ಸುದ್ದಿ ಸಂಗ್ರಹ

ಕಲಬುರಗಿ ನಗರದಲ್ಲಿ ಶ್ರೀ ಕೋರಿಸಿದ್ದೇಶ್ವರರ ಮೂರ್ತಿ ಪ್ರಾಣಪ್ರತಿಷ್ಠಾಪನೆ/ಕರುಣೇಶ್ವರ ನಗರದಲ್ಲಿ ನವೀಕೃತ ಶಾಖಾಮಠದ ಲೋಕಾರ್ಪಣೆ

ಬಾಗಿ ಬರುವ ಭಕ್ತರ ಬವಣೆ ಕಳೆಯುವ ಸಮರ್ಥ ಶಕ್ತಿ ಕೋರಿಸಿದ್ದೇಶ್ವರರು: ನಾಲವಾರ ಶ್ರೀ

ಕಲಬುರಗಿ : ಗುರುಮುಟ್ಟಿ ಗುರುವಾದ, ಭಕ್ತರು ಕೋರಿದ ಬೇಡಿಕೆಗಳನ್ನು ಈಡೇರಿಸುವ ಸಿದ್ಧಿಪುರುಷ ಶ್ರೀ ಕೋರಿಸಿದ್ದೇಶ್ವರರ ಹೊಸ ಮೂರ್ತಿ ಹಾಗೂ ಲಿಂಗೈಕ್ಯ ಶ್ರೀ ತೋಟೇಂದ್ರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ, ನವೀಕೃತಗೊಂಡ ಶ್ರೀ ಮಠದ ಕಟ್ಟಡದ ನೂತನ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮವು ಕಲಬುರಗಿ ನಗರದ ಕರುಣೇಶ್ವರ ಬಡಾವಣೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಭಕ್ತಿಭಾವದಿಂದ ನೆರವೇರಿತು.

ಗೌರಿಹುಣ್ಣಿಮೆಯ ಶುಭದಿನದಂದು ವೈದಿಕ ವೃಂದದ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಎಲ್ಲ ಕಾರ್ಯಗಳು ನೆರವೇರಿದವು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕರುಣೇಶ್ವರ ನಗರ ಶಾಖಾ ಮಠದ ಶ್ರೀ ಕೋರಿಸಿದ್ದೇಶ್ವರರ ದೇವಾಲಯವು ಸುಸಜ್ಜಿತವಾಗಿ ನಿರ್ಮಾಣವಾಗಲು ಈ ನಗರದ ಸಕಲ ಭಕ್ತರ ತನು-ಮನ-ಧನದ ನಿಸ್ವಾರ್ಥ ಸಹಕಾರವೇ ಮೂಲ ಕಾರಣ ಎಂದು ಹೃದಯಸ್ಪರ್ಶಿಯಾಗಿ ನುಡಿದರು.

ದೇವಾಲಯವೆಂದರೆ ಕೇವಲ ಕಲ್ಲು ಮತ್ತು ಸುಣ್ಣದಿಂದ ಕಟ್ಟಿದ ಕಟ್ಟಡವಲ್ಲ; ಅದು ಭಕ್ತರ ಶ್ರದ್ಧೆಯಿಂದ ನಿರ್ಮಾಣವಾದ ಜೀವಂತ ಶಕ್ತಿಕೇಂದ್ರ. ಭಕ್ತಿಯು ಕೇವಲ ದೇವಾಲಯದ ಗೋಡೆಗಳಲ್ಲಿ ಸೀಮಿತವಾಗಬಾರದು; ಅದು ಮನೆ-ಮನಗಳಲ್ಲಿ, ಬಡಾವಣೆಯ ಪ್ರತಿಯೊಂದು ಹೃದಯದಲ್ಲಿ ಅರಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಬರಲಿರುವ ದಿನಗಳಲ್ಲಿ ಈ ಬಡಾವಣೆಯ ಸದ್ಭಕ್ತರು ಏಕತೆಯ ಭಾವನೆಯಿಂದ, ಒಂದೇ ಮನಸ್ಸಿನಿಂದ ಶ್ರೀ ಕೋರಿಸಿದ್ದೇಶ್ವರರ ಮಠದ ಅಭಿವೃದ್ಧಿಗೆ ಶ್ರಮಿಸಿದರೆ, ಇದೊಂದು ಮಠ ಭೂಮಿಯ ಮೇಲಿನ ಕೈಲಾಸವಾಗಿ ಗೋಚರಿಸುವುದು ಎಂದು ಅವರು ಆಶೀರ್ವದಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಶೈಲ ಸಾರಂಗಧರ ಸಂಸ್ಥಾನ ಹಾಗೂ ಸುಲಫಲ ಮಠದ ಪೀಠಾಧಿಪತಿಗಳಾದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜಾತಿ-ಮತ-ಪಂಥಗಳ ಎಲ್ಲೆಯನ್ನು ಮೀರಿ ಎಲ್ಲರೂ ನನ್ನವರು ಎಂದು ಅಪ್ಪಿಕೊಳ್ಳುವ ಮಮತಾಮಯಿ ಪೂಜ್ಯರೆಂದರೆ ನಾಲವಾರದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಎಂದು ಬಣ್ಣಿಸಿದರು.

