ಚಿತ್ತಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣಿಯ ಎಂದು ಪ್ರೌಢ ಶಾಲೆಯ ಮುಖ್ಯಗುರು ಷಣ್ಮುಖಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ತಾಲೂಕಿನ ದಂಡೋತಿ ಗ್ರಾಮದ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಆಯೋಜಿಸಿದ್ದ 3 ತಿಂಗಳ ಟ್ಯೂಷನ್ ಕ್ಲಾಸ್ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಶಿಕ್ಷಕರ ಷಣ್ಮುಖಯ್ಯ ಹಿರೇಮಠ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಧರ್ಮಸ್ಥಳದಿಂದ ಅತಿಥಿ ಶಿಕ್ಷಕರ ನೇಮಕ, ಶಿಷ್ಯವೇತನ, ಬೆಂಚ್ ಓದಗಣೆ, ಕ್ರೀಡಾ ಉಪಕರಣ ಒದಗಣೆ ಕಾರ್ಯಕ್ರಮ ವೀರೇಂದ್ರ ಹೆಗ್ಗಡೆ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಅವಿಸ್ಮರಣೀಯ ಎಂದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಗುರುರಾಜ್, ವಲಯ ಮೇಲ್ವಿಚಾರಕ ಬಸಯ್ಯ, ಜ್ಞಾನವಿಕಾಸ ಅಧಿಕಾರಿ ಅರ್ಚನಾ, ಸೇವಾ ಪ್ರತಿನಿಧಿ ರೇಣುಕಾ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.