ಪ್ಯಾರಾಸಿಟಮೋಲ್ ಸೇರಿದಂತೆ 15 ಔಷಧಿಗಳಿಗೆ ಆರೋಗ್ಯ ಇಲಾಖೆ ನಿಷೇಧ

ರಾಜ್ಯ

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಕರ್ನಾಟಕ ಆರೋಗ್ಯ ಇಲಾಖೆ ಪ್ಯಾರಾಸಿಟಮೋಲ್ ಸೇರಿದಂತೆ 15 ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ಬಳಕೆಗೆ ನಿರ್ಬಂಧ ಹೇರಿದೆ.

ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಜ್ವರಕ್ಕೆ ಬಳಕೆ ಮಾಡುವ ಪ್ಯಾರಾಸಿಟಮೋಲ್ ಸೇರಿದಂತೆ ಹಲವು ಉತ್ಪನ್ನಗಳಿವೆ. ಅಸುರಕ್ಷಿತ ಉತ್ಪನ್ನಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ ಔಷಧ ಹಾಗೂ ಔಷಧಗಳ ಸ್ಯಾಂಪಲ್ಸ್ ಪಡೆದು ತಪಾಸಣೆ ಮಾಡಲಾಗಿತ್ತು. ತಪಾಸಣೆಯಲ್ಲಿ ಮೈಸೂರು ಕಂಪನಿಯ ಓ ಶಾಂತಿ ಗೋಲ್ಡ್ ಕುಂಕುಮ್ ಸೇರಿದಂತೆ 15 ಕಾಂತಿವರ್ಧಕ ಔಷಧ ಹಾಗೂ ಔಷಧಿಗಳು ಅಸುರಕ್ಷಿತ ಎಂದು ವರದಿ ಬಂದಿದೆ.

ರಾಜ್ಯ, ಹೊರ ರಾಜ್ಯದ ಔಷಧ ತಯಾರಿಕಾ ಕಂಪನಿಗಳು ಈ ಪಟ್ಟಿಯಲ್ಲಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಸುರಕ್ಷಿತ ಔಷಧಿ ಮತ್ತು ಕಾಂತಿವರ್ಧಕಗಳ ಬಳಕೆ ಮತ್ತು ಮಾರಾಟ ಮಾಡದಂತೆ ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಮ್’ನವರು ಈ ಪಟ್ಟಿಯಲ್ಲಿರುವ ಅಸುರಕ್ಷಿತ ಕಾಂತಿವರ್ಧಕಗಳು ಮತ್ತು ಔಷಧಿಗಳ ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಯಾವೆಲ್ಲ ಔಷಧಿಗಳು ಅಸುರಕ್ಷಿತ

