ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಆಜಾದ್ ಹಿಂದ್ ಫೌಜ್: ಡಾ.ರಾಜಶೇಖರ ಪಾಟೀಲ

ನಗರದ

ಕಲಬುರಗಿ: ದೇಶಕ್ಕೆ ಸ್ವಾತಂತ್ರ ನೀಡಬೇಕು ಎಂದು ಪ್ರಬಲವಾಗಿ ವಾದಿಸಿದ ನೇತಾಜಿಯವರ ನೇತೃತ್ವದ ಆಜಾದ್ ಹಿಂದ್ ಫೌಜ್, ಬ್ರಿಟಿಷರ ಜೊತೆಗೆ ಹೋರಾಟ ಮಾಡಿತು ಎಂದು ಚಿಂತಕ ಡಾ.ರಾಜಶೇಖರ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಮಂಗಳವಾರ ಸಂಜೆ ಜರುಗಿದ ‘83ನೇ ಆಜಾದ್ ಹಿಂದ್ ಫೌಜ್’ನ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು, ವಿದೇಶಿಗಳಲ್ಲಿ ಬಂದಿತರಾಗಿದ್ದ ಭಾರತೀಯರನ್ನು ನೇತಾಜಿಯವರು ಒಗ್ಗೂಡಿಸಿ, ಬ್ರಿಟಿಷರ ವಿರುದ್ಧ ಹೋರಾಡಲು ಪ್ರೇರಣೆ ನೀಡಿದರು. ದೇಶದ ಸ್ವಾತಂತ್ರಕ್ಕಾಗಿ ನೇತಾಜಿಯವರ ಕೊಡುಗೆ ಅಪಾರವಾಗಿದೆ ಎಂದರು.

ಉಪನ್ಯಾಸಕ ಎಚ್.ಬಿ ಪಾಟೀಲ್ ಮಾತನಾಡಿ, ಭಾರತದ ಮೊದಲ ತಾತ್ಕಾಲಿಕ ಸ್ವತಂತ್ರ ಸರ್ಕಾರವಾದ ‘ಆಜಾದ್ ಹಿಂದ್ ಸರ್ಕಾರ’ ಘೋಷಣೆಯಾದ ದಿನ ಇದಾಗಿದೆ. 1942ರಲ್ಲಿ ಮೋಹನ್ ಸಿಂಗ್ ಅವರಿಂದ ಸ್ಥಾಪಿತವಾದ ‘ಆಜಾದ್ ಹಿಂದ್ ಫೌಜ್’ ಅಥವಾ ‘ಇಂಡಿಯನ್ ನ್ಯಾಷನಲ್ ಆರ್ಮಿ’ (ಐಎನ್​ಎ) ವಿಸರ್ಜನೆಗೊಂಡ ನಂತರ ಸುಭಾಷ್ ಚಂದ್ರ ಬೋಸ್​ರಿಂದ 21 ಅಕ್ಟೋಬರ್ 1943ರಲ್ಲಿ ಮರುಸ್ಥಾಪನೆಗೊಂಡಿತು. ಜಪಾನ್, ಕ್ರೊವೇಷಿಯಾ, ಜರ್ಮನಿ, ಇಟಲಿ, ಬರ್ಮಾ ಸೇರಿದಂತೆ ಹಲವು ದೇಶಗಳು ಈ ಸರ್ಕಾರಕ್ಕೆ ಮಾನ್ಯತೆ ನೀಡಿದ್ದವು. ಸುಭಾಷ್ ಚಂದ್ರ ಬೋಸ್ ಬ್ರಿಟಿಷರೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರದ ಕಾರಣ, ಅವರು ಸ್ವಾತಂತ್ರ‍್ಯ ಚಳುವಳಿಗೆ ಸೇರಿದರು. 1944ರಲ್ಲಿ ಬ್ರಿಟಿಷ್ ಪಡೆಗಳೊಂದಿಗೆ ಕೊಹಿಮಾ ಮತ್ತು ಇಂಫಾಲ್ ಸುತ್ತಮುತ್ತ ಐಎನ್​ಎ ಯುದ್ಧ ನಡೆಸಿತು. ಎರಡನೇ ಮಹಾಯುದ್ಧದ ಸಮಯದಲ್ಲಿ ಜಪಾನ್ ವಿರುದ್ಧ ಬ್ರಿಟನ್ ಸೇನೆ ಕಷ್ಟಪಡುತ್ತಿತ್ತು. ನೇತಾಜಿ ಜಂಟಿ ಸೇನೆಗಳೊಂದಿಗೆ ಮುನ್ನಡೆಸಿದ ಯುದ್ಧವು, ‘ಬ್ರಿಟಿಷ್ ಸೇನೆ ಭಾಗಿಯಾದ ಶ್ರೇಷ್ಠ ಯುದ್ಧಗಳಲ್ಲಿ ಒಂದು’ ಎಂದು ಲಂಡನ್​ನಲ್ಲಿರುವ ರಾಷ್ಟ್ರೀಯ ಸೇನಾ ಸಂಗ್ರಹಾಲಯದ ದಾಖಲೆಗಳು ಹೇಳುತ್ತವೆ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಅಸ್ಲಾಂ ಶೇಖ್, ಶಿವಯೋಗೆಪ್ಪಾ ಎಸ್.ಬಿರಾದಾರ ಸೇರಿದಂತೆ ಅನೇಕರು ಇದ್ದರು.

Leave a Reply

Your email address will not be published. Required fields are marked *