ಕಲಬುರಗಿ: ಐದು ವರ್ಷಗಳೊಳಗಿನ ಮಕ್ಕಳಿಗೆ ತಪ್ಪದೆ ಪೋಲಿಯೊ ಹನಿ ಹಾಕಿಸುವ ಮೂಲಕ ಪೋಲಿಯೊ ರೋಗ ಬರದಂತೆ ತಡೆಯುವುದು ಎಲ್ಲರ ಕರ್ತವ್ಯವಾಗಿದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ಸಹಯೋಗದೊಂದಿಗೆ ಜರುಗಿದ ‘ವಿಶ್ವ ಪೋಲಿಯೋ ದಿನಾಚರಣೆ’ಯಲ್ಲಿ ಮಾತನಾಡಿದ ಅವರು, ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರು ಕೂಡಾ ನಮ್ಮ ನೆರೆ-ಹೊರೆ ರಾಷ್ಟ್ರಗಳಲ್ಲಿ ಇನ್ನೂ ಕಂಡುಬರುತ್ತಿರುವುದರಿಂದ ಅದು ವೈರಸ್ ನಮ್ಮ ದೇಶಕ್ಕೆ ತಗುಲಬಾರದೆಂದು ಮುಂಜಾಗ್ರತೆಯಾಗಿ ಪೋಲಿಯೊ ಹನಿ ಹಾಕಲಾಗುತ್ತಿದೆ ಎಂದರು.
ಪೋಲಿಯೊ ಎಂಬುದು ವೈರಾಣುವಿನಿಂದ ಉಂಟಾಗುವ, ಗಂಭೀರ ಸಾಂಕ್ರಾಮಿಕ ಕಾಯಿಲೆಯಾಗಿದೆ. ಮಕ್ಕಳನ್ನು ಕಾಡುವು ಈ ಕಾಯಿಲೆಯು, ಜ್ವರ, ಸುಸ್ತು, ವಾಂತಿ, ತಲೆನೋವು, ಸ್ನಾಯು ಸೆಟೆದುಕೊಳ್ಳುವ ಲಕ್ಷಣಗಳನ್ನು ಹೊಂದಿದೆ. ಪ್ರತಿ 200 ಪ್ರಕರಣಗಳಲ್ಲಿ ಒಂದು ಪ್ರಕರಣವು ಶಾಶ್ವತ ಅಂಗವೈಕಲ್ಯಕ್ಕೆ ಎಡೆಮಾಡಿಕೊಡುವದರಿಂದ ನಿರ್ಲಕ್ಷ ಮಾಡುವುದು ಬೇಡ ಎಂದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಎಚ್.ಬಿ ಪಾಟೀಲ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ನಾಗೇಶ್ವರಿ ಮುಗಳಿವಾಡಿ, ಗಂಗಾಜ್ಯೋತಿ ಗಂಜಿ, ಅರ್ಚನಾ ಸಿಂಗೆ, ರೇಷ್ಮ ನಕ್ಕುಂದಿ, ಲಕ್ಷ್ಮಿ ಮೈಲಾರಿ ಸೇರದಿಂತೆ ಅನೇಕರು ಇದ್ದರು.