ಭಜನೆಯಿಂದ ಸಾಮಾಜಿಕ ಸಾಮರಸ್ಯ: ತೆಂಗಳಿ ಶ್ರೀ

ತಾಲೂಕು

ಚಿತ್ತಾಪುರ: ಭಜನೆಯಿಂದ ಸಮಾಜದ ಸಂಘಟನೆಯೊಂದಿಗೆ ಸಾಮಾಜಿಕ ಸಾಮರಸ್ಯ ಮೂಡಿ ಬರುತ್ತದೆ ಎಂದು ತೆಂಗಳಿ- ಮುಂಗಲಗಿಯ ಶಾಂತೇಶ್ವರ ಹಿರೇಮಠದ ಪೀಠಾಧಿಪತಿ ಡಾ.ಶಾಂತಸೋಮನಾಥ ಶಿವಾಚಾರ್ಯರು ಹೇಳಿದರು.

ಸಮೀಪದ ತೆಂಗಳಿ ಗ್ರಾಮದಲ್ಲಿ ಸೀಗಿ ಹುಣ್ಣಿಮೆ ಪ್ರಯುಕ್ತ ಗ್ರಾಮದ ಅಂಬಾಭವಾನಿ ದೇವಸ್ಥಾನದಲ್ಲಿ ಅಂಡಗಿ ಮನೆತನದ ವತಿಯಿಂದ ಅಂಬಾ ಭವಾನಿಗೆ ಉಡಿ ತುಂಬುವ ಕಾರ್ಯಕ್ರಮದ 48ನೇ ವಾರ್ಷಿಕೋತ್ಸವ ಮತ್ತು ನವರಾತ್ರಿಯಲ್ಲಿ 9 ದಿನಗಳ ಪರ್ಯಂತ ಭಜನೆ ಮಾಡಿ ಧಾರ್ಮಿಕ ಸೇವೆ ಸಲ್ಲಿಸಿದ ವಿವಿಧ ಭಜನಾ ಮಂಡಳಿ ಅಧ್ಯಕ್ಷರಿಗೆ ‘ಸೇವಾಶ್ರೀ ಪ್ರಶಸ್ತಿ’ ವಿತರಿಸಿ ಮಾತನಾಡಿದ ಅವರು, ‘ಭಜನೆ’ ಪದದಲ್ಲಿ ‘ಭ’ ಅಂದರೆ ಭಗವಂತ, ‘ಜ’ ಎಂದರೆ ಜನ್ಮಾಂತರಗಳ ಪಾಪನಾಶ ಹಾಗೂ ‘ನೆ’ ಅಂದರೆ ಭಗವಂತನಲ್ಲಿ ನೆಲೆಯಾಗುವುದು ಎಂದರ್ಥ. ಶ್ರದ್ಧಾ ಭಕ್ತಿಯಿಂದ ಭಗವಂತನಿಗೆ ಸಂಪೂರ್ಣ ಶರಣಾದರೆ ಮನಸ್ಸು ಮತ್ತು ದೇಹ ಹಗುರವಾಗುತ್ತದೆ ಎಂದರು.

ಗ್ರಾ.ಪಂ ಮಾಜಿ ಸದಸ್ಯ ವೀರಭದ್ರಯ್ಯ ಸಾಲಿಮಠ ಮಾತನಾಡಿ, ಧಾರ್ಮಿಕ ಹಾಗೂ ಸಾಮಾಜಿಕ ಸೇವಾ ಸಂಸ್ಥೆಯಾದ ಅಂಡಗಿ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ, ಈ ಪ್ರತಿಷ್ಠಾನ ಅನೇಕ ಸಂಘ ಸಂಸ್ಥೆಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಸೇವಾಶ್ರೀ ಪ್ರಶಸ್ತಿಗೆ ಟೆಂಗಳಿ, ಜಂಬಗಿ ಮತ್ತು ತೊನಸನಳ್ಳಿ (ಟಿ) ಗ್ರಾಮದ ವಿವಿಧ ಭಜನಾ ಮಂಡಳಿಯ ಪ್ರಮುಖರಾದ ಅನೀತಾ ಮಠಪತಿ, ಕಾಶಮ್ಮ ಜೋಗದ, ಸುಲಗಮ್ಮ ಕುಡಗುಂಟಿ, ನಾಗಣ್ಣ ಘರ್, ಚಂದ್ರಶೇಖರ ಬಸ್ತೆ, ಶ್ರೀಶೈಲ್ ತಮಣಗೌಡ, ಸಿದ್ದಲಿಂಗ ಜಂಬಗಿ, ಈರಣ್ಣ ಕೇಶ್ವಾರ, ಮಹಾದೇವ ಸ್ವಾಮಿ ಮಠಪತಿ ಇವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಗ್ರಾಮದ ಮುಖಂಡ ಧನಂಜಯ ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ವೇದಿಕೆ ಮೇಲೆ ಗ್ರಾ.ಪಂ ಉಪಾಧ್ಯಕ್ಷ ವಿಜಯಕುಮಾರ ತುಪ್ಪದ, ಪ್ರಮುಖರಾದ ಸಿದ್ರಾಮಪ್ಪ ಅಂಡಗಿ, ಶಿವರಾಜ ಅಂಡಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಚಂದ್ರಶೇಖರ ಮಂಗದ್, ಮಡಿವಾಳಯ್ಯ ಸಾಲಿಮಠ, ಮಲ್ಲಣ್ಣ ಭೇರನ, ವಿಶ್ವನಾಥ ಬಾಳದೆ, ಚಂದ್ರಶೇಖರ ಎಲೇರಿ, ಅರುಣಕುಮಾರ ಕುದರಿಕಾರ, ಬೀರಣ್ಣ ಪೂಜಾರಿ, ವಿನೋದಕುಮಾರ ಜನೇವರಿ, ನಾಗರಾಜ ಹೂಗಾರ, ಮಲ್ಲು ಹೊಸಳ್ಳಿ, ಸಿದ್ದು ಪಾಟೀಲ ಸಾಲಹಳ್ಳಿ, ಶರಣು ನೀಲಹಳ್ಳಿ, ಬಸವರಾಜ ಕಡ್ಲಿ, ಚಂದ್ರಶೇಖರ್ ಕಡ್ಲಿ, ನಾಗರಾಜ, ಶಿವು ಮಠಪತಿ ಮತ್ತು ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

ರೇಖಾ ಅಂಡಗಿ ಪ್ರಾರ್ಥಿಸಿದರು, ವೀರಭದ್ರಪ್ಪ ಬಾಳದೆ ಸ್ವಾಗತಿಸಿದರು, ಚಂದ್ರಶೇಖರ ಎಲೇರಿ ವಂದಿಸಿದರು.

ಕಾರ್ಯಕ್ರಮದ ನಂತರ ಭಜನೆ ಮಾಡುವ ಮೂಲಕ ಜಾಗರಣೆ ಕಾರ್ಯಕ್ರಮ ಜರುಗಿತು.

Leave a Reply

Your email address will not be published. Required fields are marked *