ಆಸ್ತಿಗಾಗಿ ಹೆಣ್ಣುಮಕ್ಕಳ ಗಲಾಟೆ: 4 ಕೋಟಿ ಮೌಲ್ಯದ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿದ ನಿವೃತ್ತ ಸೈನಿಕ

ರಾಷ್ಟೀಯ

ಚೆನ್ನೈ: ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಣಿ ಬಳಿಯ ಪಡವೇಡುವಿನಲ್ಲಿರುವ ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಾಲಯದ ಅಧಿಕಾರಿಗಳಿಗೆ ದೇವಾಲಯದ ಹುಂಡಿಯಿಂದ ಕಾಣಿಕೆಗಳನ್ನು ಎಣಿಸುವಾಗ 4 ಕೋಟಿ ರೂ. ಮೌಲ್ಯದ ಆಸ್ತಿ ದಾಖಲೆಗಳು ಸಿಕ್ಕಿದೆ. ಇದರ ಮೂಲವನ್ನು ಹುಡುಕಿದಾಗ ಅದೆ ಊರಿನ ನಿವೃತ್ತ ಸೈನಿಕರೊಬ್ಬರು ಇಷ್ಟು ದೊಡ್ಡ ಪ್ರಮಾಣದ ಆಸ್ತಿಯನ್ನು ದೇವರಿಗೆ ದಾನ ನೀಡಿದ್ದಾರೆ ಎಂದು ವರದಿಯಾಗಿದೆ

ಜೂನ್ 24 ರಂದು ದೇವಾಲಯದ ಸಿಬ್ಬಂದಿ ಆವರಣದೊಳಗಿನ 11 ಹುಂಡಿಗಳಲ್ಲಿ ಒಂದನ್ನು ತೆರೆದಾಗ, ಅವರಿಗೆ ಮೂಲ ಭೂಮಿ ಮತ್ತು ಮನೆ ಮಾಲೀಕತ್ವದ ದಾಖಲೆಗಳ ಬಂಡಲ್ ಕಂಡುಬಂದಿದೆ, ಜೊತೆಗೆ ಆಸ್ತಿಯನ್ನು ದೇವಾಲಯಕ್ಕೆ ಸ್ವಯಂ ಪ್ರೇರಣೆಯಿಂದ ದಾನ ಮಾಡಲಾಗಿದೆ ಎಂದು ಬರೆದಿರುವ ಕೈಬರಹದ ಟಿಪ್ಪಣಿಯೂ ಸಿಕ್ಕಿದೆ.

ಈ ಆಸ್ತಿ 65 ವರ್ಷದ ನಿವೃತ್ತ ಸೇನಾಧಿಕಾರಿ ಎಸ್. ವಿಜಯನ್ ಅವರಿಗೆ ಸೇರಿದ್ದು ಎಂದು ಪತ್ತೆ ಮಾಡಲಾಗಿದೆ. ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ತಮ್ಮ ಹೆಣ್ಣುಮಕ್ಕಳಿಂದ ಅವಮಾನಕ್ಕೊಳಗಾದ ಬಳಿಕ ಅವರು ಈ ನಿರ್ಧಾರ ಮಾಡಿದ್ದಾರೆ ಎಂದು ವರದಿಯಾಗಿದೆ. ಹೆಣ್ಣುಮಕ್ಕಳ ಕುಹಕದ ಮಾತಿನಿಂದ ನೊಂದ ಅವರು ತಮ್ ಹೆಸರಲ್ಲಿದ್ದ 4 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅರುಲ್ಮಿಗು ರೇಣುಗಾಂಬಲ್ ಅಮ್ಮನ್ ದೇವಸ್ಥಾನಕ್ಕೆ ದಾನ ಮಾಡಿದ್ದಾರೆ.

ತನ್ನ ಹೆಣ್ಣುಮಕ್ಕಳು ಪಿತ್ರಾರ್ಜಿತ ಆಸ್ತಿಗಾಗಿ ಜಗಳವಾಡುತ್ತಿದ್ದರು. ಅಷ್ಟು ಮಾತ್ರವಲ್ಲದೆ ಇದೇ ಕಾರಣಕ್ಕೆ ನನ್ನನ್ನು ಕೂಡ ಕಡೆಗಣಿಸಿದ್ದರು. ನನ್ನ ನೋವನ್ನು ಅವರು ಅರ್ಥ ಮಾಡಿಕೊಳ್ಳದ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವಿಜಯನ್‌ ತಿಳಿಸಿದ್ದಾರೆ. ಇನ್ನೊಂದೆಡೆ ವಿಜಯನ್‌ ಅವರ ಹೆಣ್ಣುಮಕ್ಕಳು ದೇವಸ್ಥಾನದ ಆಡಳಿತ ಮಂಡಳಿಯೊಂದಿಗೆ ಮಾತನಾಡುತ್ತಿದ್ದು, ಆಸ್ತಿ ಪತ್ರವನ್ನು ದೇವಸ್ಥಾನದಿಂದ ವಾಪಾಸ್‌ ಪಡೆದುಕೊಳ್ಳಲು ಪ್ರಯತ್ನಿಸುತ್ತಿದೆ.

