40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ: 1.4 ಕೋಟಿ ರೂ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ

ಸುದ್ದಿ ಸಂಗ್ರಹ ಗಾಜಿಯಾಬಾದ್ಭರ್ಜರಿ ವೇತನ ಪಡೆಯುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಓರ್ವ ಇದೀಗ ದಿಢೀರ್ ಕೆಲಸ ಕಳೆದುಕೊಂಡು ತನ್ನ ಮನೆ ಉಳಿಸಿಕೊಳ್ಳಲು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಧಾರುಣ ಕಥೆ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಸಾಫ್ಟ್’ವೇರ್ ಉದ್ಯೋಗ, ಕೈ ತುಂಬ ಸಂಬಳ ಎಂದು ಮಿತಿಮೀರಿ ಖರ್ಚು ಮಾಡುವವರೆ ಹೆಚ್ಚು, ಆದರೆ ಉಳಿತಾಯ ಎನ್ನುವುದು ಇಲ್ಲದೆ ಹೋದರೆ ಎಂತಹ ದೊಡ್ಡ ಸಂಬಳ ಕೂಡ ಮನಷ್ಯನನ್ನು ಸಂಕಷ್ಟದಿಂದ ರಕ್ಷಿಸಲಾರದು ಎಂಬುದಕ್ಕೆ ಇದು ದೊಡ್ಡ ನಿದರ್ಶನವಾಗಿದೆ. ಉತ್ತರ ಪ್ರದೇಶದ […]

Continue Reading

ಅಂಗವಿಕಲನಿಂದ 95 ಲಕ್ಷ ಪಡೆದು ವಂಚಿಸಿದ ಐಎಎಸ್‌ ಅಧಿಕಾರಿ: ಹಣ ಕೇಳಿದ ವ್ಯಕ್ತಿಗೆ ಕೊಲೆ ಬೆದರಿಕೆ

ಸುದ್ದಿ ಸಂಗ್ರಹ ಭುವನೇಶ್ವರ ಒಡಿಶಾದ ರಾಜ್ಯದ ಗೃಹ ಇಲಾಖೆಯಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಐಎಎಸ್ ಅಧಿಕಾರಿಯೊಬ್ಬರ ವಿರುದ್ಧ 95 ಲಕ್ಷ ರೂ. ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದೆ. ಐಎಎಸ್‌ ಅಧಿಕಾರಿ ಆರಾಧನಾ ದಾಸ್ ವ್ಯಕ್ತಿಯೊಬ್ಬರಿಗೆ ಭೂಮಿ ಕೊಡಿಸುವ ಭರವಸೆ ನೀಡಿ 95 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ. ಭೂಮಿ ಸಿಗದ ಕಾರಣ ಹಣ ವಾಪಸ್‌ ಕೇಳಿದಾಗ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಏನಿದು ಘಟನೆ ?ಆರಾಧನಾ ದಾಸ್ ಅವರು ಕಟಕ್ […]

Continue Reading

ಮಸೀದಿ ಬಳಿ ಕಾಮಗಾರಿಗೆ ನೆಲ ಅಗೆಯುವಾಗ ರಾಮ-ಸೀತೆಯ ವಿಗ್ರಹ ಪತ್ತೆ

ಭೋಪಾಲ್: ಮಧ್ಯಪ್ರದೇಶದ ಸಾಗರ ಗ್ರಾಮದಲ್ಲಿನ ಜಾಮಾ ಮಸೀದಿ ಬಳಿ ಕಾಮಗಾರಿಗಾಗಿ ನೆಲ ಅಗೆಯುತ್ತಿರುವಾಗ ರಾಮ-ಸೀತೆಯ ವಿಗ್ರಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಊರಿನವರು ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಜಮಾಯಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಹತೋಟಿಗೆ ತೆಗೆದುಕೊಂಡಿದ್ದಾರೆ. ಇದರ ವಿಡಿಯೋ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಗ್ರಾಮದವರು ಹೇಳುವ ಪ್ರಕಾರ, ಕಾಮಗಾರಿ ನಡೆಯುತ್ತಿದ್ದ ಜಾಗದಲ್ಲಿ ಹಿಂದೆ ದೇವಾಲಯವಿತ್ತು. ಆ ಜಾಗವನ್ನು ಬಹಳ ಹಿಂದೆಯೇ ರಾಜರ ಆಳ್ವಿಕೆಯ ಕಾಲದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಇದರಿಂದಾಗಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ […]

