ಚಿತ್ತಾಪುರ: ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಪತ್ರಿಕಾ ಹಾಗೂ ವಾಕ್ ಸ್ವಾತಂತ್ರ್ಯ ಅತ್ಯಗತ್ಯ ಎಂದು ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಬಜಾಜ್ ಕಾಂಪ್ಲೆಕ್ಸ್’ನಲ್ಲಿ ಪತ್ರಕರ್ತ ಅನಂತನಾಗ ದೇಶಪಾಂಡೆ ಅವರ ವಿಶ್ವವಾಣಿ ದಿನ ಪತ್ರಿಕೆಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಿಕಾ ರಂಗ ಪ್ರಜಾಪ್ರಭುತ್ವದ ನಾಲ್ಕನೇ ಅಂಗ. ಇದರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಪತ್ರಿಕೆಯ ಕಚೇರಿ ಇದ್ದಾಗ ಸುದ್ದಿ ತಲುಪಿಸಲು ಅನುಕೂಲ ಆಗಲಿದೆ, ಈ ನಿಟ್ಟಿನಲ್ಲಿ ವಿಶ್ವವಾಣಿ ವರದಿಗಾರ ಅನಂತನಾಗ ದೇಶಪಾಂಡೆ ಅವರು ತಮ್ಮ ಪತ್ರಿಕೆಯ ಕಚೇರಿ ಆರಂಭ ಮಾಡಿರುವುದು ಉತ್ತಮ ಕೆಲಸ ಎಂದು ಬಣ್ಣಿಸಿದರು.
ನ್ಯಾಯವಾದಿ ಚಂದ್ರಶೇಖರ ಅವಂಟಿ ಮಾತನಾಡಿ, ಸತ್ಯಾಂಶ ಬರೆಯುವದು ಪತ್ರಕರ್ತರ ಬಹುದೊಡ್ಡ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಕಾಳಗಿ, ಪತ್ರಕರ್ತರಾದ ವಿರೇಂದ್ರ ಕೊಲ್ಲೂರು, ಮಲ್ಲಿಕಾರ್ಜುನ ಮುಡಬೂಳಕರ್, ಕಾಶಿನಾಥ ಗುತ್ತೇದಾರ, ಸಂತೋಷಕುಮಾರ ಕಟ್ಟಿಮನಿ, ಮಂಜುನಾಥ ಸ್ವಾಮಿ, ಈಡಿಗ ಸಮಾಜದ ತಾಲೂಕು ಅಧ್ಯಕ್ಷ ಶಂಕರಗೌಡ ರಾವೂರಕರ್ ಲೀಡರ್, ಡಿಎಸ್ಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಬೆಣ್ಣೂರಕರ್, ಕರವೇ ಅಧ್ಯಕ್ಷ ನರಹರಿ ಕುಲಕರ್ಣಿ, ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಸಾಯಬಣ್ಣ ಮಡಿವಾಳ, ಮುಖಂಡರಾದ ನರಸಪ್ಪ ಚಿನ್ನಾಕಟ್ಟಿ, ಶಿಕಾಂತ್ ಶಿಂಧೆ, ಮಲ್ಲಿಕಾರ್ಜುನ ಸಂಗಾವಿ, ಪ್ರಜ್ವಲ್ ಬೆಣ್ಣೂರಕರ್, ಅಂಬರೀಷ್ ರಂಗನೂ ಸೇರಿದಂತೆ ಅನೇಕರು ಇದ್ದರು.
ಪ್ರಾಸ್ತಾವಿಕವಾಗಿ ಪತ್ರಕರ್ತ ಅನಂತನಾಗ ದೇಶಪಾಂಡೆ ಮಾತನಾಡಿದರು. ಉದಯಕುಮಾರ್ ಸಾಗರ ನಿರೂಪಿಸಿದರು.
‘