ತಮಿಳುನಾಡಿನ ಅರಣಿ ಪಟ್ಟಣದ ಬಳಿಯ ಕೇಶವಪುರಂ ಗ್ರಾಮದ ವಿಜಯನ್, ಎರಡು ಆಸ್ತಿ ಪತ್ರಗಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದರು. ದೇವಸ್ಥಾನದ ಸನಿಹದಲ್ಲೇ ಇರುವ ಜಾಗ ಮೂರು ಕೋಟಿ ರೂಪಾಯಿ ಮೌಲ್ಯದ್ದಾಗಿದ್ದರೆ, ಇನ್ನೊಂದು ಆಸ್ತಿ 1 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಎರಡನ್ನೂ ಕೂಡ ತಮ್ಮ ಕೈಬರಹದ ಪತ್ರದೊಂದಿಗೆ ದೇವಸ್ಥಾನದ ಹುಂಡಿಗೆ ಹಾಕಿದ್ದರು.

“ಇಲ್ಲಿ ಇಂತಹ ಘಟನೆ ನಡೆದಿರುವುದು ಇದೇ ಮೊದಲು” ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ. ಸಿಲಂಬರಸನ್ ಹೇಳಿದರು. ದಾಖಲೆಗಳನ್ನು ದೇಣಿಗೆ ಪೆಟ್ಟಿಗೆಯಲ್ಲಿ ಹಾಕುವುದರಿಂದ ದೇವಾಲಯವು ಸ್ವಯಂಚಾಲಿತವಾಗಿ ಆಸ್ತಿಯನ್ನು ಹೊಂದುತ್ತದೆ ಎಂದು ಅರ್ಥವಲ್ಲ ಎಂದೂ ತಿಳಿಸಿದ್ದಾರೆ. ದೇವಾಲಯವು ಕಾನೂನುಬದ್ಧವಾಗಿ ಅದನ್ನು ಪಡೆಯಲು ಭಕ್ತರು ಇಲಾಖೆಯಲ್ಲಿ ಅಧಿಕೃತವಾಗಿ ದೇಣಿಗೆಯನ್ನು ನೋಂದಾಯಿಸಿಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

ವಿಜಯನ್ ತಮ್ಮ ಬಾಲ್ಯದಿಂದಲೂ ರೇಣುಕಾಂಬ ಅಮ್ಮನವರ ಪರಮ ಭಕ್ತ ಎಂದು ಹೇಳಲಾಗುತ್ತದೆ. ತನಿಖೆಯ ಸಮಯದಲ್ಲಿ, ದೇವಾಲಯದ ಅಧಿಕಾರಿಗಳು ವಿಜಯನ್ ತಮ್ಮ ಪತ್ನಿಯೊಂದಿಗೆ ಭಿನ್ನಾಭಿಪ್ರಾಯದ ನಂತರ ಸುಮಾರು 10 ವರ್ಷಗಳಿಂದ ಒಂಟಿಯಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಅವಧಿಯಲ್ಲಿ ಅವರಿಗೆ ಅವರ ಕುಟುಂಬದಿಂದ ಯಾವುದೇ ಬೆಂಬಲ ಸಿಗಲಿಲ್ಲ. ಇತ್ತೀಚಿನ ತಿಂಗಳುಗಳಲ್ಲಿ, ಅವರ ಹೆಣ್ಣುಮಕ್ಕಳು ಅವರ ಆಸ್ತಿಗಳನ್ನು ತಮಗೆ ನೀಡುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.

ಹುಂಡಿಯಲ್ಲಿ ಕಂಡುಬಂದಿರುವ ಎರಡು ಆಸ್ತಿ ದಾಖಲೆಗಳು ದೇವಾಲಯದ ಬಳಿಯ 10 ಸೆಂಟ್ಸ್ ಭೂಮಿ ಮತ್ತು ಒಂದು ಅಂತಸ್ತಿನ ಮನೆಗೆ ಸಂಬಂಧಿಸಿದ್ದಾಗಿವೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ HR&CE ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅವರು ಏನು ಮಾಡಬೇಕೆಂದು ನಿರ್ಧರಿಸುತ್ತಾರೆ ಎಂದು ಅವರು ಹೇಳಿದರು. ಅಲ್ಲಿಯವರೆಗೆ, ಇಲಾಖೆ ದಾಖಲೆಗಳನ್ನು ಸುರಕ್ಷಿತವಾಗಿಡುತ್ತದೆ.

“ದೇವಾಲಯದ ಅಧಿಕಾರಿಗಳೊಂದಿಗೆ ಮಾತನಾಡಿದ ನಂತರ ಕಾನೂನಿನ ಪ್ರಕಾರ ನನ್ನ ಆಸ್ತಿಯನ್ನು ದೇವಾಲಯದ ಹೆಸರಿಗೆ ಅಧಿಕೃತವಾಗಿ ನೋಂದಾಯಿಸುತ್ತೇನೆ. ನಾನು ನನ್ನ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ. ನನ್ನ ಮಕ್ಕಳು ನನ್ನ ದೈನಂದಿನ ಅಗತ್ಯಗಳಿಗೂ ನನ್ನನ್ನು ಅವಮಾನಿಸಿದರು” ಎಂದು ವಿಜಯನ್‌ ಹೇಳಿದ್ದಾರೆ.

ಆಸ್ತಿಗಾಗಿ ಹೆಣ್ಣುಮಕ್ಕಳ ಗಲಾಟೆ, 4 ಕೋಟಿ ಮೌಲ್ಯದ ಆಸ್ತಿ ದೇವಸ್ಥಾನಕ್ಕೆ ದಾನ ನೀಡಿದ ನಿವೃತ್ತ ಸೈನಿಕ

ನಿವೃತ್ತ ಸೇನಾಧಿಕಾರಿ ಎಸ್ ವಿಜಯನ್ ಅವರು ತಮಗೆ ಸೇರಿದ 4 ಕೋಟಿ ಆಸ್ತಿಯನ್ನು ದೇವಸ್ಥಾನದ ಹುಂಡಿಗೆ ಹಾಕಿದ್ದಾರೆ.

ಹುಂಡಿ ಎಣಿಕೆ ವೇಳೆ ಕಾಗದ ಪತ್ರ ಪತ್ತೆ
ತಮಿಳುನಾಡಿನ ತಿರುವಣ್ಣಾಮಲೈನ ರೇಣುಕಾಂಬಳ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹೇಳಿರುವಂತೆ ವರ್ಷದ ಕೆಲವು ದಿನಗಳಲ್ಲಿ ದೇವಸ್ಥಾನದ ಹುಂಡಿಯನ್ನು ತೆರೆಯಲಾಗುತ್ತದೆ ಜೊತೆಗೆ ಅದರಲ್ಲಿರುವ ಹಣ ಮತ್ತು ಚಿನ್ನ ಬೆಳ್ಳಿಯ ರೂಪದಲ್ಲಿ ಬಂದಿರುವ ವಸ್ತುಗಳನ್ನು ಲೆಕ್ಕ ಮಾಡಲಾಗುತ್ತದೆ ಅದರಂತೆ ಜೂನ್ 24 ರಂದು ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆಸಲಾಗಿತ್ತು ಈ ವೇಳೆ ಹುಂಡಿಯಲ್ಲಿ ಮನೆಗೆ ಸಂಬಂಧಿಸಿದ ಕಾಗದ ಪತ್ರಗಳು ಕಂಡುಬಂದಿದ್ದು ಇದನ್ನು ತೆರೆದು ನೋಡಿದಾಗ ಸುಮಾರು 4 ಕೋಟಿ ಮೌಲ್ಯದ ಆಸ್ತಿ ಸೇರಿದ್ದು ಇದನ್ನು ನೋಡಿದ ದೇವಸ್ಥಾನದ ಆಡಳಿತ ಅಧಿಕಾರಿಗಳು ದಂಗಾಗಿದ್ದಾರೆ.

ದೇವಸ್ಥಾನಕ್ಕೆ ಸೇರಿದ್ದು
ಈ ವಿಚಾರಕ್ಕೆ ಸಂಬಂಧಿಸಿ ದೇವಸ್ಥಾನದ ಆಡಳಿತ ಮಂಡಳಿ ವಿಜಯನ್ ಅವರನ್ನು ಸಂಪರ್ಕಿಸಿ ವಿಚಾರಿಸಿದ ವೇಳೆ ಇದು ದೇವಸ್ಥಾನಕ್ಕೆ ಸೇರಿದ್ದು ನಾನು ಸ್ವ ಇಚ್ಛೆಯಿಂದ ನನ್ನ ಮನೆಯ ಕಾಗದ ಪತ್ರಗಳನ್ನು ದೇವಸ್ಥಾನಕ್ಕೆ ನೀಡುತ್ತಿದ್ದೆನೆ ಅಲ್ಲದೆ ಲಿಖಿತ ರೂಪದಲ್ಲೂ ಆಸ್ತಿಯನ್ನು ದೇವಸ್ಥಾನಕ್ಕೆ ನೀಡಲು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.

