ಶಹಾಬಾದ್: ನವೆಂಬರ್ ಪೂರ್ತಿ ದಾಖಲಾತಿ ನಿರ್ವಹಣೆ ಅಭಿಯಾನ

ಸುದ್ದಿ ಸಂಗ್ರಹ

ಸುದ್ದಿ ಸಂಗ್ರಹ ವಾಡಿ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶಹಾಬಾದ್‌ ವಲಯ ವ್ಯಾಪ್ತಿಯ 286 ಅಂಗನವಾಡಿ ಕೇಂದ್ರಗಳಲ್ಲಿ ನವೆಂಬರ್ ತಿಂಗಳ ಪರ್ಯಂತ ದಾಖಲಾತಿ ಪರಿಶೀಲನೆ ಅಭಿಯಾನ ನಡೆಸಲಾಗುತ್ತಿದೆ ಎಂದು ಶಹಾಬಾದ್‌ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಶರಣಪ್ಪ ಬುಶೆಟ್ಟಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಲಬುರಗಿ ಉಪ ನಿರ್ದೇಶಕರು ಹಾಗೂ ಜಿಲ್ಲಾ ನಿರೂಪಣಾಧಿಕಾರಿಯವರ ನಿರ್ದೇಶನದ ಮೇರೆಗೆ ನವೆಂಬರ್ ತಿಂಗಳನ್ನು ದಾಖಲಾತಿ ನಿರ್ವಹಣೆ ಮಾಸಾಚಾರಣೆಯನ್ನಾಗಿ ಆಚರಿಸಲಾಗುತ್ತಿದೆ. ದಾಖಲಾತಿ ಕೇಂದ್ರದಲ್ಲಿರುವ ಬಾಣಂತಿಯರ ವಿವರ, ಮಕ್ಕಳ ತೂಕ ಮತ್ತು ಎತ್ತರದ ದಾಖಲಾತಿ, ಪೂರಕ ಪೌಷ್ಟಿಕ ಆಹಾರ ವಿತರಣೆ, ಆಹಾರ ದಾಸ್ತಾನು, ಮೊಟ್ಟೆ ವಿತರಣೆ, ಚುಚ್ಚುಮದ್ದು ಕಾರ್ಯಕ್ರಮ, ಆರೋಗ್ಯ ತಪಾಸಣೆ, ಪೋಷಣಾ ಟ್ರ್ಯಾಕರ್ ಸೂಚ್ಯಂಕಗಳು, ಸಭೆಯ ನಡಾವಳಿಗಳು ಸೇರಿದಂತೆ ಇತರ ದಾಖಲಾತಿಗಳ ಪರಿಶೀಲನೆ ನಡೆಯಲಿದೆ ಎಂದು ಹೇಳಿದ್ದಾರೆ.

ಯಾವುದೆ ದಾಖಲಾತಿಗಳು ಬಾಕಿ ಉಳಿಯದಂತೆ ಮತ್ತು ತಪ್ಪಾಗದಂತೆ ವಿಶೇಷ ಕಾಳಜಿ ವಹಿಸಿ ಪರಿಶೀಲನೆ ಕೈಗೊಳ್ಳಲಾಗುತ್ತದೆ. ಲೋಪದೋಷಗಳು ಕಂಡುಬಂದಲ್ಲಿ ಮುಂದೆ ಸರಿಪಡಿಸಲು ಸಮಯಾವಕಾಶ ನೀಡಿ ದಾಖಲಾತಿಗಳ ವ್ಯವಸ್ಥಿತವಾಗಿ ಮತ್ತು ಸಮರ್ಪಕವಾಗಿ ಕಾಲಕಾಲಕ್ಕೆ ನವೀಕರಿಸಿ ನಿರ್ವಹಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *