ಬೆಂಗಳೂರು: ನಭೋಮಂಡಲದ ವಿಸ್ಮಯದ ಅದ್ಭುತ ಕಣ್ತುಂಬಿಕೊಳ್ಳಲು ಜನ ತುದಿಗಾಲಲ್ಲಿ ನಿಂತಿದ್ದಾರೆ. ಈಗಷ್ಟೇ ಚಂದ್ರಗ್ರಹಣದ ಪ್ರಕ್ರಿಯೆ ಆರಂಭವಾಗಿಬಿಟ್ಟಿದೆ. ರಾತ್ರಿ 9:57ರಿಂದ ಮಧ್ಯರಾತ್ರಿ 1:26ರ ವರೆಗೆ ಒಟ್ಟು ಮೂರುವರೆ ಗಂಟೆಗಳ ಕಾಲ ನಿಧಾನವಾಗಿ ಗ್ರಹಣ ಸಂಭವಿಸಲಿದೆ.
ಸದ್ಯ ದೇಶದಲ್ಲಿ ಲಡಾಖ್ನಲ್ಲಷ್ಟೇ ಗ್ರಹಣ ಗೋಚರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರು, ತಮಿಳುನಾಡು ಸೇರಿ ನಾಲ್ಕು ಕಡೆಗಳಲ್ಲಿ ಮೋಡ ಕವಿದ ಹಿನ್ನೆಲೆಯಲ್ಲಿ ಚಂದ್ರ ಕಣ್ಮರೆಯಾಗಿದ್ದಾನೆ. ಆಗಾಗ್ಗೆ ಭುವಿಯತ್ತ ಇಣುಕಿ ಮತ್ತೆ ಮೋಡದಲ್ಲಿ ಮರೆಯಾಗುತ್ತಿದ್ದಾನೆ.
ನೆಲಮಂಗಲದಿಂದ ಆಕಾಶದಲ್ಲಿ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ನೆಲಮಂಗಲ ತಾಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ಉಂಗುರ ಆಕಾರದಲ್ಲಿ ಪೂರ್ಣ ಚಂದ್ರ ಕಾಣಿಸಿಕೊಂಡಿದ್ದಾನೆ.