ನಿರಂತರ 24 ಗಂಟೆ ಕನ್ನಡ ಬೋಧನೆ ಮಾಡಿದ ಶಿಕ್ಷಕ ಸಂಗಮೇಶ ರೋಣದ್.…ಸುದ್ದಿ ಸಂಗ್ರಹ ಕಲಬುರಗಿ
ಕನ್ನಡ ಭಾಷೆಯ ಅಭಿವೃದ್ದಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅಭ್ಯರ್ಥಿಗಳಿಗೆ ಗುಣಮಟ್ಟದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕಲಬುರಗಿ ನಗರದ ಶೃಂಗೇರಿ ಅಕಾಡೆಮಿಯಲ್ಲಿ ಶಿಕ್ಷಕ ಸಂಗಮೇಶ ರೋಣದ್ ನಿರಂತರ 24 ಗಂಟೆಗಳ ಕಾಲ ಕನ್ನಡ ವ್ಯಾಕರಣ ಮತ್ತು ಕನ್ನಡ ಸಾಹಿತ್ಯ ಬೋಧನೆ ಕಾರ್ಯ ಯಶಸ್ವಿಯಾಗಿ ನಡೆಸಿದ್ದಾರೆ……ಜುಲೈ 15ರಂದು ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ವಿಶೇಷ ತರಗತಿಯು ಜುಲೈ 16ರ ಬೆಳಗ್ಗೆ 8 ಗಂಟೆಯವರೆಗೆ ಯಾವುದೆ ವಿರಾಮವಿಲ್ಲದೆ ನಡೆಯಿತು. ಈ ಅವಧಿಯಲ್ಲಿ ಕಡ್ಡಾಯ ಕನ್ನಡ ಪತ್ರಿಕೆಗೆ ಸಂಬಂಧಿಸಿದ ವ್ಯಾಕರಣ, ಸಾಹಿತ್ಯ, ಪ್ರಮುಖ ಲೇಖಕರು, ಕವಿಗಳು, ವ್ಯಾಕರಣ ನಿಯಮಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯ ವಿಷಯಗಳನ್ನು ಸಮಗ್ರವಾಗಿ ಬೋಧಿಸಲಾಯಿತು.….ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಶಿಕ್ಷಕರ ಬೋಧನಾ ಶೈಲಿ, ವಿಷಯದ ಆಳವಾದ ಅರಿವು ಮತ್ತು ನಿರಂತರ ಪರಿಶ್ರಮ ಮೆಚ್ಚಿ ಪ್ರಶಂಸಿಸಿದರು…..ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯತ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಕನ್ನಡ ಭಾಷೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದ್ದು, ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರೇರಣಾದಾಯಕ ಹೆಜ್ಜೆಯಾಗಿದೆ……ಸತತ 24 ಗಂಟೆಗಳ ಕಾಲ ಯಾವುದೆ ಆಯಾಸವಿಲ್ಲದೆ ವಿದ್ಯಾರ್ಥಿಗಳಿಗೆ ಕನ್ನಡದ ಜ್ಞಾನ ಹಂಚಿದ ಸಂಗಮೇಶ ರೋಣದ ಅವರ ಬದ್ಧತೆ, ಕನ್ನಡದ ಮೇಲಿನ ಪ್ರೀತಿ ಮತ್ತು ಶಿಕ್ಷಣ ಸೇವೆಯನ್ನು ಕಂಬಳೇಶ್ವರ ಗಚ್ಚಿನ ಮಠದ ಸೋಮಶೇಖರ ಶಿವಾಚಾರ್ಯರು, ಪ್ರಮುಖರಾದ ಡಾ.ಮೇಟಿ ರುದ್ರೇಶ್, ಗಾಳೇಶ್ ಶೃಂಗೆರಿ, ವೀರಭದ್ರಪ್ಪ ಗುರಮಿಠಕಲ್, ಶಾಂತಕುಮಾರ್ ಹತ್ತಿ, ಮಲ್ಲಿಕಾರ್ಜುನ ಪೂಜಾರಿ, ರಮೇಶ ಬೊಮ್ಮನಹಳ್ಳಿ ಅನೀಲ ವಡ್ಡಡಗಿ ಸೆರಿದಂತೆ ಅನೇಕರು ಪ್ರಶಂಸಿಸಿದ್ದಾರೆ. ಅವರ ಈ ಪ್ರಯತ್ನವು ಕನ್ನಡ ಭಾಷೆಯ ಬೆಳವಣಿಗೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ತುಂಬಿದೆ……ಈ ಸಾಧನೆಗೆ ಬೋಧನಾ ಸಮಯದಲ್ಲಿ ತೆಗೆದ ಫೋಟೋಗಳು, ವಿಡಿಯೊಗಳು ಮತ್ತು ಸಮಯದ ದಾಖಲೆಗಳು ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾಗಿವೆ.….ಹೆಚ್ಚಿನ ಮಾಹಿತಿಗೆ ಶಿಕ್ಷಕ ಸಂಗಮೇಶ ರೋಣದ್ ಅವರಿಗೆ 9901097012 ಸಂಪರ್ಕಿಸಬಹುದು.