ಸುದ್ದಿ ಸಂಗ್ರಹ ಶಹಾಬಾದ್
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ
ಮಹತ್ವವಾದದ್ದು ಎಂದು ಮುಖ್ಯಗುರು ಸಂಗೀತಾ ದೇವರಮನಿ ಹೇಳಿದರು.
ಪಟ್ಟಣದ ಚವ್ಹಾಣ್ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಅವರು ನಂದಗೋಕುಲ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಕರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿ ಮಾತನಾಡಿದ ಅವರು, ಒಬ್ಬ ಶಿಕ್ಷಕ ಜವಾಬ್ದಾರಿ ಅರಿತು ಕೆಲಸ ಮಾಡಿ ಮಕ್ಕಳ ಭವಿಷ್ಯ ರೂಪಿಸಿದರೆ ಉತ್ತಮ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ಭಾರತೀಯ ಶಿಕ್ಷಣ ವ್ಯವಸ್ಥೆಗೆ ಗುರು-ಶಿಷ್ಯರ ಪರಂಪರೆ
ಭದ್ರ ಅಡಿಪಾಯವಾಗಿದೆ. ಶಿಕ್ಷಕರು ಪಾಠಕ್ಕೆ ಮಾತ್ರ ಸೀಮಿತವಾಗದೆ ಮಕ್ಕಳ ಸರ್ವೋತ್ತಮ ಅಭಿವೃದ್ಧಿ ಮಾಡುವ ಮನೋಧೋರಣೆ ಇರಬೇಕು ಎಂದರು.
ನಂದಗೋಕುಲ ಶಾಲೆಯ ಮುಖ್ಯಗುರು ಸವಿತಾ ಬೆಳಗುಂಪಿ
ಮಾತನಾಡಿ, ವ್ಯಕ್ತಿಯ ಸರ್ವತ್ತೋಮುಖ ಅಭಿವೃದ್ಧಿಗೆ ಶಿಕ್ಷಕರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಶಿಕ್ಷಕರು ರಾಷ್ಟ್ರ
ನಿರ್ಮಾತೃಗಳು. ವಿದ್ಯಾರ್ಥಿಗಳು ರಾಷ್ಟ್ರದ ಶಕ್ತಿ. ಅವರನ್ನು ಶಿಕ್ಷಣದ ಮೂಲಕ ಸಮಾಜಮುಖಿವಾಗಿ ಮಾಡಿ ದೇಶಕ್ಕೆ ಅರ್ಪಿಸುವುದು ಶಿಕ್ಷಕರ ಜವಾಬ್ದಾರಿ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕಿಯರಾದ ಆರತಿ ವೆಂಕಟೇಶ, ಸುಜಾತಾ ಕುಂಬಾರ, ಪಾರ್ವತಿ ಚಟ್ಟಿ, ಚೈತ್ರಾ, ಸಂಜನಾ, ಅಂಬಿಕಾ, ಮಂಜುಳಾ ಮತ್ತು ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.