ಪೊಲೀಸ್ ಕಚೇರಿಯಲ್ಲೆ 51 ಲಕ್ಷ ರೂ ನಗದು, ಆಭರಣ ಕದ್ದಿದ್ದ ಹೆಡ್‌ ಕಾನ್‌ಸ್ಟೆಬಲ್ ಬಂಧನ

ನವದೆಹಲಿ

ನವದೆಹಲಿ: ದೆಹಲಿ ಪೊಲೀಸ್‌ನ ಲೋಧಿ ರಸ್ತೆಯ ವಿಶೇಷ ಸೆಲ್‌ನ ಕಚೇರಿಯಲ್ಲಿರುವ ಸ್ಟೋರ್‌ ರೂಂ’ನಿಂದ ಸುಮಾರು 51 ಲಕ್ಷ ರೂ ನಗದು ಮತ್ತು ಆಭರಣಗಳನ್ನು ಕದ್ದ ಆರೋಪದ ಮೇಲೆ ದೆಹಲಿ ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಒಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳ್ಳತನ, ದರೋಡೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ಸ್ಟೋರ್‌ ರೂಂ’ನಲ್ಲಿ ಇರಿಸಲಾಗಿತ್ತು. ಅಲ್ಲಿಗೆ ಕಾನ್‌ಸ್ಟೆಬಲ್ ಪ್ರವೇಶವಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ತಡರಾತ್ರಿ ಸ್ಟೋರ್‌ ರೂಮ್‌ಗೆ ಪ್ರವೇಶಿಸಿದ್ದ ಕಾನ್‌ಸ್ಟೆಬಲ್, ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದನು. ಸ್ಟೋರ್ ರೂಮ್ ಉಸ್ತುವಾರಿ ಪರಿಶೀಲನೆ ನಡೆಸಿದ್ದು, ಸ್ವಲ್ಪ ಸಮಯದೊಳಗೆ ಕೃತ್ಯ ಬೆಳಕಿಗೆ ಬಂದಿದೆಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸ್ ತಂಡಗಳು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿ ಆರೋಪಿಯನ್ನು ಗುರುತಿಸಿದವು. ಬಳಿಕ ತೀವ್ರ ಹುಡುಕಾಟ ನಡೆಸಿ ಶನಿವಾರ ಆರೋಪಿಯನ್ನು ಬಂಧಿಸಲಾಯಿತು. ಕದ್ದ ಹಣ ಮತ್ತು ಆಭರಣ ವಶಪಡಿಸಿಕೊಳ್ಳಲಾಗಿದೆ.

ಈ ಕೃತ್ಯದಲ್ಲಿ ಮತ್ತೆ ಯಾರದ್ದಾದರೂ ಪಾತ್ರ ಇದೆಯಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ, ಇಲಾಖಾ ಕ್ರಮವನ್ನೂ ಪ್ರಾರಂಭಿಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *