ಸುದ್ದಿ ಸಂಗ್ರಹ ಸೇಡಂ
ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಸುರಿದ ಗುಡುಗು, ಸಿಡಿಲು ಮಿಶ್ರಿತ ಮಳೆಗೆ ಮತ್ತೊಬ್ಬ ವ್ಯಕ್ತಿ ಮತ್ತು ಒಂದು ಎತ್ತು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಜಾಕನಪಲ್ಲಿ ಗ್ರಾಮದ ಆಶಪ್ಪ ಕಂಪಿನ್ (60) ಮೃತರು. ಅವರು ಹೊಲದಲ್ಲಿನ ಕಸ-ಕಟ್ಟಿಗೆ ಸುಡಲು ಹೋಗಿದ್ದರು. ಆ ಸಂದರ್ಭದಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಅಲ್ಲದೆ ಗ್ರಾಮದ ದೂರದಲ್ಲಿರುವ ದೊಡ್ಡಿಯಲ್ಲಿ ಕಟ್ಟಿದ ಎತ್ತೊಂದು ಸಿಡಿಲು ಬಡಿದು ಮೃತಪಟ್ಟಿದೆ. ಚಂದ್ರಪ್ಪ ಪುಲಮೋ ಅವರಿಗೆ ಸೇರಿದ ಎತ್ತು ಇದಾಗಿದೆ. ಜಾಕನಪಲ್ಲಿ ಗ್ರಾಮಕ್ಕೆ ಮುಧೋಳ ಪೊಲೀಸರು ಮತ್ತು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಸಂಜೆಯಷ್ಟೆ ಸಿಡಿಲು ಬಡಿದು ಸೇಡಂ ತಾಲೂಕಿನ ಪಾಕಾಲ ಗ್ರಾಮದ ಲಕ್ಷ್ಮಣ ಬಡಿಗೇರ ಮೃತಪಟ್ಟಿದ್ದರು.