ಸುದ್ದಿ ಸಂಗ್ರಹ ಶಹಾಬಾದ
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿ ಕ.ರಾ.ಕಾ.ನಿ ಪ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ ಗುರುವಾರ ಘೋಷಿಸಿದರು.
ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಮತದಾರ ಪತ್ರರ್ಕರಿಗೆ ಕೃತಜ್ಞತೆ ಮತ್ತು ಅಭಿನಂದನಾ ಸಮಾರಂಭದಲ್ಲಿ ಕ.ರಾ.ಕಾ.ನಿ.ಪ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ, ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಅವರ ನಿರ್ದೇಶನದ ಮೇರೆಗೆ ತಾಲೂಕ ಪದಾಧಿಕಾರಿಗಳ ಹೆಸರುಗಳು ಘೋಷಿಸಿದರು.
ಕೆ.ರಮೇಶ ಭಟ್ (ಅಧ್ಯಕ್ಷ), ಶಿವಕುಮಾರ ಕುಸಾಳೆ, ನಾಗರಾಜ ದಂಡಾವತಿ (ಉಪಾಧ್ಯಕ್ಷ), ಲೋಹಿತ ಕಟ್ಟಿ (ಪ್ರಧಾನ ಕಾರ್ಯದರ್ಶಿ), ನಿಂಗಣ್ಣ ಜಂಬಗಿ, ದಾಮೋಧರ ಭಟ್( ಕಾರ್ಯದರ್ಶಿ), ಖಾಜಾ ಪಟೇಲ (ಖಜಾಂಚಿ), ಜಿಲ್ಲಾ ಕಾರ್ಯದರ್ಶಿ ವಾಸುದೇವ ಚವ್ಹಾಣ, (ವಿಶೇಷ ಅವ್ಹಾನಿತರು) ಮ.ಮುಸ್ಕಾನ್, ಶ್ರೀಪಾಧ ಭಟ್ (ಕಾರ್ಯಕಾರಿ ಸಮಿತಿ ಸದಸ್ಯರು)ರಾಗಿ ನೇಮಕ ಮಾಡಿರುವದನ್ನು ಘೋಷಿಸಿದರು.
ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ ಶ್ರೀನಿವಾಸಲು, ಕ.ರಾ.ಕಾ.ನಿ.ಪ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ ಹೂವು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರಾದ ದೇವಯ್ಯ ಗುತ್ತೇದಾರ, ಟಿ.ವಿ ಶಿವಾನಂದ, ದೇವೆಂದ್ರಪ್ಪ ಕಪನೂರ, ಭವಾನಿಸಿಂಗ ಠಾಕೂರ, ಭೀಮಾಶಂಕರ ಫಿರೋಜಾಬಾದ್ ಮತ್ತು ಅರುಣ ಕದಂ ಸೇರಿದಂತೆ ಇತರರು ಇದ್ದರು.