ಕಲಬುರಗಿ ನಗರದಲ್ಲಿ ಸದ್ಗುರು ಶ್ರೀ ಕೋರಿಸಿದ್ದೇಶ್ವರರ ಶಾಖಾಮಠದ ಮೂಲಕ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಗಳು ನಿರಂತರವಾಗಿ ನಡೆಯಲಿ. ನಾಲವಾರದ ಪರಮಪೂಜ್ಯರು ಭಕ್ತರನ್ನು ಸುಸಂಸ್ಕೃತವಾಗಿ ಬೆಳೆಸುತ್ತಿದ್ದು, ಲಕ್ಷಾಂತರ ಭಕ್ತರ ಪಾಲಿಗೆ ಅವರು ಭಗವಂತನ ಸ್ವರೂಪರಾಗಿದ್ದಾರೆ ಎಂದರು.

ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತರಾದ ಶ್ರೀ ದೇವಯ್ಯ ಗುತ್ತೇದಾರ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ರೀಮಠಕ್ಕೆ ವಿವಿಧ ರೀತಿಯಲ್ಲಿ ಭಕ್ತಿಸೇವೆ ಸಲ್ಲಿಸಿದ ಶ್ರೀ ಬಸವರಾಜ್ ಮುಕ್ಕಾಣಿ ಬಳಬಟ್ಟಿ. ಶ್ರೀ ಆನಂದ ಮದುರಿ. ಶ್ರೀ ಜಗದೀಶ್ ಶಾಸ್ತ್ರಿಗಳು ಸನ್ನತಿ ಯವರಿಂದ ವೈದಿಕ. ಸೇವೆ ನೆರವೇರಿತು
ಸೇರಿದಂತೆ ಹಲವಾರು ಸದ್ಭಕ್ತರನ್ನು ಶ್ರೀಮಠದ ಗುರುರಕ್ಷೆ ನೀಡಿ ವಿಶೇಷವಾಗಿ ಸತ್ಕರಿಸಿ ಆಶೀರ್ವದಿಸಲಾಯಿತು.

ಗುರುಪರಂಪರೆಯ ಸ್ಮರಣೆ, ಭಕ್ತರ ಸಮರ್ಪಣೆ ಮತ್ತು ಸಮಾಜದ ಏಕತೆ – ಈ ಮೂರೂ ಸಂಗಮವಾದ ಈ ಪುಣ್ಯ ಸಂದರ್ಭವು ಕರುಣೇಶ್ವರ ನಗರದ ಭಕ್ತರ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿ ಉಳಿಯಿತು.
ಈ ಸಂದರ್ಭದಲ್ಲಿ ಪೂಜ್ಯಶ್ರೀ ಗಳವರಿಗೆ ಶ್ರೀಮಠದ ಭಕ್ತಾದಿಗಳಾದ ಶ್ರೀ ಶಿವಲಿಂಗನಹಳ್ಳಿ ಬೆಂಗಳೂರು. ಬಸರೆಡ್ಡಿ ಗೌಡ ಪಾಲಪ್ ಗೋಳು. ಚಿತ್ತಾಪುರ. ಶಿವ ಶರಣ ಪಾಟೀಲ್ ಗುಡೂರ್. ಮಲ್ ರೆಡ್ಡಿ ಗೌಡ ಗುರ್ಜಾಲ್. ಶ್ರೀ ಚನ್ನಬಸಪ್ಪ ಬಿರೇದಾರ್. ವಿಶ್ವನಾಥ್ ಬಸುರಾಜ್ ಪಾಟೀಲ್ ಸೋಮನಾಥಳ್ಳಿ. ಭಕ್ತರಿಂದ ತುಲಾಭಾರ ನೆರವೇರಿತು.
ವೇದಿಕೆಯಲ್ಲಿ ಹೊನ್ನಕಿರಣಿಗಿಯ ಪೂಜ್ಯ ಷ.ಬ್ರ. ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು, ಕರಡುಕಲ್ಲದ ಶ್ರೀ ಕೋರಿಸಿದ್ದೇಶ್ವರರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಗಳು ಉಪಸ್ಥಿತರಿದ್ದರು. ಪ್ರತ್ಯಕ್ಷ ಗಾರೆಂಪಲ್ಲಿ ಚಿತ್ತಾಪುರ ಇವರಿಂದ ಭರತನಾಟ್ಯ ನಡೆಯಿತು ತೃಪ್ತಿ ಪಾಟೀಲ್ ಪ್ರಾಸ್ತಾವಿಕ ನುಡಿ ಗೈದರು ಖ್ಯಾತ ಪ್ರವಚನಕಾರರಾದ ವೇ.ಮೂ. ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಕಾರ್ಯಕ್ರಮ ನಿರೂಪಿಸಿದರು. ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು. ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ಸೇರಿದಂತೆ ಕಲಬುರಗಿ ನಗರದ ಹಿರಿಯ ನಾಯಕರು ಶ್ರೀ ಕರಣಯ್ಯ ಹಿರೇಮಠ ಆಂದೋಲ. ಗುರು ಬಸ್ ಪಾಟೀಲ್ ಬಿರಾಳ ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

