ಚಿತ್ತಾಪುರ: ಒಳ ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ನಾಗಮಹಂದಾಸ್ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿರುವ ಮಧ್ಯಂತರ ವರದಿ ಮೀಸಲಾತಿ ವರ್ಗೀಕರಣದ ಕುರಿತು ಎಲ್ಲೂ ಹೇಳಿಲ್ಲಲ ಮೊದಲಿಗೆ ಆದಿ ಕರ್ನಾಟಕ (ಎ.ಕೆ) ಆದಿ ದ್ರಾವಿಡ(ಎ.ಡಿ) ಜಾತಿಗಳಲ್ಲಿ ಗೊಂದಲವಿರುವುದರಿಂದ ಮತ್ತೊಂದು ಸಮೀಕ್ಷೆ ಮಾಡಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂದು ಸರ್ಕಾರ ಶಿಫಾರಸು ಮಾಡಿದೆ ಸಮೀಕ್ಷೆ ವಿವರಗಳು ಮತ್ತು ನಿರ್ವಹಣೆ ಮಾಡಲು ಸಮಿತಿ ರಚಿಸಬೇಕು ಎಂದು ಹೇಳಿರುವುದು ಸರಿಯಲ್ಲ ಎಂದು ಮಾಜಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ದೀಪಕ್ ಹೊಸ್ಸೂರಕರ್ ತಿಳಿಸಿದ್ದಾರೆ.
ಮಧ್ಯಂತರ ವರದಿಯಲ್ಲಿ ಮಾದಿಗ ಸಮಾಜ ಶೇಕಡ 60 ಮೀಸಲಾತಿ ಪ್ರತ್ಯೇಕ ಜಾರಿ ಮಾಡಬೇಕು ಮತ್ತೆ ಸಮೀಕ್ಷೆ ಮಾಡಬೇಕು ಎಂಬುದು ಮಾದಿಗ ಸಮಾಜ ವೇದಿಕೆಯಾಗಿತ್ತು ಆದರೆ ಆಯೋಗ ವರ್ಗೀಕರಣದ ವಿಷಯ ಬದುಕಿಟ್ಟು ಹಸಿದು ಕಂಗಾಲಾಗಿರುವ ಮಾದಿಗ ಸಮಾಜಕ್ಕೆ ಮತ್ತೊಂದು ಸಮೀಕ್ಷೆ ಶಿಫಾರಸು ಮಾಡಿರುವುದು ಅನ್ಯಾಯವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಳಮಿಸಲಾತಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ಕೊಟ್ಟಿತ್ತು. ಚಿತ್ರದುರ್ಗದ ಸಮಾವೇಶದಲ್ಲಿಯೂ ಇದೆ ಘೋಷಣೆ ಮಾಡಿದ್ದು ಈಗ ಎರಡು ವರ್ಷವಾದರೂ ಗಟ್ಟಿಯಾದ ಒಂದು ಹೆಜ್ಜೆ ಇಡಲಾಗದೆ ಕಾಂಗ್ರೆಸ್ ಸರ್ಕಾರ ನಿಂತಲ್ಲೆ ತೇಳಲುತ್ತಿದೆ ಎಂದರು.
ಅಗಸ್ಟ್ 1ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು, ಒಳ ಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ದಕ್ಕಿದ ತರುವಾಯ ಅತ್ಯಂತ ನಿಧಾನಗತಿಯಲ್ಲಿ ಸಾಗುತ್ತಿರುವುದು ಕಾಂಗ್ರೆಸ್ ಎಂದರೆ ಅದು ಕರ್ನಾಟಕ ಸರ್ಕಾರ ಸರ್ಕಾರವಾಗಿದೆ ಎಂದರು ಹರಿಯಾಣ ಬಿಜೆಪಿ ಸರ್ಕಾರ ತೀರ್ಪು ಬಂದ ಒಂದು ವಾರದಲ್ಲಿ ಒಳ ಮೀಸಲಾತಿ ಜಾರಿ ಮಾಡಿತು. ತೆಲಂಗಾಣ ಕಾಂಗ್ರೆಸ್ ಸರ್ಕಾರ ಆಂಧ್ರ ಪ್ರದೇಶ ತೆಲಂಗಾಣ ಸರ್ಕಾರ ಮೀಸಲಾತಿ ಜಾರಿ ಮಾಡಲು ಆದೇಶ ಮಾಡಿದೆ ಆದರೆ ಕರ್ನಾಟಕ ಸರ್ಕಾರದ ನೆಪ ಹುಡುಕುತ್ತಾ ಮೀನಾ ಮೇಷಾ ಎಣಿಸುತ್ತಿದೆ ಎಂದರು.
ಸರ್ಕಾರ ಈ ನಡೆಯ ವಿರುದ್ಧ ನಾವು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತೆನೆ. ಸರ್ಕಾರ ತನ್ನ ನಡೆಯನ್ನು ಸರಿಪಡಿಸಿಕೊಳ್ಳಲಿ ಮಾದಿಗರ ಪಾಲಿನ ಶೇ.6% ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ ಎಲ್ಲಾ 101 ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಮಾಧು ಸಾಮಿ ವರದಿ ಜಾರಿ ಮಾಡಲಿ ಅಥವಾ ಸದಾಶಿವ ಆಯೋಗ ದತ್ತಾಂಶ ಬಳಸಿ ಹೊಸ ಆದೇಶ ಮಾಡಲಿ ಇನ್ಯಾವುದನ್ನು ಮಾಡದೆ ಕೇವಲ ಸಮೀಕ್ಷೆ ಮಾಡುವ ಯೋಜನೆಯಿಂದ ಕಾಲಘರಣ ಉದ್ದೇಶ ಬಿಟ್ಟರೆ ಬೇರೆನೆ ಇಲ್ಲ.
ಸರ್ಕಾರದ ಮುಂದೆ ಹೊಸ ಸಮೀಕ್ಷೆ ಆಗಬೇಕೆಂಬ ಬೇಡಿಕೆ ಬಂದಿದೆ ಇದು ಕಾಲಾಗರಣ ಮಾಡುವ ತಂತ್ರವಾಗಿದೆ ಸರ್ಕಾರದ ಈ ವಿಧಾನ ದ್ರೋಹವನ್ನು ಮಾದಿಗ ಸಮಾಜ ಒಪ್ಪುವುದಿಲ್ಲ.