂರ್ತಿ), ತಿಶೂಲ, ಕಮಲ ಚಿಹ್ನೆಗಳು, ಹೆಬ್ಬಾಗಿಲಿನ ಮೇಲೆ ಗಜಲಕ್ಷ್ಮಿ ಕಿತ್ತನೆ ಸೇರಿದಂತೆ ಅನೇಕ ಹಿಂದೂ ಸನಾತನೆ ಧರ್ಮಕ್ಕೆ ಸಂಬಂಧಿಸಿದ ಅಪರೂಪದ ಪುರಾತನ ಕುರುಹುಗಳು ಪತ್ತೆಯಾಗಿವೆ. ಇವುಗಳು ಈ ಸ್ಥಳದ ಧಾರ್ಮಿಕ ಮತ್ತು
ಸಾಂಸ್ಕೃತಿಕ ಮಹತ್ವವನ್ನು ದೃಢಪಡಿಸುತ್ತವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಜೊತೆಗೆ ಸ್ಥಳದಲ್ಲಿರುವ ಪುರಾತನ ಕುರುಹುಗಳನ್ನು అయ ಸಂರಕ್ಷಿಸಿ, ನಾಗಾವಿಯನ್ನು ಭಾರತೀಯ ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕವೆಂದು ಘೋಷಿಸಬೇಕು. ಪ್ರದೇಶವನ್ನು ಸಾಂಸ್ಕೃತಿಕ ಮತ್ತು ಪ್ರವಾಸೋದ್ಯಮದ ಕೇಂದ್ರವನ್ನಾಗಿ
ಅಭಿವೃದ್ಧಿಪಡಿಸಬೇಕೆಂದು ಮನವಿದಾರರು
ಸಂಸದರನ್ನು ಒತ್ತಾಯಿಸಿದ್ದಾರೆ.
ಇದೆ ಸಂದರ್ಭದಲ್ಲಿ, ಬಿಜೆಪಿ ತಾಲೂಕಾಧ್ಯಕ್ಷರಾದ ರವೀಂದ್ರ ಸಜ್ಜನಶೆಟ್ಟಿ, ಮಲ್ಲಿಕಾರ್ಜುನ ನರಜೋಳ, ಅಶ್ವದಾದ
ರಾಠೋಡ, ಮೇಘರಾಜ ಗುತ್ತೇದಾರ, ಶಾಮಣ್ಣ ಡಿ ಮೇಧಾ, ರಾಜು ಕಡ್ಡಿ ಸಂತೋಷ ಆಲ್ಲೂರಕರ ಸೇರಿದಂತೆ ಇತರರು
ಇದ್ದರು.