  1. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​​ ಇನ್​ಜೆಕ್ಷನ್​ ಐಪಿ – ಮೆ. ಅಲ್ಟ್ರಾ ಲ್ಯಾಬೋರೇಟರಿಸ್​ ಪ್ರೈ. ಲಿಮಿಟೆಡ್​.
  2. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ – ಮೇ. ಟಾಮ್​ ಬ್ರಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  3. ಪೋಮೋಲ್​-650 (ಪ್ಯಾರಾಸಿಟಮೋಲ್​ ಟ್ಯಾಬ್ಲೆಟಸ್​ ಐ.ಪಿ 650 ಎಂಜಿ)- ಮೇ. ಅಬಾನ್​ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್.
  4. ಮಿಟು ಕ್ಯೂ7 ಸಿರಪ್​ – ಮೆ. ಬಯೋನ್​ ಥೆರಾಪ್ಯಾಟಿಕ್ಸ್​ ಇಂಡಿಯಾ ಪ್ರೈ. ಲಿಮಿಟೆಡ್​
  5. ಸ್ಟೈರಲ್​ ಡಿಲ್ಯೈಯಂಟ್​ ಪಾರ್ ರೆಕಾನೋಸ್ಟಿಟಿಶ್ಯೂನ್​ ಆಪ್​ ಎನ್​ಡಿ, ಐಬಿ, ಐಬಿಡಿ ಆಯಂಡ್​ ಕಾಂಬಿನೇಷನ್​ ವ್ಯಾಕ್ಸಿನ್ಸ್​ ಫಾರ್​ ಪೌಲ್ಟ್ರೀ (ವೆಟರ್​ನರಿ) ಮಲ್ಟಿ ಡೋಸ್​ ವಿಲಾ 200 ಎಂಲ್​ – ಮೇ. ಸೇಫ್​ ಪೇರೆಂಟರಲ್ಸ್​ ಪ್ರೈ. ಲಿಮಿಟೆಡ್.
  6. ಸ್ಪಾನ್​ಪ್ಲಾಕ್ಸ್​-ಓಡ್​ ಟ್ಯಾಬ್ಲೆಟ್ಸ್​ (ಓಪ್ಲಾಕ್ಸಸಿನ್​ & ಓರ್ನಿಡಜೋಲ್ ಟ್ಯಾಬ್ಲೆಟ್ಸ್​ ಐಪಿ) – ಮೆ. ಇಂಡೋರಾಮ ಹೇಲ್ತ್​ ಕೇಸ್​ ಪ್ರೈ ಲಿಮಿಟಿಡ್​.
  7. ಪ್ಯಾಂಟೋಕೋಟ್​-ಡಿಎಸ್​ಆರ್​ (ಪ್ಯಾಂಟೋಫ್ರಜೋಲ್​ ಗ್ಯಾಸ್ಟ್ರೋ-ರಿಜಿಸ್ಟೆಂಟ್​ & ಡೋಮ್​ಫೆರಿಡನ್​ ಪ್ರೋಕಾಂಗಡ್​ ರಿಲಿಸ್​​ ಕ್ಯಾಪ್ಸೂಲ್ಸ್​ ಐಪಿ – ಮೇ. ಸ್ವೆಫ್ನೆ ಫಾರ್ಮಾಸ್ಯೂಟಿಕಲ್ಸ್​ ಪ್ರೈ. ಲಿಮಿಟೆಡ್​.
  8. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​
  9. ಸೋಡಿಯಂ ಕ್ಲೋರೈಡ್​ ಇನ್​ಜೆಕ್ಷನ್​ ಐಪಿ 0.9% ಡಬ್ಲ್ಯೂ/ವಿ (ಎನ್​ಎಸ್​) – ಮೆ. ಪುನಿಷ್ಕ ಇನ್​ಜೆಕ್ಟಬಲ್​ ಪ್ರೈ. ಲಿಮಿಟೆಡ್​.
  10. ಅಲ್ಪಾ ಲಿಪೋಯಿಕ್​ ಆಸಿಡ್​, ಪೋಲಿಕ್​ ಆಸಿಡ್​, ಮಿಥೈಲ್​ ಕೋಬಾಲಮಿನ್, ವಿಟಮಿನ್​ ಬಿ6 & ವಿಟಮಿನ್​ ಡಿ3ಟ್ಯಾಬ್ಲೆಟ್ಸ್​ – ಮೇ. ಇಸ್ಟ್​ ಆಪ್ರಿಕನ್​ (ಇಂಡಿಯಾ) ಓವರ್​ಸಿಸ್​.
  11. ಓ ಶಾಂತಿ ಗೋಲ್ಡ್ ಕ್ಲಾಸ್​ ಕುಂಕುಮ್​ – ಮೇ. ಎನ್​. ರಂಗರಾವ್​ & ಸನ್ಸ್​ ಪ್ರೈ ಲಿಮಿಟೆಡ್​.
  12. ಪಿರಾಸಿಡ್​-ಓ ಸಸ್​ಪೆನ್​ಶನ್​ (ಸಲ್ಕ್ರಾಲ್ಫೇಟ್​ & ಆಕ್ಸೆಟಾಕೈನ್​ ಸಸ್​ಪೆನ್​ಶನ್​) – ಮೆ. ರೆಡ್ನಕ್ಸ್ ಫಾರ್ಮಾಸ್ಯೂಟಿಕಲ್ಸ್​ ಪ್ರೈ ಲಿಮಿಟೆಡ್​.
  13. ಗ್ಲಿಮಿಜ್​-2 (ಗ್ಲಿಮಿಫೆರೈಡ್​ ಟ್ಯಾಬ್ಲೆಟ್ಸ್​ ಐಪಿ 2ಎಂಜಿ) – ಮೆ. ಕೆಎನ್​ಎಂ ಫಾರ್ಮಾ ಪ್ರೈ. ಲಿಮಿಟೆಡ್​.
  14. ಐರನ್​ ಸುಕ್ರೋಸ್​ ಇನ್​ಜೆಕ್ಷನ್​ ಯುಎಸ್​ಪಿ 100ಎಂಜಿ (ಐರೋಗೈನ್​) – ಮೆ. ರೀಗೈನ್​ ಲ್ಯಾಬೋರೇಟರಿಸ್​
  15. ಕಂಪೌಂಡ್​ ಸೋಡಿಯಂ ಲ್ಯಾಕ್ಟೆಟ್​ ಇನ್​ಜೆಕ್ಷನ್​ ಐಪಿ (ರಿಂರ್ಗ ಲ್ಯಾಕ್ಟೆಟ್ ಸಲೂಷನ್​ ಪಾರ್​ ಇನ್​ಜೆಕ್ಷನ್​ ಆರ್​ಎಲ್​ – ಮೇ. ಒಟ್ಸುಕಾ ಫಾರ್ಮಾಸ್ಯೂಟಿಕಲ್ಸ್​ ಇಂಡಿಯಾ.