Continue Reading

ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತ: ಐಸಿಯುನಲ್ಲೆ ತಾಳಿ ಕಟ್ಟಿದ ವರ

ತಿರುವನಂತಪುರ: ಮದುವೆ ದಿನ ಮೇಕಪ್ ಮಾಡಿಸಿಕೊಳ್ಳಲು ತೆರಳುತ್ತಿದ್ದ ವಧುವಿಗೆ ಅಪಘಾತವಾಗಿ ಆಸ್ಪತ್ರೆಯ ಐಸಿಯುನಲ್ಲೆ ವರ ತಾಳಿ ಕಟ್ಟಿದ ಅಪರೂಪದ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಕೇರಳದ ಆಲಪ್ಪುಳದ ಥುಂಬೋಳಿಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಆಳಪ್ಪುಳ ನಿವಾಸಿ ಅವನಿ ಹಾಗೂ ಥುಂಬೋಳಿ ನಿವಾಸಿ ಶರೋನ್ ವಿವಾಹ ಶುಕ್ರವಾರ ನಿಗದಿಯಾಗಿತ್ತು. ಈ ಹಿನ್ನೆಲೆ ವಧು ಅವನಿ ಮೇಕಪ್ ಮಾಡಿಸಿಕೊಳ್ಳಲೆಂದು ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವನಿಯ ಬೆನ್ನುಮೂಳೆಗೆ ತೀವ್ರ ಗಾಯವಾಗಿ ವಿಪಿಎಸ್ […]

Continue Reading

ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದ ಭಾರತ ತಂಡಕ್ಕೆ ಸಿಕ್ಕ ಬಹುಮಾನ ಎಷ್ಟು ಕೋಟಿ ?

ಮುಂಬೈ: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ರವಿವಾರ ನಡೆದ 2025ರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿದ ಭಾರತೀಯ ಮಹಿಳಾ ತಂಡ, ಚೊಚ್ಚಲ ಬಾರಿಗೆ ವಿಶ್ವಕಪ್ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಗೆಲುವಿನೊಂದಿಗೆ ತಂಡವು ದಾಖಲೆಯ ಮೊತ್ತದ ಬಹುಮಾನ ತನ್ನದಾಗಿಸಿಕೊಂಡಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದಂತೆ, ಚಾಂಪಿಯನ್ ಭಾರತ ತಂಡವು ಬರೋಬ್ಬರಿ 39.78 ಕೋಟಿ ರೂ (4.48 ಮಿಲಿಯನ್ ಡಾಲರ್‌) ಬಹುಮಾನ ಪಡೆಯಲಿದೆ. ಇದು ಮಹಿಳಾ […]

Continue Reading

ಬಿಹಾರ ಚುನಾವಣೆ: ಕೊಳಕ್ಕೆ ಧುಮುಕಿ ಮೀನು ಹಿಡಿದ ರಾಹುಲ್‌

ಪಾಟ್ನಾ: ಬಿಹಾರ ಚುನಾವಣಾ ಪ್ರಚಾರದಲ್ಲಿರುವ ರಾಹುಲ್‌ ಗಾಂಧಿ ಇಂದು ಬೇಗುಸರೈಯ ಹಳ್ಳಿಯ ಕೊಳದಲ್ಲಿ ಮೀನು ಹಿಡಿದು ಸುದ್ದಿಯಾಗಿದ್ದಾರೆ. ತಮ್ಮ ಭಾಷಣವನ್ನು ಮುಗಿಸಿದ ನಂತರ ರಾಹುಲ್ ಸುಮಾರು 3 ಕಿ.ಮೀ. ದೂರ ಪ್ರಯಾಣ ಬೆಳೆಸಿ, ಬೇಗುಸರೈ ವಿಧಾನಸಭಾ ಕ್ಷೇತ್ರದ ಭರ್ರಾ ಗ್ರಾಮಕ್ಕೆ ತೆರಳಿದರು. ಕೊಳ ತಲುಪಿದ ರಾಹುಲ್ ಬಲೆ ಬೀಸುತ್ತಿರುವ ಮೀನುಗಾರರನ್ನು ಭೇಟಿ ಮಾಡಲು ಸಣ್ಣ ದೋಣಿ ಹತ್ತಿದರು. ಈ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್‌ ನೀರಿಗೆ ಹಾರಿದಾಗ ರಾಹುಲ್ ಹಾರಿದರು. ಈ ವೇಳೆ ಅಲ್ಲಿ ಸೇರಿದ್ದ ಗ್ರಾಮಸ್ಥರು ಚಪ್ಪಾಳೆ […]

Continue Reading

ಅಯೋಧ್ಯೆ ರಾಮಮಂದಿರಕ್ಕೆ 3 ಸಾವಿರ ಕೋಟಿ ದೇಣಿಗೆ: 1500 ಕೋಟಿ ರೂ. ಖರ್ಚು

ಅಯೋಧ್ಯೆ: ರಾಮಮಂದಿರಕ್ಕೆ 3,000 ಕೋಟಿ ರೂ. ಹರಿದುಬಂದಿದ್ದು, ಅದರಲ್ಲಿ ದೇಗುಲ ಸಂಪೂರ್ಣ ನಿರ್ಮಾಣಕ್ಕೆ 1,500 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ. ಅಯೋಧ್ಯೆ ರಾಮಮಂದಿರವನ್ನು ಈಗ ಸಂಪೂರ್ಣವಾಗಿ ನಿರ್ಮಿಸಲಾಗಿದೆ. ಭಗವಾನ್ ರಾಮನಿಗೆ ಸಮರ್ಪಿತವಾದ ಭವ್ಯ ದೇವಾಲಯವು ಪವಿತ್ರ ಸಂಕೀರ್ಣದ ಒಳಗೆ ಆರು ಸಹಾಯಕ ದೇವಾಲಯಗಳೊಂದಿಗೆ ಪೂರ್ಣಗೊಂಡಿದೆ. ಶಿವ, ಗಣೇಶ, ಹನುಮಾನ್, ಸೂರ್ಯ, ಭಗವತಿ ಮತ್ತು ಅನ್ನಪೂರ್ಣ ದೇವಿಗೆ ಮೀಸಲಾಗಿರುವ ದೇವಾಲಯಗಳ ನಿರ್ಮಾಣ ಪೂರ್ಣಗೊಂಡಿದೆ ಎಂದು ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ. ದೇವಾಲಯ […]

Continue Reading

ದೀಪಾವಳಿ ಗಿಫ್ಟ್‌: ದುಬಾರಿ ಕಾರುಗಳನ್ನು ನೀಡಿ ಹೃದಯ ಶ್ರೀಮಂತಿಕೆ ಮೆರೆದ ಉದ್ಯಮಿ

ಚಂಡೀಗಢ: ಉದ್ಯೋಗಿಗಳ ಕಾರ್ಯಗಳನ್ನು ಗುರುತಿಸುವ ವಿನೂತನ ಮಾದರಿಯನ್ನು ಕಳೆದ ಕೆಲ ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಔಷಧ ತಯಾರಿಕಾ ಕಂಪನಿಯ ಮಾಲೀಕ ಎಂ.ಕೆ ಭಾಟಿಯಾ, ಈ ದೀಪಾವಳಿಗೂ ಕಂಪನಿ ನೌಕರರಿಗೆ ಭರ್ಜರಿ ಉಡುಗೊರೆಯನ್ನು ನೀಡಿದ್ದಾರೆ. ಬೋನಸ್, ಸ್ವೀಟ್ ಬದಲಿಗೆ ದುಬಾರಿ ಕಾರುಗಳನ್ನೇ ಉಡುಗೊರೆಯಾಗಿ ನೀಡಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ. ಹರಿಯಾಣದ ಖ್ಯಾತ ಉದ್ಯಮಿ ಹಾಗೂ ಮಿಟ್ಸ್ ಕಾರ್ಟ್ ಸಂಸ್ಥೆಯ ಮಾಲೀಕ ಎಂ.ಕೆ ಭಾಟಿಯಾ ನೌಕರರಿಗೆ ಈ ಬಾರಿಯೂ ದುಬಾರಿ ಕಾರು ಗಿಫ್ಟ್ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ […]

Continue Reading

ತಮಿಳುನಾಡಿನಲ್ಲಿ ರಾವಣನ ಬದಲು ರಾಮನ ಪ್ರತಿಕೃತಿ ದಹಿಸಿದ ಗುಂಪು, ಒರ್ವನ ಬಂಧನ

ತಿರುಚ್ಚಿ: ತಮಿಳುನಾಡಿನ ತಿರುಚ್ಚಿಯಲ್ಲಿ ಪುರುಷರ ಗುಂಪೊಂದು ರಾವಣನ ಬದಲು ಶ್ರೀರಾಮನ ಪ್ರತಿಕೃತಿ ದಹಿಸಿ ಜನರ ಕೆಂಗಣ್ಣಿಗೆ ಗುರಿಯಾಗಿದೆ. ರಾಮನ ಪ್ರತಿಕೃತಿ ದಹಿಸಿದ್ದಷ್ಟೇ ಅಲ್ಲದೆ ರಾವಣನ ಸ್ತುತಿಯನ್ನು ಪಠಿಸಿದ್ದಾರೆ. ‘ಫಿಫ್ತ್​ ತಮಿಳು ಸಂಗಮ್’ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಈ ದೃಶ್ಯಗಳು ತ್ವರಿತವಾಗಿ ವೈರಲ್ ಆಗಿದ್ದು, ಪೊಲೀಸ್ ಕ್ರಮಕ್ಕೆ ಕಾರಣವಾಯಿತು. ವೀಡಿಯೊದಲ್ಲಿ, ಪುರುಷರು ರಾಮನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಾ ರಾವಣನನ್ನು ಸ್ತುತಿಸಿ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು. ಸೈಬರ್ ಕ್ರೈಂ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ […]

Continue Reading

ಹುಂಡಿಯಿಂದ ಹಣ ಕದ್ದು ಆಸ್ತಿ ಖರೀದಿ: 7 ಆಸ್ತಿಗಳು ತಿರುಪತಿಗೆ ದಾನ ಮಾಡಿದ ದಂಪತಿ

ತಿರುಮಲ: ತಿರುಪತಿ ದೇಶದ ಅತ್ಯಂತ ಶ್ರೀಮಂತ, ಅತಿ ಹೆಚ್ಚು ಆದಾಯ ತರುವ ದೇವಾಲಯಗಳಲ್ಲಿ ಒಂದು ತಿರುಪತಿ ತಿಮ್ಮಪ್ಪನಿಗೆ ದುಡ್ಡು ನೀಡಿದಷ್ಟು ದುಪ್ಪಟ್ಟು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಹಿಂದು ಸಮುದಾಯದ ಭಕ್ತರಿಗೆ ಇರುವುದರಿಂದ ಭಕ್ತರು ಸಾಕಷ್ಟು ವಸ್ತುಗಳನ್ನು ತಿಮ್ಮಪ್ಪನಿಗೆ ದಾನ ಮಾಡುತ್ತಾರೆ. ದಿನವೂ ಇಲ್ಲಿನ ದೇಗುಲಕ್ಕೆ 60 ಸಾವಿರದಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಬರುತ್ತಾರೆ. ಲಕ್ಷಾಂತರ ಮೊತ್ತದ ಹಣವನ್ನು ಇಲ್ಲಿನ ಹುಂಡಿಗಳಿಗೆ ಹಾಕಿ ತೆರಳುತ್ತಾರೆ. ಬರಿ ಹಣ ಮಾತ್ರವಲ್ಲದೆ, ಚಿನ್ನ, ಬೆಳ್ಳಿ, ಆಭರಣಗಳು ಸೇರಿದಂತೆ ಲಕ್ಷಾಂತರ ಮೌಲ್ಯದ ವಸ್ತುಗಳು […]

Continue Reading