ಕೋರಿಸಿದ್ಧೇಶ್ವರ ಶಾಖಾಮಠದ ನವೀಕೃತ ಕಟ್ಟಡ ಉದ್ಘಾಟನೆ

ನಗರದ ಕರುಣೇಶ್ವರ ನಗರದಲ್ಲಿ ಸ್ಥಾಪಿಸಿರುವ ನಾಲವಾರದ ಕೋರಿಸಿದ್ಧೇಶ್ವರ ಶಿವಯೋಗಿಗಳ ಶಾಖಾಮಠದ ನವೀಕೃತ ಕಟ್ಟಡದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಶಿಖರಕೆ ಕಳಸಾರೋಹಣ ಸಮಾರಂಭ ನವೆಂಬರ್ 24ರಂದು ನಡೆಯಲಿದೆ.

ಸುಮಾರು ಮೂರು ದಶಕಗಳ ಹಿಂದೆ ಕಲಬುರಗಿಯ ಕರುಣೇಶ್ವರ ನಗರದಲ್ಲಿ ಸ್ಥಾಪನೆಯಾದ ನಾಲವಾರದ ಕೋರಿಸಿದ್ಧೇಶ್ವರ ಶಾಖಾಮಠವು ಈಗ ಮತ್ತೊಮ್ಮೆ ಸುಸಜ್ಜಿತವಾಗಿ ನವೀಕೃತಗೊಂಡಿದೆ. ನಾಲವಾರದ ಸಿದ್ಧತೋಟೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಎಲ್ಲಾ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಈ ಪುಣ್ಯ ಸಮಾರಂಭದಲ್ಲಿ ನಾಡಿನ ಹರಗುರು ಚರಮೂರ್ತಿಗಳು, ರಾಜಕೀಯ ಮುಖಂಡರು ಹಾಗೂ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.

ಗುರುಮುಟ್ಟಿ ಗುರುವಾದ, ಕೋರಿಸಿದ್ದೇಶ್ವರರು ಭಕ್ತರ ಕೋರಿದ ಬೇಡಿಕೆ ಈಡೇರಿಸುವ ಸಿದ್ಧಿಪುರುಷ ಕೋರಿಸಿದ್ಧೇಶ್ವರರ ಹೊಸಮೂರ್ತಿ,ಕಳಸಾರೋಹಣ ಹಾಗೂ ಲಿಂಗೈಕ್ಯ ತೋಟೇಂದ್ರ ಶಿವಯೋಗಿಗಳ ಮೂರ್ತಿ ಅನಾವರಣ ಕಲಬುರಗಿ ನಗರದ ಕರುಣೇಶ್ವರ ನಗರದಲ್ಲಿ ನೇರವೇರಿತು.

