ಚಿತ್ತಾಪುರ: ಗ್ರಾಮೀಣ ಗಣಿಗಾರಿಕೆ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡುವ ಮೂಲಕ ನೂರಾರು ಮಕ್ಕಳ ಬಾಳು ಬೆಳಗಿದ ಲಿo. ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳ ಶೈಕ್ಷಣಿಕ ಸೇವೆ ಸದಾ ಸ್ಮರಣಿಯ ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಸಮೀಪದ ರಾವೂರ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಲಿo. ಸಿದ್ದಲಿಂಗ ಮಹಾಸ್ವಾಮಿಗಳ ಐದನೇ ಪುಣ್ಯಸ್ಮರಣೆ ನಿಮಿತ್ಯ ಎನ್.ಜಿ.ಎನ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದ ಉದ್ದೇಶಿಸಿ ಮಾತನಾಡಿದ ಅವರು, ಅನ್ನ. ಆಶ್ರಯ, ಅಕ್ಷರ ದಾಸೋಹದ ಮೂಲಕ ಶಿಕ್ಷಣದ ಅರಿವಿನ ಜ್ಯೋತಿ ಹೊತ್ತಿಸಿ ಬಸವ ತತ್ವದಡಿಯಲ್ಲಿ ವೈಚಾರಿಕ ಚಿಂತನೆ ಮುಡಿಸುತ್ತಾ ಭಕ್ತರ ಆರಾಧ್ಯ ದೈವವಾಗಿ ಕಾಣಿಸಿಕೊಂಡರು. ಪೂಜ್ಯರು ಹಾಕಿಕೊಟ್ಟ ತತ್ವಾದರ್ಶಗಳು, ಅವರ ಮಾರ್ಗದರ್ಶನ, ವೈಚಾರಿಕ ಚಿಂತನೆಗಳು ನಮ್ಮೆಲ್ಲರಿಗೂ ದಾರಿದಿಪವಾಗಿದೆ ಎಂದರು.
ಎನ್.ಜಿ.ಎನ್ ಫೌಂಡೇಶನ್ ಮುಖ್ಯಸ್ಥ ಡಾ. ಸಂತೋಷ ನಾಗಲಾಪುರ ಹಾಗೂ ಪಾಚಾರ್ಯ ಕೆ. ಐ ಬಡಿಗೇರ ಮಾತನಾಡಿದರು.
ವೇದಿಕೆಯ ಮೇಲೆ ಶ್ರೀಮಠದ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಡಾ. ಗುಂಡಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯರಾದ ಶಿವಲಿಂಗಪ್ಪ ವಾಡೆದ, ಅಣ್ಣಾರಾವ ಬಾಳಿ, ಸಿದ್ದಲಿಂಗ ಜ್ಯೋತಿ ಇದ್ದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನ ಚಿಕಿತ್ಸೆ ಪಡೆದುಕೊಂಡರು. 25 ಜನ ನೇತ್ರ ಚಿಕಿತ್ಸೆಗೆ, 19 ಜನರಿಗೆ ಬಸವೇಶ್ವರ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಯಿತು.
ರಕ್ತದಾನ ಶಿಬಿರದಲ್ಲಿ 114 ಜನ ರಕ್ತದಾನ ಮಾಡಿದರು.
ಮಠದ ಪೀಠಾಧಿಪತಿ ಸಿದ್ದಲಿಂಗ ಸ್ವಾಮಿಗಳು ಮೊದಲು ತಾವೇ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾದರು.
ರಾವೂರ, ಗಾಂಧಿನಗರ, ಮಾಲಗತ್ತಿ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಪಾಲ್ಗೊಂಡರು.
ಬೆಳಿಗ್ಗೆ ಕತೃ ಗದ್ದುಗೆಗೆ ವಿಶೇಷ ಅಲಂಕಾರ ಮತ್ತು ಪೂಜೆ ಸಲ್ಲಿಸಲಾಯಿತು.
ಗ್ರಾಮದ ಪ್ರಮುಖರಾದ ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ, ಮೋಹನ ಸೂರೆ, ಚೆನ್ನಪ್ಪ ಆಳ್ಳೊಳ್ಳಿ, ಸಿದ್ದಪ್ಪ ತೋಟದ, ಭೀಮರಾವ ಪಾಟೀಲ, ಗುರುರಾಜ ವೈಷ್ಣವ್, ಈರಣ್ಣ ಕಲ್ಯಾಣಿ, ಮಹೇಶ ಬಾಳಿ, ಅಂಬರೀಷ್ ಸಾಂಗ್ಲಿಯಾನ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು.