ಉತ್ತರ ಪ್ರದೇಶ: ಉತ್ತರ ಪ್ರದೇಶದ ರಾಂಪುರ ಜಿಲ್ಲೆಯ 55 ವರ್ಷದ ವ್ಯಕ್ತಿಯೊಬ್ಬ ತನ್ನ ಮಗ ಮದುವೆಯಾಗಬೇಕಿದ್ದ ವಧುವನ್ನೇ ಮದುವೆಯಾಗಿರುವ ಶಾಕಿಂಗ್ ಘಟನೆ ನಡೆದಿದೆ.
6 ಮಕ್ಕಳ ತಂದೆ ಮತ್ತು ಮೂರು ಮಕ್ಕಳ ಅಜ್ಜನಾಗಿರುವ ಶಕೀಲ್ ಎಂಬವರೇ ಮಗನಿಗೆ ನಿಶ್ಚಿಯವಾಗಿದ್ದ ಮಹಿಳೆಯನ್ನು ವರಿಸಿದರಾಗಿದ್ದು, ತಮ್ಮ ಮಗಳ ಮದುವೆಯ ನಂತರ ಸಮೀಪದ ಹಳ್ಳಿಯ 22 ವರ್ಷದ ಆಯೇಷಾ ಎಂಬ ಮಹಿಳೆಯನ್ನು ಪದೆ ಪದೆ ಭೇಟಿಯಾಗುತ್ತಿದ್ದರು ಎಂದು ಅವರ ಪತ್ನಿ ಶಬಾನಾ ಹೇಳಿದ್ದಾರೆ.
ಮಗ ಅಮಾನ್ ಜೊತೆ ಆಯೇಷಾಳ ಮದುವೆ ನಿಶ್ಚಯ ಮಾಡುತ್ತಿರುವುದಕ್ಕಾಗಿ ಆಕೆಯನ್ನು ಆಗಾಗ್ಗೆ ಭೇಟಿಯಾಗುತ್ತಿರುವುದಾಗಿ ಹೇಳಿದ್ದಾರೆ. ಈ ನಡುವೆ ತಂದೆ ಹಾಗೂ ಆಯೇಷಾ ನಡುವೆ ಆಗಾಗ್ಗೆ ಕರೆಗಳು ಬರುತ್ತಿರುವುದನ್ನು ಗಮನಿಸಿ ಅಮನ್‌ಗೆ ಶಂಕೆ ಮೂಡಿದೆ.
ಆ ಮಹಿಳೆಯನ್ನು ಮದುವೆಯಾಗುವುದಕ್ಕಾಗಿ ಮನೆ ತೊರೆದ ಶಕೀಲ್ ಮನೆಯಿಂದ ಹೋಗುವ ವೇಳೆ 2 ಲಕ್ಷ ನಗದು ಹಾಗೂ 17 ಗ್ರಾಂ ಚಿನ್ನಭಾರಣವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಕುಟುಂಬದವರು ಆರೋಪಿಸಿದ್ದಾರೆ.
ಕಳೆದ ವಾರ ಕೆಲಸದ ನೆಪದಲ್ಲಿ ದೆಹಲಿಗೆ ತೆರಳಿದ ಶಕೀಲ್, ಅಲ್ಲಿಂದ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಕರೆ ಮಾಡಿ ತಾನು ಆಯೇಷಾಳನ್ನು ಮದುವೆಯಾಗಿದ್ದೆನೆ ಎಂದು ತಿಳಿಸಿದ್ದಾರೆ.