ಸಿನಿರಂಗದ ಏಳಿಗೆಗೆ ಶ್ರಮಿಸಿದ ಕಲಾವಿದರಿಗೆ ನೀಡಲಾಗುವ ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವವೇ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ.
1913ರಲ್ಲಿ ಭಾರತದ ಮೊದಲ ಪೂರ್ಣಪ್ರಮಾಣದ ಮೂಕಿ ಚಿತ್ರ ‘ರಾಜಾ ಹರಿಶ್ಚಂದ್ರ’ ನಿರ್ಮಿಸಿದ್ದ ‘ಭಾರತೀಯ ಚಿತ್ರರಂಗದ ಪಿತಾಮಹ’ ಧುಂಡಿರಾಜ್ ಗೋವಿಂದ್ ಫಾಲ್ಕೆ ಅವರ ಸ್ಮರಣಾರ್ಥ 1969ರಲ್ಲಿ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಯಿತು.
ಪ್ರಶಸ್ತಿಯು ‘ಸ್ವರ್ಣ ಕಮಲ’ ಪದಕ, ರೇಷ್ಮೆ ಶಾಲು ಮತ್ತು 10 ಲಕ್ಷ ನಗದು ಬಹುಮಾನ ಒಳಗೊಂಡಿದೆ.
2024ನೇ ಸಾಲಿನ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ಗೌರವಕ್ಕೆ ಅನಂತನಾಗ್ ಅವರನ್ನು ಆಯ್ಕೆ ಮಾಡಲಾಗಿದ್ದು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕುರಿತು ಅಧಿಕೃತವಾಗಿ ಘೋಷಿಸಿದೆ.
2023ರಲ್ಲಿ ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರಿಗೆ ನಾಲ್ಕು ದಶಕಗಳ ಸುದೀರ್ಘ ವೃತ್ತಿ ಜೀವನ ಮತ್ತು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿನ ಅದ್ಭುತ ನಟನೆಗಾಗಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಸತ್ಯಜಿತ್ ರೇ, ರಾಜ್ ಕಪೂರ್, ಲತಾ ಮಂಗೇಷ್ಕರ್ ಸೇರಿದಂತೆ ಭಾರತೀಯ ಸಿನಿರಂಗದ ಅನೇಕ ಮಹಾನ್ ಚೇತನಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
1969ರಿಂದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದವರ ಮಾಹಿತಿ
1969ರಲ್ಲಿ ದೇವಿಕಾ ರಾಣಿ- ಹಿಂದಿ
1970ರಲ್ಲಿ ಬೀರೇಂದ್ರನಾಥ್ ಸಿರ್ಕಾರ್- ಬೆಂಗಾಳಿ
1971ರಲ್ಲಿ ಪೃಥ್ವಿರಾಜ್ ಕಪೂರ್- ಹಿಂದಿ
1972ರಲ್ಲಿ ಪಂಕಜ್ ಮಲ್ಲಿಕ್- ಬೆಂಗಾಳಿ, ಹಿಂದಿ
1973ರಲ್ಲಿ ಸುಲೋಚನಾ (ರೂಬಿ ಮೈಯರ್ಸ್)- ಹಿಂದಿ
1974ರಲ್ಲಿ ಬಿ.ಎನ್ ರೆಡ್ಡಿ- ತೆಲುಗು
1975ರಲ್ಲಿ ಧೀರೇಂದ್ರನಾಥ್ ಗಂಗೂಲಿ-ಬೆಂಗಾಳಿ
1976ರಲ್ಲಿ ಕಾನನ್ ದೇವಿ- ಬೆಂಗಾಳಿ
1977ರಲ್ಲಿ ನಿತಿನ್ ಬೋಸ್- ಬೆಂಗಾಳಿ, ಹಿಂದಿ
1978ರಲ್ಲಿ ರೈಚಂದ್ ಬೋರಾಲ್- ಬೆಂಗಾಳಿ, ಹಿಂದಿ
1979ರಲ್ಲಿ ಸೊಹ್ರಾಬ್ ಮೋದಿ- ಹಿಂದಿ
1980ರಲ್ಲಿ ಪೈಡಿ ಜೈರಾಜ್- ಹಿಂದಿ
1981ರಲ್ಲಿ ನೌಷಾದ್- ಹಿಂದಿ
1982ರಲ್ಲಿ ಎಲ್.ವಿ.ಪ್ರಸಾದ್- ತೆಲುಗು, ತಮಿಳು, ಹಿಂದಿ
1983ರಲ್ಲಿ ದುರ್ಗಾ ಖೋಟೆ- ಹಿಂದಿ, ಮರಾಠಿ
1984ರಲ್ಲಿ ಸತ್ಯಜಿತ್ ರೇ- ಬೆಂಗಾಳಿ
1985ರಲ್ಲಿ ವಿ.ಶಾಂತಾರಾಮ್- ಹಿಂದಿ, ಮರಾಠಿ
1986ರಲ್ಲಿ ಬಿ.ನಾಗಿ ರೆಡ್ಡಿ- ತೆಲುಗು
1987ರಲ್ಲಿ ರಾಜ್ ಕಪೂರ್- ಹಿಂದಿ
1988ರಲ್ಲಿ ಅಶೋಕ್ ಕುಮಾರ್- ಹಿಂದಿ
1989ರಲ್ಲಿ ಲತಾ ಮಂಗೇಶ್ಕರ್- ಹಿಂದಿ, ಮರಾಠಿ
1990ರಲ್ಲಿ ಅಕ್ಕಿನೇನಿ ನಾಗೇಶ್ವರ ರಾವ್- ತೆಲುಗು
1991ರಲ್ಲಿ ಭಾಲ್ಜಿ ಪೆಂಧಾರ್ಕರ್- ಮರಾಠಿ
1992ರಲ್ಲಿ ಭೂಪೇನ್ ಹಜಾರಿಕಾ- ಅಸ್ಸಾಮಿ
1993ರಲ್ಲಿ ಮಜ್ರೂಹ್ ಸುಲ್ತಾನ್ಪುರಿ- ಹಿಂದಿ
1994ರಲ್ಲಿ ದಿಲೀಪ್ ಕುಮಾರ್- ಹಿಂದಿ
1995ರಲ್ಲಿ ಡಾ.ರಾಜ್‌ಕುಮಾರ್- ಕನ್ನಡ
1996ರಲ್ಲಿ ಶಿವಾಜಿ ಗಣೇಶನ್- ತಮಿಳು
1997ರಲ್ಲಿ ಕವಿ ಪ್ರದೀಪ್- ಹಿಂದಿ
1998ರಲ್ಲಿ ಬಿ.ಆರ್.ಚೋಪ್ರಾ- ಹಿಂದಿ
1999ರಲ್ಲಿ ಹೃಷಿಕೇಶ್ ಮುಖರ್ಜಿ- ಹಿಂದಿ
2000ರಲ್ಲಿ ಆಶಾ ಭೋಂಸ್ಲೆ- ಹಿಂದಿ, ಮರಾಠಿ
2001ರಲ್ಲಿ ಯಶ್ ಚೋಪ್ರಾ- ಹಿಂದಿ
2002ರಲ್ಲಿ ದೇವ್ ಆನಂದ್- ಹಿಂದಿ
2003ರಲ್ಲಿ ಮೃಣಾಲ್ ಸೇನ್- ಬೆಂಗಾಳಿ, ಹಿಂದಿ
2004ರಲ್ಲಿ ಅಡೂರ್ ಗೋಪಾಲಕೃಷ್ಣನ್
2005ರಲ್ಲಿ ಶ್ಯಾಮ್ ಬೆನೆಗಲ್- ಮಲಯಾಳಂ
2006ರಲ್ಲಿ ತಪನ್ ಸಿನ್ಹಾ- ಬೆಂಗಾಳಿ, ಹಿಂದಿ
2007ರಲ್ಲಿ ಮನ್ನಾ ಡೇ- ಬೆಂಗಾಳಿ, ಹಿಂದಿ
2008ರಲ್ಲಿ ವಿ.ಕೆ.ಮೂರ್ತಿ- ಹಿಂದಿ
2009ರಲ್ಲಿ ಡಿ.ರಾಮಾನಾಯ್ಡು- ತೆಲುಗು
2010ರಲ್ಲಿ ಕೆ.ಬಾಲಚಂದರ್- ತಮಿಳು
2011ರಲ್ಲಿ ಸೌಮಿತ್ರ ಚಟರ್ಜಿ- ಬೆಂಗಾಳಿ
2012ರಲ್ಲಿ ಪ್ರಾಣ್- ಹಿಂದಿ
2013ರಲ್ಲಿ ಗುಲ್ಜಾರ್- ಹಿಂದಿ
2014ರಲ್ಲಿ ಶಶಿ ಕಪೂರ್- ಹಿಂದಿ
2015ರಲ್ಲಿ ಮನೋಜ್ ಕುಮಾರ್-ಹಿಂದಿ
2016ರಲ್ಲಿ ಕೆ.ವಿಶ್ವನಾಥ್- ತೆಲುಗು
2017ರಲ್ಲಿ ವಿನೋದ್ ಖನ್ನಾ- ಹಿಂದಿ
2018ರಲ್ಲಿ ಅಮಿತಾಭ್ ಬಚ್ಚನ್- ಹಿಂದಿ
2019ರಲ್ಲಿ ರಜನಿಕಾಂತ್- ತಮಿಳು
2020ರಲ್ಲಿ ಆಶಾ ಪಾರೇಖ್- ಹಿಂದಿ
2021ರಲ್ಲಿ ವಹೀದಾ ರೆಹಮಾನ್- ಹಿಂದಿ
2022ರಲ್ಲಿ ಮಿಥುನ್ ಚಕ್ರವರ್ತಿ-ಬೆಂಗಾಳಿ, ಹಿಂದಿ
2023ರಲ್ಲಿ ಮೋಹನ್‌ಲಾಲ್- ಮಲಯಾಳಂ
2024ರಲ್ಲಿ ಅನಂತನಾಗ್- ಕನ್ನಡ