ಸುದ್ದಿ ಸಂಗ್ರಹ ಚಿತ್ತಾಪುರ
ಯಡ್ರಾಮಿ ತಾಲೂಕಿನಲ್ಲಿ ಬಂಜಾರ ಸಮಾಜದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿ ಶಿಕ್ಷಕನಿಗೆ ನ್ಯಾಯಾಲಯವು 25 ವರ್ಷ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, ಸಮಾಜದಲ್ಲಿ ಕಟ್ಟೆಚ್ಚರದ ಸಂದೇಶ ನೀಡಿದಂತಾಗಿದೆ ಎಂದು ಬಂಜಾರ ಸಮಾಜದ ಯುವ ಮುಖಂಡ ಜಗದೀಶ ಚವ್ಹಾಣ ಹೇಳಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲಕಿಗೆ ಅತ್ಯಾಚಾರ ಮಾಡಿದ್ದನ್ನು ಉಗ್ರವಾಗಿ ಖಂಡಿಸಿ ಆರೋಪಿಗೆ ಶಿಕ್ಷೆ ಕೊಡಿಸುವುದಕ್ಕೆ ಸಮಾಜದ ಅನೇಕರು ಧ್ವನಿ ಎತ್ತಿ ಕಾನೂನು ಹೋರಾಟ ನಡೆಸಿದ್ದು ಯಶಸ್ವಿಯಾಗಿದೆ. ಎಂದರು.