ಸುದ್ದಿ ಸಂಗ್ರಹ ಬೆಂಗಳೂರು
ಹೋಟೆಲ್ ಆಯ್ತು, ಕ್ಲಬ್ ಆಯ್ತು, ಆಹಾರ ಪದಾರ್ಥ ಆಯ್ತು ಈಗ ವಾಟರ್ ಬಾಟಲ್ ಸರದಿ. ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಪಾಸಣೆಗೆ ಆರೋಗ್ಯ ಸಚಿವ ಯು.ಟಿ ಖಾದರ್ ಸೂಚನೆ ನೀಡಿದ್ದಾರೆ.
ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತಾ ವಿಭಾಗದ ವತಿಯಿಂದ ರಾಜ್ಯಾದ್ಯಂತ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ತಯಾರಿಕಾ ಘಟಕಗಳ ತಪಾಸಣೆಗೆ ಮುಂದಾಗಿದ್ದಾರೆ. ಇಂದು ಮತ್ತು ನಾಳೆ ಎರಡು ದಿನಗಳ ತಪಾಸಣೆ ನಡೆಯಲಿದ್ದು, 23 ತಂಡಗಳನ್ನ ರಚಿಸಿ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದೆ. ಸುಮಾರು 17 ಕಂಪನಿಗಳ ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಬಾಟಲ್‌ಗಳ ತಪಾಸಣೆಗೆ ಮುಂದಾಗಿದ್ದಾರೆ.
ಪ್ಯಾಕ್ ಮಾಡಿದ ಕುಡಿಯುವ ನೀರಿನ ಬಾಟಲಿಗಳಲ್ಲಿ ಪ್ರಮುಖವಾಗಿ ಸಾಮಾನ್ಯ ಅಥವಾ ಕಲುಷಿತ ನೀರನ್ನು ತುಂಬುವುದು, ಅಗತ್ಯ ಖನಿಜಾಂಶಗಳನ್ನು ಸೇರಿಸದಿರುವುದು ಮತ್ತು ನಕಲಿ ಬ್ರ‍್ಯಾಂಡಿಂಗ್ ಮತ್ತು ಕಳಪೆ ಸೀಲಿಂಗ್ ಬಳಸುವುದು. ನೀರಿನ ಶುದ್ಧೀಕರಣದ ವೇಳೆ ಬಳಸುವ ಕೀಟನಾಶಕಗಳ ಅವಶೇಷಗಳು ಅಥವಾ ಬ್ರೋಮೇಟ್‌ನಂತಹ ಹಾನಿಕಾರಕ ರಾಸಾಯನಿಕಗಳು ನಿಗದಿತ ಪ್ರಮಾಣಕ್ಕಿಂತ ಹೆಚ್ಚಾಗಿರುವುದು. ಪ್ರಮುಖ ಕಲಬೆರಕೆ ವಿಧಾನಗಳಾಗಿವೆ. ಈ ಕಲಬೆರಕೆ ಆರೋಪಗಳು ಕೂಡ ಎದ್ದಿದೆ. ಈ ನಿಟ್ಟಿನಲ್ಲಿ ವಾಟರ್ ಬಾಟಲ್ ತಯಾರಿಕಾ ಘಟಕಗಳು ಮತ್ತು ವಾಟರತ ಬಾಟಲ್‌ಗಳ ತಪಾಸಣೆಗೆ ಮುಂದಾಗಿದ್ದಾರೆ.
ಯಾವೆಲ್ಲ ಕಂಪನಿಗಳ ವಾಟರ್ ಬಾಟಲ್ ತಪಾಸಣೆ ?
- ಬಿಸ್ಲೇರಿ ಇಂಟರ್‌ನ್ಯಾಷನಲ್
2 ಅಕ್ವಾಫಿನಾ
3 ಕಿನ್ಲೆ
4 ಎಸ್‌ಎಲ್‌ವಿ ಆಕ್ವಾ ಕಿಂಗ್ - ಗೂಡೆವ್ ವಾಟರ್ ಬಾಟಲ್
6 ನಿರೇತಾ ವಾಟರ್ ಬಾಟಲ್
7 ನೀರಂ ವಾಟರ್ ಬಾಟಲ್ - ಎಫ್‌ಎಂ ಆಕ್ವಾ
9 ಎಸ್.ಎಂ ಆಕ್ವಾ ಮತ್ತು ಬೆವರೇಜಸ್
10 ಸಿಯಾ ಪ್ಯಾಕೇಜ್ಡ್ ಕುಡಿಯುವ ನೀರು
11 ಋಷಭಾದ್ರಿ ಮಿನರಲ್ಸ್
12 ಶಿವಲಿಂಗೇಶ್ವರ ಮಿನರಲ್ಸ್
13 ದೀಕ್ಷಾ ಇಂಡಸ್ಟ್ರೀಸ್
14 ಆಕಾಶ್ವಿನ್ ಫುಡ್ಸ್ ಮತ್ತು ಬೆವರೇಜಸ್ ಪ್ರೈ. ಲಿ.
15 ಮೌಂಟೇನ್ ಆಕ್ವಾ
16 ಶಿವಗಂಗಾ ಫುಡ್ಸ್ ಮತ್ತು ಬೆವರೇಜಸ್
17 ನೇಚುರೆ ಬೆವರೇಜಸ್.