ಸುದ್ದಿ ಸಂಗ್ರಹ ಕಲಬುರಗಿ
ಸಮಾಜದ ಗುರುಗಳ ಸಾನಿಧ್ಯದಲ್ಲಿ ನಡೆದಂತ ಕೋಲಿ ಕಬ್ಬಲಿಗ ಎಸ್’ಟಿ ಸೇರ್ಪಡೆಗೆ ನಡೆದ ಸ್ವಾಭಿಮಾನ ಬೃಹತ್ ಪ್ರತಿಭಟನೆಯಲ್ಲಿ ಜಿಲ್ಲೆ, ತಾಲೂಕು ಮತ್ತು ಪ್ರತಿಯೊಂದು ಹಳ್ಳಿಗಳಿಂದ ಆಗಮಿಸಿದ ಸಮಾಜ ಬಾಂಧವರು ಯಾವುದೆ ಭೇದ-ಭಾವ, ನಾನು-ನೀನು ಎನ್ನದೆ ಸಮಾಜದ ಸ್ವಾಭಿಮಾನದಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಭಿಮಾನದ ಸಿಂಹ ದಿವಂಗತ ವಿಠ್ಠಲ ಹೇರೂರು ಅವರ ಕನಸನ್ನು ನನಸು ಮಾಡಲು ಸಮಯ ಲೆಕ್ಕಿಸದೆ ಸ್ವ-ಇಚ್ಛೆಯಿಂದ ಆಗಮಿಸಿ ಕಲಬುರಗಿ ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸುವಂತೆ ಮಾಡಿದ ಸಮಾಜ ಬಾಂಧವರಿಗೆ ಚಿತ್ತಾಪುರ ತಾಲೂಕ ಯುವ ಕೋಲಿ ಸಮಾಜದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ಸಲ್ಲಿಸುತ್ನೆನೆ ಎಂದು ತಾಲೂಕ ಯುವ ಕೋಲಿ ಸಮಾಜ ಅಧ್ಯಕ್ಷ ರಾಜೇಶ್ ಕೋಳಿಕಟ್ಟಿ ಹೇಳಿದ್ದಾರೆ.