200 ಟನ್ ಚಿನ್ನ, 2.5 ಲಕ್ಷ ಕೋಟಿ ಮೌಲ್ಯದ ಖಜಾನೆ: 300 ವರ್ಷಗಳ ಹಿಂದೆ ಮುಳುಗಿದ ಹಡಗು ಸಿಕ್ಕಿತು

ಸುದ್ದಿ ಸಂಗ್ರಹ ವಿಶೇಷ

ಮಹಾಸಾಗರಗಳಲ್ಲಿ ಮುಳುಗಿರುವ ಬೃಹತ್ ಹಡಗುಗಳ ಬಗ್ಗೆ ತಿಳಿದುಕೊಳ್ಳಲು ಜನರು ಕುತೂಹಲ ಹೊಂದಿರುತ್ತಾರೆ. ದೈತ್ಯ ಹಡಗು ಟೈಟಾನಿಕ್ ಮುಳುಗಿದ್ದನ್ನು ಇಡಿ ಜಗತ್ತು ಶಾಕ್ ಆಗಿತ್ತು. ಸಮುದ್ರ ತಳದಲ್ಲಿರುವ ಟೈಟಾನಿಕ್ ಹಡಗು ನೋಡಲು ಹೋಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳಿವೆ.

ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಎಂಬ ಹಡಗು 317 ವರ್ಷಗಳ ಹಿಂದೆ‌ (1708ರಲ್ಲಿ) ಮುಳುಗಿತ್ತು. ಈ ಹಡಗು ಅಪಾರ ಪ್ರಮಾಣದ ಚಿನ್ನ, ವಜ್ರ ಸೇರಿದಂತೆ ದೊಡ್ಡ ಖಜಾನೆಯನ್ನು ಹೊತ್ತು ಸಾಗುತ್ತಿತ್ತು. ಹೀಗಾಗಿ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಮುಳುಗಡೆ ವಿಶ್ವದೆಲ್ಲಡೆ ಸದ್ದು ಮಾಡಿತ್ತು. ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗಿನಲ್ಲಿ ಎಷ್ಟು ಮೌಲ್ಯದ ಸಂಪತ್ತು ಎಂದು ನೋಡೋಣ ಬನ್ನಿ.

ಎರಡುವರೆ ಲಕ್ಷ ಕೋಟಿ (16 ಬಿಲಿಯನ್ ಡಾಲರ್) ಮೌಲ್ಯದ ಸಂಪತ್ತು ತುಂಬಿಕೊಂಡಿದ್ದ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಪೆರುವಿನಿಂದ ಸ್ಪೇನ್‌ನತ್ತ ಪ್ರಯಾಣ ಬೆಳೆಸಿತ್ತು. ಈ ನಿಧಿಯನ್ನು ಸ್ಪ್ಯಾನಿಷ್ ಉತ್ತರಾಧಿಕಾರಕ್ಕಾಗಿ ಯುದ್ಧದ ಬಳಕೆಗಾಗಿ ಸ್ಪೇನ್‌ಗೆ ಸಾಗಿಸಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆ ಬ್ರಿಟನ್‌ ರಾಯಲ್ ನಲ್ಲಿ ಈ ಹಡಗು ಮುಳುಗಡೆಯಾಗಿತ್ತು. ಅಂದಿನಿಂದ ಇಂದಿನವರೆಗೆ ಅನೇಕ ದೇಶಗಳು ಮತ್ತು ಕಂಪನಿಗಳು ದಶಕಗಳಿಂದ ಈ ನಿಧಿ ತುಂಬಿದ ಹಡಗಿನ ಹುಡುಕಾಟದಲ್ಲಿ ತೊಡಗಿವೆ. ಈಗ ಅದು ಪತ್ತೆಯಾದ ತಕ್ಷಣ, ಹಕ್ಕುದಾರರಲ್ಲಿ ಸ್ಪರ್ಧೆ ಉಂಟಾಗುತ್ತದೆ.

ಈ ಹಡಗಿನಲ್ಲಿ ಏನೇನಿತ್ತು ?
ಮುಳುಗಡೆಯಾದ ಸ್ಪ್ಯಾನಿಷ್ ಗ್ಯಾಲಿಯನ್ ಸ್ಯಾನ್ ಜೋಸ್ ಹಡಗು ಒಟ್ಟು 200 ಟನ್ ಮೌಲ್ಯದ ಬಂಗಾರ, ವಜ್ರಾಭರಣಗಳನ್ನು ಹೊತ್ತು ಪ್ರಯಾಣ ಬೆಳೆಸಿತ್ತು ಎಂದು ವರದಿಯಾಗಿದೆ. ಈ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಒಂದೊಂದು ಚಿನ್ನದ ನಾಣ್ಯಗಳು 27 ಗ್ರಾಂ ತೂಕ ಹೊಂದಿವೆ ಎಂದು ಹೇಳಲಾಗುತ್ತಿದೆ.

