ಚಿನ್ನದ ಬೆಲೆ ಇಳಿಯುತ್ತಾ ? ಅಮೆರಿಕ ತಜ್ಞರ ಪ್ರಕಾರ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾದರೆ ಮತ್ತು ಬೇಡಿಕೆ ಕಡಿಮೆಯಾದರೆ ಚಿನ್ನದ ಬೆಲೆ ಕಡಿಮೆಯಾಗಬಹುದು. ಇದೀಗ ಭಾರತದಲ್ಲಿ ಚಿನ್ನದ ಬಲೆ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ತಜ್ಞರು ಸೂಚಿಸಿದ್ದಾರೆ.
ಈಗ 90 ಸಾವಿರ ರೂ ಸಿಗುತ್ತಿರುವ 10 ಗ್ರಾಂ ಚಿನ್ನ, 56 ಸಾವಿರ ರೂ ಗೆ ಇಳಿಯುತ್ತಾ ? ಇದೀಗ ಎಲ್ಲೆಡೆ ಚಿನ್ನದ ಬೆಲೆ ಕುರಿತು ಚರ್ಚೆ ನಡೆಯುತ್ತಿದೆ. ಅಮೆರಿಕ ತಜ್ಞರು ಈ ಕುರಿತು ಸೂಚನೆಯೊಂದನ್ನು ನೀಡಿದ್ದಾರೆ. ಭಾರತದಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗುವ ಸೂಚನೆ ನೀಡಿದ್ದಾರೆ. ಇದಕ್ಕೆ ಬೇಡಿಕೆ ಹಾಗೂ ಪೂರೈಕೆ ಮಾತ್ರವಲ್ಲ, ವಿಶ್ವ ಬ್ಯಾಂಕ್ ಖರೀದಿ ಕೂಡ ಸೇರಿದೆ.

ತಜ್ಞರ ಪ್ರಕಾರ ಒಂದು ತೊಲೆ ಚಿನ್ನ ಕೇವಲ 34 ಸಾವಿರ ರೂ ಗಳಿಗೆ ಸಿಗಲಿದೆ. 90 ಸಾವಿರ ರೂ ಇದ್ದ ಚಿನ್ನ ಕೇವಲ 34 ಸಾವಿರ ರೂ ಗೆ ಲಭ್ಯವಾಗುವ ಕಾಲ ದೂರವಿಲ್ಲ ಎಂದುು ಅಮೆರಿಕ ತಜ್ಞರು ವಾದ ಮುಂದಿಟ್ಟಿದ್ದಾರೆ. ಇದಕ್ಕೆ ಅವರು ನೀಡಿದ ಪ್ರಮಖ ಕಾರಣ ಜಾಗತಿಕ ದಾಸ್ತಾನು 9% ರಷ್ಟು ಏರಿಕೆಯಾಗಿದೆ. ಇದರಿಂದ ದಾಸ್ತಾನು 2,16,265 ಟನ್ಗಳಿಗೆ ತಲುಪಿದೆ ಎಂದಿದ್ದಾರೆ. ಇದರ ಜೊತೆಗೆ ಇನ್ನೆರಡು ಕಾರಣ ನೀಡಿದ್ದಾರೆ.

ಮತ್ತೊಂದೆಡೆ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ವಿಶ್ವ ಬ್ಯಾಂಕ್ ಪ್ರಮುಖವಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ವಿಶ್ವ ಕೇಂದ್ರ ಬ್ಯಾಂಕುಗಳಿಂದ ಚಿನ್ನ ಖರೀದಿ ಕಡಿಮೆಯಾಗುವ ನಿರೀಕ್ಷೆಯಿದೆ. 71% ಕೇಂದ್ರ ಬ್ಯಾಂಕುಗಳು ತಮ್ಮ ಚಿನ್ನದ ಮೀಸಲು ಕಡಿಮೆ ಮಾಡಲು ಅಥವಾ ನಿರ್ವಹಿಸಲು ಯೋಜಿಸುತ್ತಿವೆ. ಇದು ಕೂಡ ಚಿನ್ನದ ಬೆಲೆ ಇಳಿಕೆಗೆ ಕಾರಣವಾಗಿದೆ ಎಂದು ಸೂಚಿಸಿದ್ದಾರೆ.

ಈ ಬೆಳವಣಿಗಗಳು ಚಿನ್ನದ ಬೆಲೆಯನ್ನು 56 ಸಾವಿರದವರೆಗೆ ಕಡಿಮೆ ಮಾಡುವ ಸಾಧ್ಯತೆ ಅಮೆರಿಕ ತಜ್ಞರು ಹೇಳಿದ್ದಾರೆ. ಇದೇ ವೇಳೆ ಮತ್ತೊಂದು ವಾದವೂ ಮುನ್ನಲೆಗೆ ಬಂದಿದೆ. ಅಮೆರಿಕ ತೆರಿಗೆ ಹೆಚ್ಚಿಸಿರುವ ಕಾರಣ ಚಿನ್ನದ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯ ಚಿನ್ನದ ಬೆಲೆ ನೋಡಿದರೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆ ಇಲ್ಲ ಎನ್ನುತ್ತಿದೆ ಭಾರತೀಯ ಚಿನ್ನದ ಮಾರುಕಟ್ಟೆ.

ಸದ್ಯ ಈ ಕುರಿತು ಯಾವುದೆ ಅದಿಕೃತ ಮಾಹಿತಿ ಪ್ರಕಟಗೊಂಡಿಲ್ಲ. ಆದರೆ ಚಿನ್ನದ ಬೆಲೆ ಏರಿಳಿತ ಸಹಜ. ಒಂದೆಡೆಯಿಂದ ಡೋನಾಲ್ಡ್ ಟ್ರಂಪ್ ತೆರಿಗೆ, ಮತ್ತೊಂದೆಡೆಯಲ್ಲಿ ಚಿನ್ನದ ಬೆಲೆ ಏರಿಕೆ ಜನಸಾಮಾನ್ಯರ ಕಂಗೆಡಿಸಿದೆ. ಆದರೆ ಚಿನ್ನದ ಮೇಲೆ ಹೂಡಿಕೆ ಮಾಡಿರುವ ಮಂದಿ ಬೆಲೆ ಏರಿಕೆಯಿಂದ ಖುಷಯಾಗಿದ್ದಾರೆ.