UPI ಪೇಮೆಂಟ್​​ ಮಾಡುವಾಗ ಮಿಸ್​ ಆಗಿ ಬೇರೆಯವರಿಗೆ ಹಣ ಕಳಿಸಿದ್ರಾ ? ಚಿಂತಿಸಬೇಡಿ ಈ ರೀತಿ ಮಾಡಿ

ಸುದ್ದಿ ಸಂಗ್ರಹ ವಿಶೇಷ

ಆನ್​ಲೈನ್​​ ಪಾವತಿ ಮಾಡುವಾಗ ನೀವು ತಪ್ಪಾಗಿ ಯಾವುದೆ ಖಾತೆ, UPI ಐಡಿ ಅಥವಾ ಸಂಖ್ಯೆಗೆ ಪಾವತಿ ಮಾಡಿದರೆ ಚಿಂತಿಸಬೇಡಿ. ಈ ರೀತಿ ಮಾಡಿ ನಿಮ್ಮ ಹಣ ನಿಮಗೆ ವಾಪಸ್​​ ಬರುತ್ತದೆ.

ಆನ್​ಲೈನ್ ​​ಮೂಲಕ ಹಣ ಕಾಸಿನ ವ್ಯವಹಾರ, ಆನ್​ಲೈನ್​ ಶಾಪಿಂಗ್ ಮತ್ತು ಊಟ ಬೇಕು ಅಂದರೂ ಆನ್​ಲೈನ್​ನಲ್ಲಿ ಆರ್ಡರ್​​ ಮಾಡಿ ತರಿಸಿಕೊಳ್ಳುತ್ತೆವೆ. ಆವಾಗ ಆನ್​ಲೈನ್​ ಪೇಮೆಂಟ್​ ಮಾಡಲೆಬೇಕು. ಪಾವತಿ ಅಪ್ಲಿಕೇಶನ್‌ ಬಳಸಲು UPI ಮಾಧ್ಯಮವಾಗಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರಚಿಸಿದ ಏಕೀಕೃತ ಪಾವತಿ ಇಂಟರ್ಫೇಸ್ (UPI), ವಿವಿಧ ಬ್ಯಾಂಕ್ ವಹಿವಾಟುಗಳನ್ನು ಸುಗಮಗೊಳಿಸುವ ಆನ್‌ಲೈನ್ ಪಾವತಿ ವ್ಯವಸ್ಥೆಯಾಗಿದೆ. ಲಕ್ಷಾಂತರ ಗ್ರಾಹಕರು ಹಣಕಾಸಿನ ವ್ಯವಹಾರ ಮಾಡಲು, ದುಡ್ಡು ವರ್ಗಾವಣೆ ಮಾಡಲು UPI ಬಳಸುತ್ತಾರೆ.

ಆನ್‌ಲೈನ್ ಪಾವತಿ ಮಾಡುವಾಗ ತಪ್ಪಾಗಿ ಯಾವುದೆ ಖಾತೆ, UPI ಐಡಿ ಅಥವಾ ಸಂಖ್ಯೆಗೆ ಪಾವತಿ ಮಾಡಿದರೆ ಚಿಂತಿಸಬೇಡಿ. ಈ ರೀತಿ ಮಾಡಿ ಹಣ ವಾಪಸ್ ಪಡೆಯಬಹುದು.

ಮೊದಲು ಈ ರೀತಿ ಮಾಡಿ: UPI ಗ್ರಾಹಕ ಸೇವೆಗೆ ಸಂಪರ್ಕಿಸಿ. ತಪ್ಪಾಗಿ ಬೇರೆಯವರ ಖಾತೆಗೆ ಹಣ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್ ಶಾಖೆಗೆ ತಿಳಿಸಬೇಕು.

ಆನ್‌ಲೈನ್ ಪಾವತಿಯನ್ನು ತಪ್ಪಾಗಿ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿ. ಹಣ ಮರಳಿ ಕೇಳಿ. ಅವರನ್ನು ಸ್ವಲ್ಪ ಮಾತನಾಡಿಸಿ, ನೀವು ಎದುರಿಸಿದ ಸಮಸ್ಯೆ ಬಗ್ಗೆ ವಿವರಿಸಿ. ಒಂದುವೇಳೆ ಅವರು ನಿಮ್ಮ ಮಾತನ್ನು ಕೇಳದಿದ್ದರೆ, ನೀವು ದೂರು ದಾಖಲಿಸಬಹುದು. ಅವರ ವಿರುದ್ಧ ಎಫ್‌ಐಆರ್ ದಾಖಲಿಸಬಹುದು. ದೂರು ದಾಖಲಿಸುವ ಮೂಲಕ ಹಣವನ್ನು ಹಿಂತಿರುಗಿಸಬಹುದು.

ಒಂದು ವೇಳೆ ನಮ್ಮ ಖಾತೆಗೆ ಬೇರೆಯವರು ತಪ್ಪಾಗಿ ಹಣ ವರ್ಗಾವಣೆ ಮಾಡಿದ್ದರೆ ನೀವೇ ಅದನ್ನು ವರದಿ ಮಾಡಬಹುದು ಮತ್ತು ಹಣವನ್ನು ಕಳಿಸಿದ ವ್ಯಕ್ತಿಗೆ ಹಿಂತಿರುಗಿಸಬಹುದು. ನೀವು ಇದನ್ನು ಮಾಡದಿದ್ದರೆ ಆರ್‌ಬಿಐ ನಿಯಮಗಳ ಉಲ್ಲಂಘನೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ದಂಡ ಪಾವತಿಸಬೇಕಾಗಬಹುದು ಮತ್ತು ಶಿಕ್ಷೆಯನ್ನು ಸಹ ಅನುಭವಿಸಬೇಕಾಗಬಹುದು.

ಆನ್‌ಲೈನ್‌ನಲ್ಲಿ ಹಣ ವರ್ಗಾಯಿಸುವಾಗ ಈ 3 ವಿಷಯ ನೆನಪಿನಲ್ಲಿಡಿ: ಆನ್​ಲೈನ್​ನಲ್ಲಿ ಹಣ ವರ್ಗಾಹಿಸುವಾಗ ತುಂಬ ಜಾಗರೂಕರಾಗಿರುವುದು ಉತ್ತಮ. ಮೊದಲು ಖಾತೆ ಸಂಖ್ಯೆ ಮತ್ತು IFSC ಕೋಡ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಿ. ಫೋನ್ ಸಂಖ್ಯೆ ಅಥವಾ UPI ಐಡಿಯನ್ನು ಸರಿಯಾಗಿ ಪರಿಶೀಲಿಸಿ. UPI ಅಥವಾ IMPS ಮೂಲಕ ಹಣವನ್ನು ಕಳುಹಿಸುವಾಗ, ಹೆಸರನ್ನು ಪರಸ್ಪರ ಪರಿಶೀಲಿಸಿ.

Leave a Reply

Your email address will not be published. Required fields are marked *