ಚಿತ್ತಾಪುರ: ಪ್ರತಿಯೊಬ್ಬ ಮತದಾರರು ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದು ತಾಲೂಕ ದಂಡಾಧಿಕಾರಿ ನೀಲಪ್ರಭಾ ಹೇಳಿದರು.
ಸಮೀಪದ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ದಿ ಸಂಸ್ಥೆಯಲ್ಲಿ ಶಹಾಬಾದ ತಾಲೂಕ ಆಡಳಿತ ವತಿಯಿಂದ ನಡೆದ “ಸ್ವೀಪ್” ಕಾರ್ಯಕ್ರಮದಡಿ ಈಶಾನ್ಯ ಶಿಕ್ಷಕರ ಚುನಾವಣೆ ಅಂಗವಾಗಿ ನಡೆದ ಮತದಾರ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳೇ ಬುನಾದಿ. ಪ್ರತಿಯೊಬ್ಬರು ಚುನಾವಣಾ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ಭಾಗಿಯಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ. ಅರ್ಹತೆ ಇರುವ ಶಿಕ್ಷಕರು ಕಡ್ಡಾಯವಾಗಿ ಈಶಾನ್ಯ ಶಿಕ್ಷಕರ ಚುನಾವಣೆಗೆ ಮತ ಚಲಾಯಿಸಲು ನೋಂದಣಿ ಮಾಡಿಕೊಳ್ಳಿ. ಚುನಾವಣೆ ಘೋಷಣೆಯಾದ ನಂತರ ತಪ್ಪದೆ ಮತ ಚಲಾಯಿಸಿ. ಸಾರ್ವಜನಿಕ ಚುವಾವಣೆಗಳಲ್ಲಿ ಜನಸಾಮಾನ್ಯರಿಗೆ ಮತದಾನದ ಅರಿವು ಮೂಡಿಸುವ ಹಾಗೆ ಶಿಕ್ಷಕರಿಗೂ ಅರಿವು ಮೂಡಿಸಲು ಇಂತಹ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ನೋಂದಣಿಯಲ್ಲಿ ಶಿಕ್ಷಕರ ನಿರಾಸಕ್ತಿ ಎದ್ದು ಕಾಣುತ್ತಿದೆ. ಹೆಚ್ಚು ಹೆಚ್ಚು ನೋಂದಣಿಯಾದಾಗ ಮಾತ್ರ ಉತ್ತಮ ಅಭ್ಯರ್ಥಿ ಆಯ್ಕೆ ಮಾಡಲು ಸಾಧ್ಯ. ಅಂತಹ ನಾಯಕರು ಮಾತ್ರ ನಿಮ್ಮ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದರು.
ತಾಲೂಕ ಸ್ವೀಪ್ ಅಧಿಕಾರಿ ಮಲ್ಲಿನಾಥ ರಾವೂರ ಪ್ರಾಸ್ಥಾವಿಕವಾಗಿ ಮಾತನಾಡಿ, ನವೆಂಬರ್ 6ರ ವರೆಗೆ ಶಿಕ್ಷಕರ ನೋಂದಣಿ ಕಾರ್ಯ ನಡೆಯಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ತಮ್ಮಲ್ಲಿಯೇ ಪ್ರಚಾರ ಮಾಡುವ ಮೂಲಕ ಹೆಚ್ಚಿನ ನೋಂದಣಿಗೆ ಸಹಕರಿಸಬೇಕು. ಹಾಗೆ ತಾಲೂಕಿನ ವಿವಿಡೆದೆ ಮತದಾರರ ಜಾಗೃತಿ ಮುಡಿಸಲು ಹಾಗೂ ಅರ್ಹ ಶಿಕ್ಷಕರು ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನೋಂದಣಿ ಮಾಡಿಕೊಂಡು ತಪ್ಪದೆ ಭಾಗವಹಿಸುವಂತೆ ಮಾಡಲಾಗುತ್ತಿದೆ. ಚುನಾವಣೆಗಳ ಯಶಸ್ವಿ ನಿಮ್ಮ ಸಹಭಾಗಿತ್ವದ ಮೇಲೆ ಅವಲಂಬಿಸಿದೆ ಎಂದರು.
ನಗರಸಭೆ ಪೌರಾಯುಕ್ತ ಡಾ.ಕೆ ಗುರಲಿಂಗಪ್ಪ ಮಾತನಾಡಿದರು.
ವೇದಿಕೆ ಮೇಲೆ ಸಂಸ್ಥೆಯ ಕಾಲೇಜು ವಿಭಾಗದ ಪ್ರಾಚಾರ್ಯ ಕೆ.ಐ ಬಡಿಗೇರ್, ಪ್ರೌಢ ವಿಭಾಗದ ಮುಖ್ಯಗುರು ವಿದ್ಯಾಧರ ಖಂಡಾಳ ಇದ್ದರು.
ಕಾರ್ಯಕ್ರಮದಲ್ಲಿ ಈಶ್ವರಗೌಡ ಪಾಟೀಲ್, ಶಿವಕುಮಾರ್ ಸರಡಗಿ, ಶರಣಬಸಪ್ಪ ಸಜ್ಜನ್, ಸುಗುಣ ಕೊಳಕೂರ, ರಾಧಾ ರಾಠೋಡ, ಭುವನೇಶ್ವರಿ ಎಂ ಗೀತಾ ಜಮಾದಾರ, ರವಿ ಕಣೆಕರ್, ನಾಗರಾಜ ಕುಲಕರ್ಣಿ, ಬಸವರಾಜ ರಾಠೋಡ್, ಬಸಮ್ಮ ಹಡಪದ, ಶೀಲಾ ಪೂಜಾರಿ, ವಿಜಯಲಕ್ಷ್ಮಿ ವಾಡಿ, ಶೀಲಾ, ಮಂಜುಳಾ ನಡುವಿನಕೇರಿ, ಮಂಜುಳಾ ಪಾಟೀಲ್, ಮೈತ್ರಿಯಿ, ಅನೀಲ್ ಮತ್ತು ಪ್ರೌಢ ಶಾಲೆ ಹಾಗೂ ಕಾಲೇಜಿನ ಶಿಕ್ಷಕರು ಉಪನ್ಯಾಸಕರು ಉಪಸ್ಥಿತರಿದ್ದರು.
ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.