ಆಸ್ತಿಗಾಗಿ ಜಗಳ
ವಿಜಯನ್ ಅವರ ಪತ್ನಿ ಕಸ್ತೂರಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಅವರಿಗೆ ಸುಬ್ಬುಲಕ್ಷ್ಮಿ ಮತ್ತು ರಾಜಲಕ್ಷ್ಮಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು ಅವರು ಮದುವೆಯಾಗಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಈ ನಡುವೆ ವಿಜಯನ್ ಮತ್ತು ಪತ್ನಿ ಕಸ್ತೂರಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಕೆಲ ವರುಷಗಳಿಂದ ಬೇರೆ ಬೇರೆಯಾಗಿ ವಾಸವಾಗಿದ್ದಾರೆ. ಜೊತೆಗೆ ಕೆಲವು ತಿಂಗಳ ಹಿಂದೆ ದಂಪತಿಗಳ ನಡುವೆ ಜಗಳ ನಡೆದಿದ್ದು, ಕಸ್ತೂರಿಯವರ ಸಂಬಂಧಿಕರು ವಿಜಯನ್ ಅವರಿಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗಿದೆ. ಇದರಿಂದಾಗಿ ತೀವ್ರ ಸಂಕಷ್ಟದಲ್ಲಿದ್ದ ವಿಜಯನ್, ಕೆಲವು ದಿನಗಳ ಹಿಂದೆ ಪಟವೇಡು ಗ್ರಾಮದಲ್ಲಿರುವ ಶ್ರೀ ರೇಣುಕಾಂಬಳ ದೇವಸ್ಥಾನಕ್ಕೆ ಹೋಗಿ 4 ಕೋಟಿ ಮೌಲ್ಯದ ಆಸ್ತಿ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿ ಬಂದಿದ್ದಾರೆ.

4 ಕೋಟಿ ಮೌಲ್ಯದ 2 ಮನೆಗಳು
ವಿಜಯನ್ ಅವರು ನೀಡಿರುವ ಆಸ್ತಿ ಪತ್ರದಲ್ಲಿ 4 ಕೋಟಿ ಮೌಲ್ಯದ 2 ಮನೆಗಳು ಸೇರಿದ್ದು ಅದರಲ್ಲಿ ಒಂದು ಮನೆ 3 ಕೋಟಿ ಮೌಲ್ಯವನ್ನು ಹೊಂದಿದರೆ, ಇನ್ನೊಂದು ಮನೆ ಒಂದು ಕೋಟಿ ಮೌಲ್ಯ ಹೊಂದಿದೆ ಎಂದು ಹೇಳಲಾಗಿದೆ.

ಸ್ವಂತ ಆಸ್ತಿ
ಆಸ್ತಿ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ ವಿಜಯನ್ ನಾನು ದೇವಸ್ಥಾನಕ್ಕೆ ದಾನ ನೀಡಿದ್ದು ನನ್ನ ಸ್ವಂತ ಆಸ್ತಿಯಷ್ಟೇ ಇದು ಪೂರ್ವ ಜರಿಗೆ ಸೇರಿದ ಆಸ್ತಿಯಲ್ಲ ಇದರ ಸಂಪೂರ್ಣ ಹಕ್ಕು ನನಗೆ ಮಾತ್ರ ಇರುವುದು ಎಂದು ಹೇಳಿದ್ದಾರೆ.

ದೇವಸ್ಥಾನಕ್ಕೆ ಓಡೋಡಿ ಬಂದ ಪತ್ನಿ, ಮಕ್ಕಳು
ಮನೆಯ ಕಾಗದ ಪತ್ರಗಳನ್ನು ದೇವಸ್ಥಾನದ ಹುಂಡಿಗೆ ಹಾಕಿರುವ ವಿಚಾರ ಗೊತ್ತಾಗುತ್ತಿದ್ದಂತೆ ಪತ್ನಿ ಮತ್ತು ಮಕ್ಕಳು ನಮಗೆ ವಿಚಾರ ತಿಳಿಸದೆ ಈ ನಿರ್ಧಾರ ಕೈಗೊಂಡಿದ್ದಾರೆ ದಯವಿಟ್ಟು ನಮ್ಮ ಮನೆಯ ಕಾಗದ ಪತ್ರಗಳನ್ನು ನಮಗೆ ಒಪ್ಪಿಸಿ ಎಂದು ದೇವಸ್ಥಾನದ ಆಡಳಿತ ಮಂಡಳಿಯನ್ನು ಕೇಳಿಕೊಂಡಿದ್ದಾರೆ, ದೇವಸ್ಥಾನದ ಆಡಳಿತ ಮಂಡಳಿ ಯಾವ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *