ಕಲಬುರಗಿ: ಶಹಾಬಾದ ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವವು ಇಂದು ಹೇಮರೆಡ್ಡಿ ಮಲ್ಲಮ್ಮ ಪುರಾಣದೊಂದಿಗೆ ಪ್ರಾರಂಭವಾಗಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ ಹೇಳಿದರು.
ಏಪ್ರಿಲ್ 12 ರಿಂದ 20ರ ವರೆಗೆ ಪ್ರತಿದಿನ ಸಂಜೆ 7.30ಕ್ಕೆ ಯೋಗಿರಾಜ್ ಖಾನಾಪುರ ಅವರಿಂದ ಪುರಾಣ ನಡೆಯಲಿದೆ. ಶ್ರೀಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯಸಾನಿಧ್ಯದಲ್ಲಿ ಪ್ರತಿದಿನ ನಾಡಿನ ವಿವಿಧ ಪೂಜ್ಯರು, ಗಣ್ಯರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 17 ರಂದು ಪ್ರತಿಭಾ ಪುರಸ್ಕಾರ, 18 ರಂದು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ, 19 ರಂದು ಲಕ್ಷ್ಮಿಪುರವಾಡಿ ಗ್ರಾಮದಿಂದ ರಾವೂರ ಗ್ರಾಮದವರೆಗೆ ಸದ್ಭಾವನಾ ಪಾದಯಾತ್ರೆ, 20 ರಂದು ನೂತನವಾಗಿ ನಿರ್ಮಾಣಗೊಂಡ ವಿದ್ಯಾರ್ಥಿನಿಲಯ ಹಾಗೂ ಪಾಕಶಾಲೆಯ ಉದ್ಘಾಟನೆ ನಡೆಯಲಿದೆ. 21ರಂದು ಸಂಜೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, 22 ರಂದು ಸಂಜೆ 6.30ಕ್ಕೆ ಭವ್ಯ ರಥೋತ್ಸವ ನಡೆಯಲಿದೆ. ಅಂದು ರಥೋತ್ಸವದ ನಂತರ ಹಾಸ್ಯ ರಸಮಂಜರಿ ನಡೆಯಲಿದೆ ಎಂದು ಬಾಳಿ ತಿಳಿಸಿದ್ದಾರೆ.