ಪವರ್‌ಸ್ಟಾರ್ ಪುನೀತ್ ರಾಜಕುಮಾರ ಅಗಲಿಕೆಗೆ 4 ವರ್ಷ ತುಂಬುತ್ತಿದೆ. ಇದೆ ವೇಳೆ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಅಪ್ಪು ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಂತ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಹೊಸ ಹೆಜ್ಜೆಯೊಂದನ್ನು ಇಟ್ಟಿದ್ದಾರೆ. ಅಪ್ಪು ಅಪ್ಲಿಕೇಷನ್ ಅನಾವರಣ ಮಾಡಲು ಸಜ್ಜಾಗಿದ್ದಾರೆ. ಅದಕ್ಕೂ ಮೊದಲು ಟ್ರೈಲರ್ ರಿಲೀಸ್ ಮಾಡಲಾಗಿದೆ.
ಪುನೀತ್ ರಾಜಕುಮಾರ ಅವರ ಪ್ರತಿಭೆ, ಸಮಾಜಸೇವೆ, ಮಾನವೀಯ ಮೌಲ್ಯಗಳು, ಅವರ ಜೀವನ, ಸಾಧನೆ ಪ್ರತಿಯೊಬ್ಬರಿಗೂ ತಲುಪಿಸಲು ಮತ್ತು ಸ್ಫೂರ್ತಿ ತುಂಬಲು ಪಿಆರ್‌ಕೆ ಹೆಸರಿನ ಅಪ್ಲಿಕೇಶನ್ ನಿರ್ಮಿಸಲಾಗಿದ್ದು, ಅದನ್ನು ಅ.25 ರಂದು ಬಿಡುಗಡೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇನ್ನೂ ಕೆಲವು ಗಣ್ಯರು ಅಪ್ಲಿಕೇಶನ್ ಬಿಡುಗಡೆ ಮಾಡಲಿದ್ದಾರೆ.
ಅಂದಹಾಗೆ ಅಪ್ಲಿಕೇಶನ್‌ನ ಪ್ರೋಮೊ ಒಂದನ್ನು ಬಿಡುಗಡೆ ಮಾಡಲಾಗಿದ್ದು, ಪ್ರೋಮೊಗೆ ಅಪ್ಪು ಅವರ ಆಪ್ತ ಗೆಳೆಯರು ಆಗಿದ್ದ ಕಿಚ್ಚ ಸುದೀಪ್ ಅವರು ಟ್ರೈಲರ್‌ಗೆ ಧ್ವನಿ ನೀಡಿದ್ದಾರೆ. ಪಿಆರ್‌ಕೆ ಅಪ್ಲಿಕೇಶನ್ ಕೇವಲ ಅಪ್ಪು ಅವರ ಚಿತ್ರ, ವಿಡಿಯೋಗಳನ್ನು ಹೊಂದಿರುವ ಆಪ್ ಅಲ್ಲ. ಇಲ್ಲಿ ಕಂಟೆಂಟ್ ಕ್ರಿಯೇಟರ್‌ಗಳು ಪರಸ್ಪರ ತಮ್ಮ ಕೆಲಸವನ್ನು ಪ್ರದರ್ಶನಕ್ಕೆ ಇಡುವ, ಒಬ್ಬರಿಂದ ಮತ್ತೊಬ್ಬರು ಕಲಿಯುವ ಅವಕಾಶವೂ ಇದೆಯಂತೆ.
ಸದ್ಯ ಟ್ರೈಲರ್ ಮೂಲಕ ಒಂದಷ್ಟು ವಿಷಯಗಳನ್ನ ತಲುಪಿಸಿದೆ ಪಿಆರ್‌ಕೆ. ಇನ್ನು ಅಪ್ಲಿಕೇಷನ್ ಬಿಡುಗಡೆಯಾದ್ಮೇಲೆ ಏನೆಲ್ಲ ಇರಲಿದೆ ಎಂಬ ಸಂಪೂರ್ಣ ಮಾಹಿತಿ ದೊರೆಯಲಿದೆ. ಜಗತ್ತಿನ ಮೊಟ್ಟಮೊದಲ ಫ್ಯಾನ್‌ಡಮ್ ಆ್ಯಪ್ ಇದು ಎಂದು ಹೇಳೋಕೆ ಹೆಮ್ಮೆ ಎನ್ನಿಸುತ್ತೆ.