ಆರೋಗ್ಯಕರ ಜೀವನ ಶೈಲಿಯಿಂದ ಮಧುಮೇಹ ದೂರ: ಡಾ.ಅನುಪಮಾ ಕೇಶ್ವಾರ

ನಗರದ

ಕಲಬುರಗಿ: ಒತ್ತಡದ ಬದುಕಿನಿಂದ ವಿವಿಧ ರೋಗಗಳು ಉದ್ಬವವಾಗುತ್ತಿವೆ. ಒಂದುಕಾಲದಲ್ಲಿ ಶ್ರೀಮಂತರ ರೋಗವೆಂದು ಕರೆಸಿಕೊಳ್ಳುತ್ತಿದ್ದ ಸಕ್ಕರೆ ಕಾಯಿಲೆ ಇಂದು ವಿವಿಧ ಕಾರಣಗಳಿಂದ ಜನಸಾಮನ್ಯರ ಕಾಯಿಲೆಯಾಗಿದೆ. ಸೂಕ್ತ ಸಮಯಕ್ಕೆ ಆಹಾರ ಸೇವನೆ, ನಿದ್ರೆ, ಸಮತೋಲನ ಆಹಾರ, ಒತ್ತಡಮುಕ್ತಜೀವನ, ಯೋಗ, ಧ್ಯಾನದಂತಹ ಕ್ರಮಗಳಂತಹ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಮಧುಮೇಹದಿಂದ ದೂರವಿರಲು ಸಾಧ್ಯವಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್ ಕೇಶ್ವಾರ ಹೇಳಿದರು.

ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಶುಕ್ರವಾರ ಏರ್ಪಡಿಸಿದ್ದ ‘ವಿಶ್ವ ಮಧುಮೇಹ ನಿವಾರಣೆ ದಿನಾಚರಣೆ’ಯಲ್ಲಿ ಮಾತನಾಡಿದ ಅವರು,
ಇಂದಿನ ಜೀವನಶೈಲಿಯಿಂದ ಹೊರಬರದಿದ್ದರೆ ಮುಂಬರುವ ಕೆಲವೇ ವರ್ಷಗಳಲ್ಲಿ ಭಾರತ ‘ಮಧುಮೇಹಿಗಳ ದೇಶ’ವಾದರೂ ಆಶ್ಚರ್ಯವಿಲ್ಲ. ನಿಯಮಿತ ವ್ಯಾಯಾಮ, ಎಣ್ಣೆಯಲ್ಲಿ ಬೇಯಿಸಿದ ಆಹಾರ ಪದಾರ್ಥಗಳ ಸೇವನೆ, ಸಿಹಿ ತಿಂಡಿ-ತಿನಿಸುಗಳ ಸೇವನೆ ವರ್ಜಿಸುವುದು, ಹೊಟ್ಟಭಾರವೆನಿಸುವ ಹಾಗೆ ಆಹಾರ ಸೇವನೆ ಮಾಡದಿರುವ ದಿನನಿತ್ಯದ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಒತ್ತಡದ ಬದುಕಿನಲ್ಲಿ ಆರೋಗ್ಯದ ಕಡೆಗೆ ಲಕ್ಷ ವಹಿಸದಿರುವದರಿಂದ ಕಾಯಿಲೆಗಳಿಗೆ ನಾವೇ ಆಹ್ವಾನ ನೀಡುವಂತಾಗಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯದಲ್ಲಿ ಏನಾದರೂ ಏರು-ಪೇರಾದರೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ನಾಗೇಶ್ವರಿ ಮುಗಳಿವಾಡಿ, ಮಂಗಲಾ ಚಂದಾಪುರೆ, ಶ್ರೀದೇವಿ, ಸಂಗಮ್ಮ ಅತನೂರ, ರೇಷ್ಮಾ ನಕ್ಕುಂದಿ, ಗಂಗಾಜ್ಯೋತಿ ಗಂಜಿ, ಚಂದಮ್ಮ ಮರಠಾ, ಅರ್ಚನಾ ಸಿಂಗೆ, ಚಂದ್ರಕಲಾ, ಲಕ್ಷ್ಮಿ ಮೈಲಾರಿ, ಆಶಾ ಕಾರ್ಯಕರ್ತೆಯರಾದ ಸಂಗೀತಾ, ಗೌರಮ್ಮ, ನೀತಾ, ಲಕ್ಷ್ಮಿ, ಸುಲೋಚನಾ, ಸಂಗೀತಾ ಡಿ, ಸೇವಕರಾದ ನಾಗಮ್ಮ ಚಿಂಚೋಳಿ, ಸಿದ್ರಾಮ್ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *