ಓಲಾ, ಉಬರ್‌ ರೀತಿ ದೇಶದಲ್ಲಿ ಕೇಂದ್ರ ಸರ್ಕಾರದಿಂದ ಸಹಕಾರಿ ಟ್ಯಾಕ್ಸಿ ಸೇವೆ: ಅಮಿತ್ ಶಾ ಘೋಷಣೆ

ನವದೆಹಲಿ: ದೇಶದಲ್ಲಿ ಸಹಕಾರ ಟ್ಯಾಕ್ಸಿ ಸೇವೆ ಶೀಘ್ರದಲ್ಲಿ ಆರಂಭವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಅಮಿತ್‌ ಶಾ ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ. ಓಲಾ, ಊಬರ್‌ ರೀತಿಯಲ್ಲಿ ಈ ಸೇವೆ ಕೆಲಸ ಮಾಡಲಿದೆ ಇದರ ಎಲ್ಲಾ ಬೆನಿಫಿಟ್‌ ನೇರವಾಗಿ ಚಾಲಕರಿಗೆ ಸಿಗಲಿದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಟ್ಯಾಕ್ಸಿ ಚಾಲಕರಿಗಾಗಿ ರಾಷ್ಟ್ರೀಯ ಮಟ್ಟದ ಸಹಕಾರಿ ಸಂಘಟನೆ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ. ಓಲಾ ಮತ್ತು ಉಬರ್ ನಂತಹ ರೈಡ್-ಹೇಲಿಂಗ್ ಪ್ಲಾಟ್‌ಫಾರ್ಮ್‌ ಮಾದರಿಯನ್ನು ಅನುಸರಿಸಿ ಚಾಲಕರಿಗೆ ಉತ್ತಮ […]

Continue Reading

ದೇಶಾದ್ಯಂತ UPI ಸೇವೆಗಳಲ್ಲಿ ವ್ಯತ್ಯಯ

ನವದೆಹಲಿ: ದೇಶಾದ್ಯಂತ ಯುಪಿಐ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಗ್ರಾಹಕರು ಬೇರೆಯವರಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಗೂಗಲ್‌ಪೇ, ಫೋನ್‌ಪೇ, ಪೇಟಿಎಂ ಸೇರಿದಂತೆ ಹಲವಾರು ಯುಪಿಐ ಸಂಯೋಜಿತ ಅಪ್ಲಿಕೇಶನ್‌ಗಳಲ್ಲಿ ಏಕಕಾಲಕ್ಕೆ ಸಮಸ್ಯೆಯಾಗಿದೆ. ಯಾವ ಕಾರಣಕ್ಕೆ ಈ ಸಮಸ್ಯೆ ಎದುರಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಜನರು ತಮಗೆ ಸಮಸ್ಯೆಯಾದ ಬಗ್ಗೆ ಪೋಸ್ಟ್‌ ಮಾಡುತ್ತಿದ್ದಾರೆ.

Continue Reading

ಮಧುಮೇಹ ಔಷಧ ಬೆಲೆ ಶೇ.90 ಇಳಿಕೆ

ನವದೆಹಲಿ: ಮಧುಮೇಹಿಗಳು ಬಳಸುವ ಎಂಪಾಗ್ಲಿಫ್ಲೋಜಿನ್‌ ಅಂಶದ ಮಾತ್ರೆಯ ಬೆಲೆ 90% ರಷ್ಟು ಕಡಿತವಾಗಿದೆ. ಪೇಟೆಂಟ್‌ ಅವಧಿ ಮುಗಿದ ಕಾರಣ ಹಲವಾರು ದೇಶೀಯ ಔಷಧ ತಯಾರಕರು ಜೆನೆರಿಕ್ ಮಾದರಿ ಬಿಡುಗಡೆ ಮಾಡುವದಾಗಿ ಘೋಷಿಸಿವೆ. ಮಧುಮೇಹ ಔಷಧ ಎಂಪಾಗ್ಲಿಫ್ಲೋಜಿನ್‌ನ ಬೆಲೆ 90% ರಷ್ಟು ಕುಸಿದಿದೆ. ಮ್ಯಾನ್‌ಕೈಂಡ್ ಫಾರ್ಮಾ, ಅಲ್ಕೆಮ್ ಲ್ಯಾಬೊರೇಟರೀಸ್, ಗ್ಲೆನ್‌ಮಾರ್ಕ್, ಕೊರೊನಾ ರೆಮಿಡೀಸ್ ಕೆಲವು ಕಂಪನಿಗಳನ್ನು ಬಿಡುಗಡೆ ಮಾಡಿದೆ, ಹೆಚ್ಚಿನ ಭಾರತೀಯ ರೋಗಿಗಳಿಗೆ ಈ ಔಷಧವನ್ನು ಕೈಗೆಟುಕುವಂತೆ ಮಾಡಿದೆ. ಮಾರುಕಟ್ಟೆ ಪಾಲಿನ ದೃಷ್ಟಿಯಿಂದ ಭಾರತದ ನಾಲ್ಕನೇ ಅತಿದೊಡ್ಡ ಕಂಪನಿಯಾದ […]

Continue Reading

ಬಾಹ್ಯಾಕಾಶದಲ್ಲಿ ಮತ್ತೊಂದು ಇತಿಹಾಸ ಸೃಷ್ಟಿಸಿದ ಇಸ್ರೋ, ಮಹತ್ವಾಕಾಂಕ್ಷೆಯ SpaDeX ಮಿಷನ್ ಸಕ್ಸಸ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಬಾಹ್ಯಾಕಾಶ ಲೋಕದಲ್ಲಿ ಮತ್ತೊಂದು ಮಹತ್ವದ ಇತಿಹಾಸವನ್ನು ಸೃಷ್ಟಿಸಿದೆ. Spacex ಮಿಷನ್ ಅಡಿಯಲ್ಲಿ ಬಾಹ್ಯಾಕಾಶ ನೌಕೆ ಡಾಕಿಂಗ್ ಪ್ರಕ್ರಿಯೆಯು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇಸ್ರೋದ ಬಾಹ್ಯಾಕಾಶ ನೌಕೆ ಡಾಕಿಂಗ್ ಪ್ರಕ್ರಿಯೆಯು ಯಶಸ್ವಿಯಾಗಿದೆ. ಅಂದರೆ ಇಸ್ರೋ ಎರಡೂ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಜೋಡಿಸಿದೆ. ಅಮೆರಿಕ, ರಷ್ಯಾ, ಚೀನಾ ನಂತರ ಭಾರತ ಈ ಸಾಧನೆ ಮಾಡಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು 2025 ರಲ್ಲಿ ಇಸ್ರೋದ ಮೊದಲ ಪ್ರಮುಖ ಯಶಸ್ಸು ಎಂಬುದು ಗಮನಾರ್ಹ. ಈ […]

Continue Reading

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ NET ಕಡ್ಡಾಯವಲ್ಲ: ಅಧ್ಯಾಪಕರ ನೇಮಕಾತಿಗಾಗಿ UGC ಕರಡು ನಿಯಮ ಪ್ರಕಟ

ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಾಪಕರ ನೇಮಕಾತಿ ಮತ್ತು ಬಡ್ತಿಗಾಗಿ ಸೋಮವಾರ ಬಿಡುಗಡೆ ಮಾಡಿದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ ಕರಡು ಮಾರ್ಗಸೂಚಿಗಳ ಪ್ರಕಾರ, ಸಹಾಯಕ ಪ್ರಾಧ್ಯಾಪಕರಾಗಿ ನೇಮಕಾತಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ ಕ್ಲಿಯರಿಂಗ್ ಇನ್ನು ಮುಂದೆ ಕಡ್ಡಾಯ ಅರ್ಹತೆಯಾಗಿರುವುದಿಲ್ಲ. ಕರಡು ನಿಯಮಗಳು ಅಧ್ಯಾಪಕರ ನೇಮಕಾತಿಗಳಿಗಾಗಿ ಅಸ್ತಿತ್ವದಲ್ಲಿರುವ ಅರ್ಹತಾ ಮಾನದಂಡಗಳಿಂದ ಜಟಿಲತೆಯನ್ನು ತೆಗೆದುಹಾಕುವುದರ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 ಗೆ ಅನುಗುಣವಾಗಿ ವೈವಿಧ್ಯಮಯ, ಬಹುಶಿಸ್ತೀಯ ಹಿನ್ನೆಲೆಯಿಂದ […]

Continue Reading

ಚಿನ್ನ ಮಾತ್ರವಲ್ಲ, ಇನ್ನುಮುಂದೆ ಬೆಳ್ಳಿಗೂ ಹಾಲ್‌ಮಾರ್ಕ್‌

ನವದೆಹಲಿ: ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಬೆಳ್ಳಿ ಮತ್ತು ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಜಾರಿಗೆ ತರಲು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್) ಪರಿಗಣಿಸಬೇಕು ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಬೆಳ್ಳಿಯ ಹಾಲ್‌ಮಾರ್ಕ್‌ಗಾಗಿ ಗ್ರಾಹಕರಿಂದ ಬೇಡಿಕೆಯಿದೆ. ನೀವು (BIS) ಈ ಬಗ್ಗೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬಹುದು ಎಂದು 78ನೇ BIS ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಉತ್ಪನ್ನದ ದೃಢೀಕರಣವನ್ನು ಖಾತರಿಪಡಿಸುವ […]

Continue Reading

ಸಿದ್ದರಾಮಯ್ಯ ದೇಶದಲ್ಲೇ 3ನೇ ಶ್ರೀಮಂತ ಮುಖ್ಯಮಂತ್ರಿ, ನಂಬರ್‌ ಒನ್‌ ಯಾರು ?

ನವದೆಹಲಿ: ದೇಶದಲ್ಲೇ ಅತಿ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರನೇ ಸ್ಥಾನದಲ್ಲಿದ್ದಾರೆ. ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್‌ ವಾಚ್‌ ಸಂಸ್ಥೆ ಸರ್ವೆ ನಡೆಸಿ ವರದಿ ಬಿಡುಗಡೆ ಮಾಡಿದೆ. ವರದಿ ಪ್ರಕಾರ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಂಬರ್‌ 1 ಹಾಗೂ ಅರುಣಾಚಲ ಪ್ರದೇಶದ ಪೆಮಾ ಖಂಡು ಅವರು ನಂಬರ್‌ 2 ಶ್ರೀಮಂತ ಮುಖ್ಯಮಂತ್ರಿಗಳಾಗಿದ್ದಾರೆ. ಆಂಧ್ರ ಮುಖ್ಯಮಂತ್ರಿ 931 ಕೋಟಿ ಹಾಗೂ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ 332 ಕೋಟಿ […]

Continue Reading