ಕಾರ್ಯಕ್ರಮ ನೆರವೇರಿಸಿ ಆಶೀರ್ವಚನ ನೀಡಿದ ನಾಲವಾರ ಕೋರಿಸಿದ್ದೇಶ್ವರ ಮಠದ ಪೀಠಾಧಿಪತಿ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು ಕಲಬುರಗಿ ಕರುಣೇಶ್ವರ ನಗರ ಶಾಖಾಮಠ ಶ್ರೀ ಕೋರಿಸಿದ್ಧೇಶ್ವರರ ದೇವಾಲಯ ಸುಸಜ್ಜಿತವಾಗಿ ನಿರ್ಮಿಸುವ ಮೂಲ ಕಾರಣ ಸದರಿ ನಗರದ ಸಕಲ ಭಕ್ತರ ತನುಮನದಿಂದ ಸಾಧ್ಯವಾಯಿತುಎಂದು ಹೇಳಿದರು.

ಬರಲಿರುವ ದಿನಗಳಲ್ಲಿ ಈ ಬಡಾವಣೆಯ ಸದ್ಭಕ್ತರು ಏಕತೆಯ ಭಾವನೆಯಿಂದ ಕೋರಿಸಿದ್ಧೇಶ್ವರರ ಮಠದ ಅಭಿವೃದ್ಧಿಗೆ ಶ್ರಮಿಸಿದರೆ, ಇದೊಂದು ಮಠ ಕೈಲಾಸವಾಗಿ ಗೋಚರಿಸುವುದು ಎಂದು ನಾಲವಾರ ಶ್ರೀಗಳು ಆಶೀರ್ವಚನ ನೀಡಿದರು.

ವೇದಿಕೆಯಲ್ಲಿ ಕರಡಕಲ್ಲದ ಕೋರಿಸಿದ್ಧೇಶ್ವರ ಶಾಖಾ ಮಠದ ರುದ್ರಮುನಿ ಶಿವಾಚಾರ್ಯರು ,ಬಡಾವಣೆಯ ಹಿರಿಯರು,ಯುವಕರು ,ಮಹಿಳೆಯರು ಉಪಸ್ಥಿತರಿದ್ದರು

ಕಲಬುರಗಿಯ ಕರುಣೇಶ್ವರ ನಗರದಲ್ಲಿ ಕೋರಿಸಿದ್ದೇಶ್ವರರ ನವೀಕೃತ ಶಾಖಾಮಠದ ಲೋಕಾರ್ಪಣೆ | ಸಕಲ ಭಕ್ತರ ತನು-ಮನ-ಧನದ ನಿಸ್ವಾರ್ಥ ಸಹಕಾರವೇ ಮೂಲ ಕಾರಣ: ನಾಲವಾರ ಶ್ರೀ

ಕಲಬುರಗಿ: ಗುರುಮುಟ್ಟಿ ಗುರುವಾದ, ಭಕ್ತರು ಕೋರಿದ ಬೇಡಿಕೆಗಳನ್ನು ಈಡೇರಿಸುವ ಸಿದ್ಧಿಪುರುಷ ಶ್ರೀ ಕೋರಿಸಿದ್ದೇಶ್ವರರ ಹೊಸ ಮೂರ್ತಿ ಹಾಗೂ ಲಿಂಗೈಕ್ಯ ಶ್ರೀ ತೋಟೇಂದ್ರ ಶಿವಯೋಗಿಗಳ ಮೂರ್ತಿ ಪ್ರತಿಷ್ಠಾಪನೆ, ನವೀಕೃತಗೊಂಡ ಶ್ರೀ ಮಠದ ಕಟ್ಟಡದ ನೂತನ ಶಿಖರಕ್ಕೆ ಕಳಸಾರೋಹಣ ಕಾರ್ಯಕ್ರಮವು ನಗರದ ಕರುಣೇಶ್ವರ ಬಡಾವಣೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಮತ್ತು ಭಕ್ತಿಭಾವದಿಂದ ನೆರವೇರಿತು.

ಗೌರಿಹುಣ್ಣಿಮೆಯ ಶುಭದಿನದಂದು ವೈದಿಕ ವೃಂದದ ನೇತೃತ್ವದಲ್ಲಿ ಶಾಸ್ರೋಕ್ತವಾಗಿ ಎಲ್ಲ ಕಾರ್ಯಗಳು ನೆರವೇರಿದವು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಲವಾರ ಶ್ರೀ ಕೋರಿಸಿದ್ದೇಶ್ವರ ಮಹಾಸಂಸ್ಥಾನ ಮಠದ ಶ್ರೀ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕರುಣೇಶ್ವರ ನಗರದ ಶಾಖಾ ಮಠದ ಶ್ರೀ
ಕೋರಿಸಿದ್ದೇಶ್ವರರ ದೇವಾಲಯವು ಸುಸಜ್ಜಿತವಾಗಿ ನಿರ್ಮಾಣವಾಗಲು ಈ ನಗರದ ಸಕಲ ಭಕ್ತರ ತನು- ಮನ-ಧನದ ನಿಸ್ವಾರ್ಥ ಸಹಕಾರವೇ ಮೂಲ ಕಾರಣ ಎಂದು ನುಡಿದರು.

