ವಾಡಿ: ಬಿಜೆಪಿ ಕಛೇರಿಯಲ್ಲಿ ಶೌರ್ಯ ದಿನ ಆಚರಣೆ

ಪಟ್ಟಣ

ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿ ಆಚರಿಸಲಾಯಿತು….ಈ ವೇಳೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೆನೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಈ ಅಪ್ರತಿಮ ಘೋಷ ವಾಕ್ಯ ಭಾರತ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಲಕ್ಷಾಂತರ ಜನರ ಹೃದಯದಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಪ್ರಜ್ವಲಿಸುವಂತೆ ಮಾಡಿತು ಎಂದರು.

ಇಂದು ಈ ಮಹಾನ್ ನಾಯಕನ 128ನೇ ಜನ್ಮ ವಾರ್ಷಿಕೋತ್ಸವವನ್ನು ನಾವು ಕೃತಜ್ಞತೆ ಸಲ್ಲಿಸಿ ಗೌರವಿಸಿ ಪರಾಕ್ರಮ ದಿನ ಎಂದು ಆಚರಿಸುತ್ತಿದ್ದೆವೆ.

ತಮ್ಮ 16ನೇ ವಯಸ್ಸಿನಲ್ಲಿ, ಸ್ವಾಮಿ ವಿವೇಕಾನಂದ ಮತ್ತು ರಾಮಕೃಷ್ಣ ಅವರ ಕೃತಿಗಳನ್ನು ಓದಿದ ನಂತರ ಅವರ ಬೋಧನೆಗಳಿಂದ ಆಕರ್ಷಿತರಾದರು. ಸಾಮಾಜಿಕ ಸೇವೆಗಳು ಮತ್ತು ಸುಧಾರಣೆಗೆ ವಿವೇಕಾನಂದರ ಚಿಂತನೆ ಬೋಸ್ ಅವರನ್ನು ಪ್ರೇರೇಪಿಸಿತು ಮತ್ತು ಅವರ ಸಮಾಜವಾದಿ ರಾಜಕೀಯ ಸಿದ್ಧಾಂತದ ಮೇಲೆ ಪ್ರಭಾವ ಬೀರಿತು. ಮುಂದೆ ಬ್ರಿಟಿಷರ ವಿರುದ್ಧ ಸಶಸ್ತ್ರ ಕ್ರಾಂತಿಯನ್ನು ಪ್ರತಿಪಾದಿಸಿ 11 ಬಾರಿ ಜೈಲು ಪಾಲಾದರು. ಬ್ರಿಟಿಷ್ ಆಡಳಿತದ ವಿರುದ್ಧ ಅವರ ನಿರಂತರ ಚಟುವಟಿಕೆಗಳು ಆಗಾಗ್ಗೆ ಅವರ ಸೆರೆವಾಸಕ್ಕೆ ಕಾರಣವಾಯಿತು. ದುರದೃಷ್ಟವಶಾತ್, ಸುಭಾಸ್ ಚಂದ್ರ ಬೋಸ್ ಅವರು 18 ಆಗಸ್ಟ್ 1945 ರಂದು ವಿಮಾನ ಅಪಘಾತದಿಂದ ತೀವ್ರ ಸುಟ್ಟಗಾಯಗಳಿಂದ ಅಕಾಲಿಕ ಮರಣ ಹೊಂದಿದರು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮುಖಂಡರಾದ ರಾಮಚಂದ್ರ ರಡ್ಡಿ,ಗಿರಿಮಲ್ಲಪ್ಪ ಕಟ್ಟಿಮನಿ,ಶರಣಗೌಡ ಚಾಮನೂರ, ಅರ್ಜುನ ಕಾಳೆಕರ,ಹರಿ ಗಲಾಂಡೆ,ರವೀಂದ್ರ ವಾಲ್ಮೀಕ ನಾಯಕ,ಮಲ್ಲಿಕಾರ್ಜುನ ಸಾತಖೇಡ,ಯಂಕಮ್ಮ ಗೌಡಗಾಂವ, ನಿರ್ಮಲ ಇಂಡಿ,ಶರಣಮ್ಮ ಯಾದಗಿರ,ಉಮಾ ಭಾಯಿ ಗೌಳಿ,
ಬಸವರಾಜ ಹೇಮಾನಿ,
ರಮೇಶ ರಾಠೊಡ,ಅನಿಲ ಕುಮಾರ ನಿರಡಗಿ,ನಿಂಗಯ್ಯ ಗುತ್ತೆದಾರ,ಶಿವಾನಂದ ಕಟ್ಟಿಮನಿ,ತುಕೇಶ್ ಮಾಶಾಳ ಇತರರು ಇದ್ದರು.

Leave a Reply

Your email address will not be published. Required fields are marked *