ಈ ಔಷಧಿ ಮತ್ತು ಕಾಂತಿವರ್ಧಕ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್​ಹೋಂನವರು ದಾಸ್ತಾನು ಮಾಡುವುದನ್ನು, ಮಾರಾಟ ಮಾಡುವುದು ಅಥವಾ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಆರೋಗ್ಯ ಸಚಿವರ ಟ್ವೀಟ್
ಈ ವಿಚಾರವಾಗಿ ಸಚಿವ ದಿನೇಶ್ ಗುಂಡೂರಾವ್ ಎಕ್ಸ್ ನಲ್ಲಿ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅವರು, ಕರ್ನಾಟಕದ ಔಷಧ ಪರೀಕ್ಷಾ ಪ್ರಯೋಗಾಲಯವು ಈ ಕೆಳಗಿನ ಔಷಧಗಳು/ಸೌಂದರ್ಯವರ್ಧಕಗಳನ್ನು ಪ್ರಮಾಣೀಕೃತ ಗುಣಮಟ್ಟದಲ್ಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳು ಈ ಉತ್ಪನ್ನಗಳನ್ನು ಸಂಗ್ರಹಿಸುವುದು/ಮಾರಾಟ ಮಾಡುವುದು/ಬಳಸುವುದನ್ನು ತಕ್ಷಣವೆ ನಿಲ್ಲಿಸಬೇಕೆಂದು ನಾನು ಮನವಿ ಮಾಡುತ್ತೆನೆ. ಆಸ್ಪತ್ರೆ, ಔಷಧ ಮಳಿಗೆಗಳಲ್ಲಿ ಯಾವುದೆ ಸಂಗ್ರಹ ಇದ್ದರೆ, ನಿಮ್ಮ ಸ್ಥಳೀಯ ಔಷಧ ನಿರೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರಿಗೆ ತಕ್ಷಣ ತಿಳಿಸಿ.

ನಿಮ್ಮ ಸುರಕ್ಷತೆ ನಮ್ಮ ಆದ್ಯತೆ. ದಯವಿಟ್ಟು ಈ ಮೇಲೆ ಪಟ್ಟಿ ಮಾಡಲಾದ ಬ್ಯಾಚ್‌ನ ಔಷಧಗಳು/ಸೌಂದರ್ಯವರ್ಧಕಗಳನ್ನು ಬಳಸಬೇಡಿ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *