ಚಿತ್ತಾಪುರ: ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದ ಫಲವಾಗಿ ಜೀವನದಲ್ಲಿ ಸಾಧನೆಯ ಶಿಖರಕ್ಕೆರಲು ಸಾಧ್ಯ ಎಂದು ಕಲಬುರಗಿ ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಶಿವಶರಣಪ್ಪ ಗೌಡಪ್ಪ ಹೇಳಿದರು.
ತಾಲೂಕಿನ ಭಾಗೋಡಿ ಗ್ರಾಮದ ಶಾಂತಲಿಂಗೇಶ್ವರ ಮಠದಲ್ಲಿ ಯುವ ಕೃಷಿ ವೈಭವದ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿ ಸಮಯ ಪ್ರಜ್ಞೆ, ದೈರ್ಯ, ಆತ್ಮವಿಶ್ವಾಸ ಇರಬೇಕು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು
ಮೂಡಿಸುವ ಕೆಲಸ ಮಾಡಬೇಕು, ಶಿಕ್ಷಕರು ಮಾರ್ಗದರ್ಶನ ಮಾಡಬೇಕು ಎಂದರು.
ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ಮಹಾಂತಗೌಡ ಎಸ್ ಪಾಟೀಲ ಮಾತನಾಡಿ, ನಮ್ಮ ತಂದೆ ಶಿವಲಿಂಗಪ್ಪ ಪಾಟೀಲ ಅವರ ಹೆಸರಿನಲ್ಲಿ ಒಂದು ಫೌಂಡೇಶನ್ ಸ್ಥಾಪನೆ ಮಾಡುವ ಮೂಲಕ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಮಾಡಲಾಗುವದು ಎಂದರು.
ಗುರುಮಿಠಕಲ್-ಭಾಗೋಡಿ ಖಾಸಾ ಮಠದ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳು, ಸರ್ಕಾರಿ ಪ್ರೌಢ ಶಾಲೆಯ ಮುಖ್ಯಗುರು ರವೀಂದ್ರ ಶಿಕಾರಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷ ಜಗದೀಶ ಪಾಟೀಲ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಶರಣಗೌಡ ಪಾಟೀಲ, ಪಂಚಾಯತ ಅಭಿವೃದ್ಧಿ ಅಧಿಕಾರಿ ಓಂಕಾರ ಪಸಾರ, ಉದ್ಯಮಿದಾರ- ಪ್ರಗತಿಪರ ರೈತ ಚಿಂತನಪಾಟ ವೆಂಕಟ ನರಸಿಂಹರಾಜು, ಗ್ರಾ.ಪಂ ಸದಸ್ಯರಾದ ಮುತ್ತಣ್ಣ ಶಿರೂರ, ಲೀಲಾವತಿ ಕುದುರಿ, ಜುಲೈಕಾರ ಖಾಜಿ, ಬಸವರಾಜ ಪಾಟೀಲ ದಳಪತಿ, ಬಸವರಾಜ ಮಿಲ್ಟಿ, ರಾಜೇಂದ್ರಪ್ಪ ಅರಣಕಲ್, ಶರಣಬಸಪ್ಪ ಐನಾಪೂರ, ಇಂದುಶೇಖರ ಬೆಂಕಿ, ಸಂತೋಷ ಐನಾಪೂರ, ಸಂದೀಪ್ ಹಾಸಬಾ, ಮಲ್ಲಿಕಾರ್ಜುನ ದೊಡ್ಡಮನಿ, ದೇವಿಂದ್ರ ಅರಣಕಲ್, ಬೋಜು ಶೇರಿ, ಶಿವಯೋಗಿ ಏರಿ, ಈಶು ಕಲಬುರ್ಗಿ, ಮರೇಪ್ಪ ವಕ್ಚರ್, ಶರಣಬಸಪ್ಪ ಬೆಂಕಿ, ಮಹೇಶ್ ಕುದರಿ, ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮವನ್ನು ಪಲ್ಲವಿ, ಭವಾನಿ ಪ್ರಾರ್ಥಿಸಿದರು, ದೇವಿಂದ್ರ ನಾಟೀಕಾರ ಸ್ವಾಗತಿಸಿದರು, ಬಸವರಾಜ ಯಂಬತ್ನಾಳ ನಿರೂಪಿಸಿದರು, ಶಿವುಕುಮಾರ ಕಲಬುರ್ಗಿ ವಂದಿಸಿದರು.