ಕಾರ್ಟಜೆನಾ ಕರಾವಳಿಯ ಬಳಿಯ ಬರು ದ್ವೀಪದಲ್ಲಿ ಮುಳುಗಡೆಯಾದ ಹಡಗನ್ನು ಪತ್ತೆ ಮಾಡಲಾಗಿದೆ. ಕ್ರಿ.ಶ 1707 ರ ಹಿಂದಿನ ಲಿಮಾ ಮಿಂಟ್‌ನ ಚಿನ್ನದ ನಾಣ್ಯಗಳು, 1665 ರ ಹಿಂದಿನ ಫಿರಂಗಿಗಳು ಮತ್ತು ಪಿಂಗಾಣಿ ಪಾತ್ರೆಗಳು ಈ ಹಡಗಿನಲ್ಲಿ ಸಿಕ್ಕಿವೆ. ಸ್ಪೇನ್, ಪೆರು, ಕೊಲಂಬಿಯಾ ಮುಂತಾದ ದೇಶಗಳು ಗೋಕಾ ಮೊರಾ ಮತ್ತು ಸಮುದ್ರ ಸಂಶೋಧನಾ ಕಂಪನಿ ಅರ್ಮಡಾ ಈ ನಿಧಿ ತಮಗೆ ಸೇರಿದ್ದು ಎಂದು ಸ್ಪರ್ಧೆ ನಡೆಸುತ್ತಿವೆ. ಈ ಹಡಗಿನ ಹುಡುಕಾಟದಲ್ಲಿ ಈ ಹಕ್ಕುದಾರರು ಈಗಾಗಲೇ ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಹಾಗಾಗಿ ಹಡಗು ಯಾರಿಗೆ ಸೇರುತ್ತೆ ಎಂಬುದರ ಬಗ್ಗೆ ಗೊಂದಲದಲ್ಲಿವೆ.

ಹಕ್ಕಿಗಾಗಿ ಹೋರಾಟ
ಸಮುದ್ರದ ತಳದಲ್ಲಿ ಅಂತಹ ಹಡಗಿನ ಚಿಹ್ನೆಗಳು ನೀರೊಳಗಿನ ಡೋನ್‌ಗಳಿಂದ ಕಂಡುಬಂದಿವೆ. ಗೋಕಾ ಮೋರಾ 1981 ರಲ್ಲಿಯೇ ಹಡಗನ್ನು ಕಂಡುಹಿಡಿದಿದೆ ಎಂದು ಹೇಳುತ್ತದೆ. ಸಮುದ್ರ ಶೋಧ ಕಂಪನಿ ಅರ್ಮಡಾ ಅದರಲ್ಲಿ ಅರ್ಧದಷ್ಟು ಬೇಡಿಕೆ ಇಟ್ಟಿದೆ. ಕೊಲಂಬಿಯಾ ಸರ್ಕಾರ 2020 ರಲ್ಲಿ ಕಾನೂನು ಜಾರಿಗೆ ತಂದಿದ್ದು, ಎಲ್ಲವನ್ನು ವಶಕ್ಕೆ ಪಡೆದುಕೊಂಡಿದೆ. ಮತ್ತೊಂದೆಡೆ ಹಡಗು ಸ್ಪೇನ್‌ಗೆ ಹೋಗುತ್ತಿತ್ತು. ಆದ್ದರಿಂದ ಹಡಗಿನ ಮೇಲೆ ಸಂಪೂರ್ಣವಾದ ಹಕ್ಕು ನಮ್ಮದು ಎಂದು ಸ್ಪ್ಯಾನಿಶ್ ಸರ್ಕಾರ ಹೇಳುತ್ತದೆ.

ಹಡಗು ಮುಳುಗಡೆಯಾಗಿದ್ದು ಹೇಗೆ ?
8 ಜೂನ್ 1708 ರಂದು ಕಾರ್ಟಜೆನಾದಿಂದ ಯುರೋಪ್‌ ಗೆ ಹೊರಟ ಬೆಂಗಾವಲು ಪಡೆಯಲ್ಲಿ ಸ್ಯಾನ್ ಜೋಸ್ 18 ಹಡಗುಗಳಲ್ಲಿ ಒಂದಾಗಿತ್ತು. ಈ ಹಡಗುಗಳ ಮೇಲೆ ಐದು ಬ್ರಿಟಿಷ್ ಯುದ್ಧ ನೌಕೆಗಳು ದಾಳಿ ಮಾಡಿದವು. ಆಗ ಬ್ರಿಟನ್ ಸ್ಪ್ಯಾನಿಷ್ ಉತ್ತರಾಧಿಕಾರ ಯುದ್ಧದಲ್ಲಿ ಸ್ಪೇನ್ ವಿರುದ್ಧ ನಿಂತಿತ್ತು. ಸ್ಪ್ಯಾನಿಷ್ ಹಡಗುಗಳು ಸಹ ಪ್ರತಿದಾಳಿ ನಡೆಸಿದವು, ಆದರೆ ಫಿರಂಗಿಗಳಲ್ಲಿ ಇರಿಸಲಾಗಿದ್ದ ಗನ್‌ಪೌಡರ್‌ನಲ್ಲಿ ಬೆಂಕಿಯಿಂದ ಉಂಟಾದ ಸ್ಫೋಟದಿಂದಾಗಿ ಹಡಗು ಮುಳುಗಿತು.

Leave a Reply

Your email address will not be published. Required fields are marked *