ಸುದ್ದಿ ಸಂಗ್ರಹ ಹಾಸನ
ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಹಾಸನ ತಹಸೀಲ್ದಾರ್ ಗೀತಾ ಮತ್ತು ಡಿವೈಎಸ್ಪಿ ಮಾಲತೇಶ್ ಅವರ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ವೇಳೆ ಗೀತಾ ಅವರು ಕಣ್ಣೀರಿಟ್ಟಿದ್ದಾರೆ.
ಪ್ರೋಟೋಕಾಲ್ ವಾಹನ ಹೋಗುತ್ತಿದೆ. ನನ್ನ ವಾಹನ ತೆಗಿಸಿಕೊಡಿ ಎಂದು ತಹಸೀಲ್ದಾರ್ ಹೇಳಿದ್ದಾರೆ. ಇದೆ ವಿಚಾರಕ್ಕೆ ತಹಸೀಲ್ದಾರ್ ಮತ್ತು ಡಿವೈಎಸ್ಪಿ ನಡುವೆ ವಾಗ್ವಾದ ಆರಂಭವಾಗಿದೆ. ದೇವಾಲಯದ ಮುಂಭಾಗ ಭಕ್ತರ ಎದುರಲ್ಲಿ ಅಧಿಕಾರಿಗಳು ಏಕವಚನದಲ್ಲೇ ಪರಸ್ಪರ ನಿಂದಿಸಿಕೊಂಡಿದ್ದಾರೆ. ಈ ವೇಳೆ ತಹಸೀಲ್ದಾರ್ ಕಣ್ಣೀರಿಟ್ಟಿದ್ದಾರೆ.
ರವಿವಾರ ರಜಾ ದಿನವಾಗಿದ್ದರಿಂದ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಿದೆ. ಧರ್ಮದರ್ಶನದ ಸಾಲಿನಲ್ಲಿ ಭಕ್ತರು ತುಂಬಿ ತುಳುಕುತ್ತಿದ್ದಾರೆ. 1000, 300 ರೂ. ವಿಶೇಷ ದರ್ಶನದ ಸಾಲಿನಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದೆ.
ದೇವಿ ದರ್ಶನ ಪಡೆದು ವಾಪಾಸ್ ಹೋಗುವವರಿಗೆ ಹೆಚ್ಚಿನ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿದೆ. ಹಾಸನ ನಗರದ ಚನ್ನಪಟ್ಟಣದಲ್ಲಿರುವ ಸಾರಿಗೆ ಬಸ್ ನಿಲ್ದಾಣ ಬಸ್ಗಳಿಂದ ತುಂಬಿಹೋಗಿದೆ.