ದೇವಾಲಯವೆಂದರೆ ಕೇವಲ ಕಲ್ಲು ಮತ್ತು ಸುಣ್ಣದಿಂದ ಕಟ್ಟಿದ ಕಟ್ಟಡವಲ್ಲ, ಅದು ಭಕ್ತರ ಶ್ರದ್ಧೆಯಿಂದ ನಿರ್ಮಾಣವಾದ ಜೀವಂತ ಶಕ್ತಿಕೇಂದ್ರ. ಭಕ್ತಿಯು ಕೇವಲ ದೇವಾಲಯದ ಗೋಡೆಗಳಲ್ಲಿ
ಸೀಮಿತವಾಗಬಾರದು, ಅದು ಮನೆ-ಮನಗಳಲ್ಲಿ,
ಬಡಾವಣೆಯ ಪ್ರತಿಯೊಂದು ಹೃದಯದಲ್ಲಿ
ಅರಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಬರಲಿರುವ ದಿನಗಳಲ್ಲಿ ಈ ಬಡಾವಣೆಯ ಸದ್ಭಕ್ತರು ಏಕತೆಯ ಭಾವನೆಯಿಂದ, ಒಂದೇ ಮನಸ್ಸಿನಿಂದ ಶ್ರೀ ಕೋರಿಸಿದ್ದೇಶ್ವರರ ಮಠದ ಅಭಿವೃದ್ಧಿಗೆ ಶ್ರಮಿಸಿದರೆ, ಇದೊಂದು ಮಠ ಭೂಮಿಯ ಮೇಲಿನ ಕೈಲಾಸವಾಗಿ ಗೋಚರಿಸುವುದು ಎಂದು ಅವರು
ಆಶೀರ್ವದಿಸಿದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಶ್ರೀಶೈಲ ಸಾರಂಗಧರ ಸಂಸ್ಥಾನ ಹಾಗೂ ಸುಲಫಲ ಮಠದ
ಪೀಠಾಧಿಪತಿ ಜಗದ್ಗುರು ಡಾ. ಸಾರಂಗಧರ
ದೇಶಿಕೇಂದ್ರ ಮಹಾಸ್ವಾಮಿಗಳು ಮಾತನಾಡಿ, ಜಾತಿ-
ಮತ-ಪಂಥಗಳ ಎಲ್ಲೆಯನ್ನು ಮೀರಿ ಎಲ್ಲರೂ
ನನ್ನವರು ಎಂದು ಅಪ್ಪಿಕೊಳ್ಳುವ ಮಮತಾಮಯಿ ಪೂಜ್ಯರೆಂದರೆ ನಾಲವಾರದ ಡಾ. ಸಿದ್ಧತೋಟೇಂದ್ರ
ಶಿವಾಚಾರ್ಯ ಮಹಾಸ್ವಾಮಿಗಳು ಎಂದು ಬಣ್ಣಿಸಿದರು.
ಕಲಬುರಗಿ ನಗರದಲ್ಲಿ ಸದ್ಗುರು ಶ್ರೀ ಕೋರಿಸಿದ್ದೇಶ್ವರರ
ಶಾಖಾಮಠದ ಮೂಲಕ ಧಾರ್ಮಿಕ, ಸಾಮಾಜಿಕ,
ಸಾಂಸ್ಕೃತಿಕ ಕಾರ್ಯಗಳು ನಿರಂತರವಾಗಿ ನಡೆಯಲಿ. ನಾಲವಾರದ ಪರಮಪೂಜ್ಯರು ಭಕ್ತರನ್ನು
ಸುಸಂಸ್ಕೃತವಾಗಿ ಬೆಳೆಸುತ್ತಿದ್ದು, ಲಕ್ಷಾಂತರ ಭಕ್ತರ ಪಾಲಿಗೆ ಅವರು ಭಗವಂತನ ಸ್ವರೂಪರಾಗಿದ್ದಾರೆ
ಎಂದರು.

ಅತಿಥಿಗಳಾಗಿದ್ದ ಹಿರಿಯ ಪತ್ರಕರ್ತ ದೇವಯ್ಯ ಗುತ್ತೇದಾರ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮಠಕ್ಕೆ ವಿವಿಧ ರೀತಿಯಲ್ಲಿ ಭಕ್ತಿಸೇವೆ ಸಲ್ಲಿಸಿದ ಬಸವರಾಜ್ ಮುಕ್ಕಾಣಿ ಬಳಬಟ್ಟಿ, ಆನಂದ ಮದುರಿ, ಜಗದೀಶ್ ಶಾಸ್ತ್ರಿಗಳು ಸನ್ನತಿ ಅವರಿಂದ ವೈದಿಕ ಸೇವೆ ನೆರವೇರಿತು.
ಗುರುಪರಂಪರೆಯ ಸ್ಮರಣೆ, ಭಕ್ತರ ಸಮರ್ಪಣೆ ಮತ್ತು
ಸಮಾಜದ ಏಕತೆ – ಈ ಮೂರೂ ಸಂಗಮವಾದ ಈ
ಪುಣ್ಯ ಸಂದರ್ಭವು ಕರುಣೇಶ್ವರ ನಗರದ ಭಕ್ತರ ಪಾಲಿಗೆ ಅವಿಸ್ಮರಣೀಯ ಕ್ಷಣವಾಗಿ ಉಳಿಯಿತು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳಿಗೆ ಶ್ರೀಮಠದ ಭಕ್ತಾದಿಗಳಾದ ಶಿವಲಿಂಗನಹಳ್ಳಿ ಬೆಂಗಳೂರು, ಬಸರೆಡ್ಡಿ ಗೌಡ ಪಾಲಪ್ ಗೋಳು ಚಿತ್ತಾಪುರ, ಶಿವಶರಣ ಪಾಟೀಲ್ ಗುಡೂರ್, ಮಲ್ಲರೆಡ್ಡಿ ಗೌಡ ಗುರ್ಜಾಲ್, ಚನ್ನಬಸಪ್ಪ ಬಿರೇದಾರ್, ವಿಶ್ವನಾಥ್, ಬಸುರಾಜ್ ಪಾಟೀಲ ಸೋಮನಾಥಳ್ಳಿ ಭಕ್ತರಿಂದ
ತುಲಾಭಾರ ನೆರವೇರಿತು.

ವೇದಿಕೆಯಲ್ಲಿ ಹೊನ್ನಕಿರಣಿಗಿಯ ಪೂಜ್ಯ ಷ.ಬ್ರ.
ಚಂದ್ರಗುಂಡ ಶಿವಾಚಾರ್ಯ ಮಹಾಸ್ವಾಮಿಗಳು, ಕರಡುಕಲ್ಲದ ಶ್ರೀ ಕೋರಿಸಿದ್ದೇಶ್ವರರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಗಳು ಉಪಸ್ಥಿತರಿದ್ದರು.

ಪ್ರತ್ಯಕ್ಷ ಗಾರಂಪಳ್ಳಿ ಚಿತ್ತಾಪುರ ಇವರಿಂದ ಭರತನಾಟ್ಯ ನಡೆಯಿತು, ತೃಪ್ತಿ ಪಾಟೀಲ್ ಪ್ರಾಸ್ತಾವಿಕ ನುಡಿ ಗೈದರು, ಖ್ಯಾತ ಪ್ರವಚನಕಾರರಾದ ವೇ.ಮೂ. ಮಡಿವಾಳಯ್ಯ ಶಾಸ್ತ್ರಿಗಳು ಜೇರಟಗಿ ಕಾರ್ಯಕ್ರಮ
ನಿರೂಪಿಸಿದರು, ಶರಣಕುಮಾರ ಜಾಲಹಳ್ಳಿ ಪ್ರಾರ್ಥಿಸಿದರು, ಶ್ರೀಮಠದ ವಕ್ತಾರ ಮಹಾದೇವ
ಗಂವ್ಹಾರ ಸೇರಿದಂತೆ ಕಲಬುರಗಿ ನಗರದ ಹಿರಿಯ
ನಾಯಕರು ಕರಣಯ್ಯ ಹಿರೇಮಠ ಆಂದೋಲಾ, ಗುರು ಪಾಟೀಲ್ ಬಿರಾಳ ಸೇರಿದಂತೆ ಅಪಾರ
ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *