ತಾಯಿ ದೇವರಾಗಬಹುದು, ದೇವರು ತಾಯಿಯಾಗಲ್ಲ: ಶಿವರಾಜ ಅಂಡಗಿ

ಸುದ್ದಿ ಸಂಗ್ರಹ

ಬೆಂಗಳೂರು: ತನಗಾಗಿ ಏನನ್ನು ಬಯಸದವರು, ಏನನ್ನು ಕೂಡಿಡದವರು, ತನಗಿಲ್ಲವೆಂದು ಕೊರಗದವರು ಯಾರಾದರು ಇದ್ದರೆ ಅವರೆ ಕಣ್ಣಿಗೆ ಕಾಣುವ ದೇವರು ತಾಯಿ. ತಾಯಿ ದೇವರಾಗಬಹುದು ಆದರೆ ದೇವರು ತಾಯಿಯಾಗುವದಿಲ್ಲ ಎಂದು ಕಲಬುರಗಿ ಅಂಡಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಜ ಅಂಡಗಿ ಹೇಳಿದರು.

ನಗರದ ಕೆಂಗೇರಿ ಕೂಡಿಪಾಳ್ಯದಲ್ಲಿ “ವಿಶ್ವ ತಾಯಿಂದಿರ ದಿನಾಚರಣೆ” ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸೋತಾಗ ಸದಾ ನಮ್ಮ ಜೊತೆಗೆ ಇದ್ದು ನಮಗೆ ಆತ್ಮಸ್ಥೈರ್ಯ ತುಂಬುವರು, ನಮ್ಮ ನಗುವಿನಲ್ಲಿಯೇ ತನ್ನ ಕುಷಿ ಕಾಣುವರು, ನಮಗಾಗಿಯೇ ಇಡಿ ಜೀವನ ಮೀಸಲಿಡುವವರು ತಾಯಿ. ಹೀಗಾಗಿ ಪ್ರತಿ ದಿನವೂ ನಾವು ಸ್ವಲ್ಪ ಸಮಯವಾದರೂ ತಾಯಿ ಸೇವೆ ಮಾಡಿದರೆ ಮಾತ್ರ ನಮ್ಮ ಜೀವನ ಸಾರ್ಥಕ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ತಾಯಂದಿರಾದ ಶಾರದಾಬಾಯಿ ಪೊಲೀಸ್ ಪಾಟೀಲ, ಗುಣವಂತಿ ಬಿರಾದಾರ, ಕಮಲಾಬಾಯಿ ಹಿಪ್ಪರಗಿ, ಶಾಂತಾಬಾಯಿ ಪಾಟೀಲ, ಶಾರದಾಬಾಯಿ ನಿರಂಜಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಿ.ಎ ವೀರಶೆಟ್ಟಿ ಪೊಲೀಸ್ ಪಾಟೀಲ, ದಾನಪ್ಪ ಪೊಲೀಸ್ ಪಾಟೀಲ, ಶಂಕರಗೌಡ ಪಾಟೀಲ, ಬಾಪುಗೌಡ ಪಾಟೀಲ ಮತ್ತು ಅಂಬಿಕಾ ಪಾಟೀಲ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಿಂದ್ರಪ್ಪ ಪಾಟೀಲ ಬಿಜನಳ್ಳಿ, ರೇಖಾ ಅಂಡಗಿ, ಸಿದ್ದಾರ್ಥ ಬಿರಾದಾರ, ಪ್ರೀತಿ ನಿರಂಜಿ, ಅಚಲರಾಜ ಅಂಡಗಿ, ಕುಮಾರ ಅರ್ಯನ್, ಆದಿತ್ಯ, ಅಪ್ಪು ಸೇರಿದಂತೆ ಅನೇಕರು ಇದ್ದರು.

ಕಾರ್ಯಕ್ರಮವನ್ನು ನಾಗರಾಜ ನಿರಂಜಿ ಸ್ವಾಗತಿಸಿದರು, ಪದ್ಮಾವತಿ ನಿರಂಜಿ ನಿರೂಪಿಸಿದರು. ಗೌತಮ ನಿರಂಜಿ ವಂದಿಸಿದರು.

Leave a Reply

Your email address will not be published. Required fields are marked *