ಎಲ್ಲರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಿ

ಜಿಲ್ಲೆ

ಕಲಬುರಗಿ: ಎಲ್ಲರು ಕಡ್ಡಾಯವಾಗಿ ಸಂಚಾರಿ ನಿಯಮಗಳನ್ನು ಪಾಲಿಸುವುದು ಅವಶ್ಯಕವಾಗಿದೆ ಎಂದು ಮಹಾಗಾಂವ ಪೊಲೀಸ್ ಠಾಣೆಯ ಎಎಸ್‌ಐ ಉಲಾಬಸಾಬ್ ಡಿ.ಸವಾರ್ ಹೇಳಿದರು.

ಮಹಾಗಾಂವ ಕ್ರಾಸ್ ಸಮೀಪದ ಸಿದ್ಧ ಭಾರತಿ ವಿದ್ಯಾ ಮಂದಿರ ಶಾಲೆಯಲ್ಲಿ ಕಲಬುರಗಿಯ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ‘35ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಜೀವ ಅಮೂಲ್ಯವಾದದ್ದು ಅದರ ರಕ್ಷಣೆ ತುಂಬಾ ಅಗತ್ಯವಾಗಿದೆ. ನಿರ್ಲಕ್ಷ್ಯವಹಿಸಿ ವಾಹನ ಚಲಾಯಿಸುವುದು, ಸಂಚಾರಿ ನಿಯಮಗಳನ್ನು ಪಾಲಿಸದಿರುವದರಿಂದ ಅನೇಕ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.

ಸಂಚಾರಿ ನಿಯಮಗಳ ಬಗ್ಗೆ ವಿಶೇಷವಾಗಿ ಮಾತನಾಡಿದ ಮಹಾಗಾಂವ ಪೊಲೀಸ್ ಠಾಣೆಯ ಮುಖ್ಯ ಪೇದೆ ರಾಮಚಂದ್ರ ಕಟ್ಟಳ್ಳಿ, ಇಂದಿನ ಬಾಲಕರೆ, ನಾಳಿನ ನಾಗರಿಕರಾಗಿರುವದರಿಂದ ನಿಯಮಗಳನ್ನು ತಿಳಿಸುಕೊಳ್ಳಲು ನಿರ್ಲಕ್ಷ್ಯ ಬೇಡ. ವಾಹನ ಚಲಾಯಿಸುವಾಗ ಮದ್ಯಪಾನ, ಧೂಮಪಾನ, ಮೊಬೈಲ್‌ನಲ್ಲಿ ಮಾತನಾಡುವುದು ಅಪಾಯವಾಗಿದೆ. ವಾಹನ ಚಲಾಯಿಸುವವರು ಲೈಸನ್ಸ್ ಸೇರಿದಂತೆ ಎಲ್ಲಾ ದಾಖಲಾತಿಗಳು ಹೊಂದಿರಬೇಕು. ಅತಿ ವೇಗದಿಂದ ಚಲಿಸುವುದು ಬೇಡ. ದ್ವಿಚಕ್ರದ ಮೇಲೆ ಇಬ್ಬರು ಮಾತ್ರ ಸವಾರಿ ಮಾಡಬೇಕು. ಹೆಲ್ಮೆಟ್ ಧರಿಸುವುದು, ರಸ್ತೆ ಎಡಬದಿಯಿಂದ ಚಲಿಸುವುದು, ರಸ್ತೆ ದಾಟುವಾಗ ಎರಡು ಕಡೆಯಿಂದ ವಾಹನಗಳನ್ನು ಗಮನಿಸಿ ಚಲಿಸಬೇಕು ಎಂದರು.

ನಮ್ಮ ದೇಶದಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಬ್ಬರು, ವರ್ಷಕ್ಕೆ ಸುಮಾರು 1.5 ಲಕ್ಷ ಜನರು ನಿರ್ಲಕ್ಷತನದಿಂದ ವಾಹನ ಚಲಾಯಿಸಿ ಅಪಘಾತವಾಗಿ ಸಾವನ್ನಪ್ಪುತ್ತಿದ್ದಾರೆ. ಸ್ವತಃ ವಾಹನ ಸವಾರರು ಸಾವನಪ್ಪುವುದಲ್ಲದೆ, ಮತ್ತೊಬ್ಬರ ಪ್ರಾಣಕ್ಕೆ ಕೂಡಾ ತೊಂದರೆ ಮಾಡುತ್ತಾರೆ. ನಾಗರಿಕರು ತಮಗೆ ಪೊಲೀಸ್ ಸಹಾಯ ಬೇಕಾದರೆ 112 ಸಂಖ್ಯೆಗೆ ಕರೆ ಮಾಡಬೇಕು. ರಸ್ತೆ ಸಂಚಾರ ನಿಯಮಗಳ ಬಗ್ಗೆ ಎಲ್ಲೆಡೆ ವ್ಯಾಪಕವಾದ ಜನಜಾಗೃತಿ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಸಮಾಜ ಸೇವಕ ಎಚ್.ಬಿ ಪಾಟೀಲ, ಸಮಾಜ ಸೇವಕರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಶರಣು ಎ.ಕಮಠಾಣ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕಲ್ಯಾಣರಾವ ಭುಜುರಕೆ, ಶಾಲೆಯ ಪ್ರಾಚಾರ್ಯ ಚಂದನಕುಮಾರ ಸಿಂಗ್, ಶಿಕ್ಷಕರಾದ ಸಂಜಯ ಎಲ್.ಹೊಸಮನಿ, ಜೈಭೀಮ ದೊಡ್ಡಮನಿ, ಶರಣಪ್ಪ, ಗೌಶಿಯಾ, ಭಾರತಿ, ಜಗದೇವಿ, ಲಕ್ಷಿö್ಮÃ ಬಿ., ಜಗದೀಶ್ ಬಿರಾದಾರ, ಮಲ್ಲಿಕಾರ್ಜುನ, ರಾಜೇಂದ್ರ ಕಣ್ಣಿ ಹಾಗೂ ವಿದ್ಯಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *