ಸುದ್ದಿ ಸಂಗ್ರಹ ಶಹಾಬಾದ
ನಗರದ ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದಲ್ಲಿ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ’ ಕಾರ್ಯಕ್ರಮದಲ್ಲಿ 1997-98ನೇ ಸಾಲಿನ ವಿದ್ಯಾರ್ಥಿಗಳು ಶಾಲೆಗೆ 3 ಕಂಪ್ಯೂಟರ್’ಗಳು ಕೊಡುಗೆಯಾಗಿ ನೀಡಿದರು.
ಕೊಡುಗೆ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಭೀಮಾಶಂಕರ ಮುತ್ತಟ್ಟಿ, ಹಳೆಯ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನದ ನಡುವೆ ಶಾಲೆಯನ್ನು ನೆನಪಿಸಿಕೊಂಡು, ಹಳೆಯ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣಕ್ಕೆ ನೆರವಾಗುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಥೆಯು ಇಂದು ಹೆಮ್ಮರವಾಗಿ ಬೆಳೆಯಲು ಇಂತಹ ವಿದ್ಯಾರ್ಥಿಗಳ ಪ್ರೇರಣೆಯೆ ಕಾರಣ ಎಂದರು.
ಸಂಸ್ಥೆಯ ಸದಸ್ಯ ಶಿವಕುಮಾರ ಇಂಗಶೆಟ್ಟಿ ಕಾರ್ಯುಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಿನ ಸಂಬಂಧ ಅನನ್ಯವಾದದ್ದು ಎಂದರು.
ನೆನಪುಗಳ ಬುತ್ತಿ ಬಿಚ್ಚಿದ ಹಳೆಯ ವಿದ್ಯಾರ್ಥಿಗಳು
ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲಾ ದಿನಗಳ ನೆನಪುಗಳು ಹಂಚಿಕೊಳ್ಳುತ್ತಾ ಭಾವುಕರಾದರು. “ಇಂದು ನಾವು ಸಮಾಜದಲ್ಲಿ ಗೌರವಯುತ ಸ್ಥಾನದಲ್ಲಿದ್ದೆವೆ ಎಂದರೆ ಅದಕ್ಕೆ ನಮ್ಮ ಶಿಕ್ಷಕರು ಅಂದು ಹಾಕಿಕೊಟ್ಟ ಶಿಸ್ತಿನ ಬುನಾದಿಯೆ ಕಾರಣ. ಅಂದು ನಾವು ತಲೆತಗ್ಗಿಸಿ ಕಲಿತ ಪಾಠಗಳು ಇಂದು ನಾವು ತಲೆ ಎತ್ತಿ ಬದುಕುವಂತೆ ಮಾಡಿವೆ” ಎಂದು ಹಳೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
27 ವರ್ಷಗಳ ನಂತರ ಶಾಲೆಗೆ ಭೇಟಿಯಾದ ಸಹಪಾಠಿಗಳು ಒಬ್ಬರಿಗೊಬ್ಬರು ಅಪ್ಪಿಕೊಂಡು, ಶಾಲೆಯ ಆಟದ ಮೈದಾನ, ತರಗತಿಯ ತುಂಟಾಟಗಳು ಹಾಗೂ ಶಿಕ್ಷಕರು ಪ್ರೀತಿಯಿಂದ ಗದರಿದ್ದು ನೆನೆದು ನಗೆಗಡಲಲ್ಲಿ ತೇಲಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಶಿರಹಟ್ಟಿ, ಅತಿಥಿಯಾಗಿ ಬಸವರಾಜ ಹೊಸಕೇರಿ, ದಾನಯ್ಯ, ಸುಮಿತ್ರಾ, ವತ್ಸಲಾ, ಕಾವೇರಿ, ಶಿವಲಿಂಗಮ್ಮ, ಪಾರ್ವತಿ, ತಾರಾಬಾಯಿ, ಇಂದುಮತಿ, ಸುರೇಖಾ ಕುಲಕರ್ಣಿ, ಶ್ರೀದೇವಿ ಪಡಶೆಟ್ಟಿ, ರಾಚಮ್ಮ, ಜಗದೇವಿ, ಶಾರದ, ರಾಜೇಶ್ವರಿ, ಸುಜಾತ, ವಿಜಯಲಕ್ಷ್ಮಿ, ಸುಜಾತ, ಚಂದ್ರಲೇಖಾ, ಸಾಬಮ್ಮ, ಸುಶೀಲಾ, ರೇಣುಕಾ, ಅಂಜನಾ, ಶಿವಕನ್ಯಾ, ಜಗದೇವಿ, ತಮ್ಮಗೆ ಬಾಲ್ಯದಲ್ಲಿ ತಿದ್ದಿ ತಿವಿದ ಶಿಕ್ಷಕಿಯರಿಗೆ ವಿದ್ಯಾರ್ಥಿಗಳು ಸನ್ಮಾನದ ಮೂಲಕ ಗುರುವಂದನೆ ಸಲ್ಲಿಸಿದರು.
ವೇದಿಕೆಯ ಮೇಲೆ ಹಳೆಯ ವಿದ್ಯಾರ್ಥಿಗಳಾದ ವಿನೋದ್ ಬುರಬುರೆ, ಇಬ್ರಾಹಿಂ, ಮಲ್ಲಿಕಾರ್ಜುನ, ಲಕ್ಷ್ಮಿಕಾಂತ್, ಉದಯಕುಮಾರ್, ಆನಂದ ವಾಲಿ, ಪ್ರೀತಮ ಕುಲಕರ್ಣಿ, ಅನಿಲ್ ಹುಗ್ಗಿ, ಅನಿಲ ಕಡಗಂಚಿ ಮಹಿಳಾ ವಿದ್ಯಾರ್ಥಿಗಳ ಪರವಾಗಿ ರಶ್ಮಿ ಇಂಗಿನಶೆಟ್ಟಿ, ಜ್ಯೋತಿ ಬಸವಪಟ್ಟಣ, ಜಯಲಕ್ಷ್ಮಿ, ರೇಖಾ ವಾಲಿ, ಸುಮಂಗಲ, ಭಾಗೀರಥಿ, ಸುಜಾತ, ಗೀತಾ, ಸುನೀತಾ, ಸವಿತಾ, ಮಾಹಾದೇವಿ, ಶರಣಮ್ಮ, ಮನೋಹರ ಬಡಿಗೇರ, ವಿಕಾಸ ಸಾಲಿಮಠ, ಲಕ್ಷ್ಮಿಕಾಂತ, ಗೀತಾ ಕುಲಕರ್ಣಿ ಸೇರಿದಂತೆ 1997-98ನೇ ಸಾಲಿನ ನೂರಾರು ವಿದ್ಯಾರ್ಥಿಗಳು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಇದೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸವಿರುಚಿ ಬೋಜನಕೂಟ ಆಯೋಜಿಸಿ ಎಲ್ಲರೊಂದಿಗೆ ಊಟ ಮಾಡಿದರು.
ಕಾರ್ಯಕ್ರಮದಲ್ಲಿ ಜಯಲಕ್ಷ್ಮಿ, ರೇಖಾ ವಾಲಿ ಸ್ವಾಗತಿಸಿ, ಅತಿಥಿಗಳನ್ನು ಸನ್ಮಾನಿಸಿದರು. ಸಾಹೇಬಗೌಡ ಪಾಟೀಲ್ ನಿರೂಪಿಸಿ ಹಳೆಯ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿದರು.