ಫೋಟೊ ತೆಗೆಯಲು ಹೋಗಿ ಒಂದೆ ಕುಟುಂಬದ ಐವರು ಕಾವೇರಿ ನದಿಯಲ್ಲಿ ಜಲಸಮಾಧಿ

ಜಿಲ್ಲೆ

ಸುದ್ದಿ ಸಂಗ್ರಹ ಮಂಡ್ಯ
ಫೋಟೊ ತೆಗೆಯಲು ಹೋಗಿ ಒಂದೆ ಕುಟುಂಬದ ಐವರು ಕಾವೇರಿಯಲ್ಲಿ ನದಿಯಲ್ಲಿ ಜಲಸಮಾಧಿಯಾಗಿರುವ ದುರ್ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಇಂದು ಸಂಜೆ 5 ಗಂಟೆಗೆ ಘಟನೆ ನಡೆದಿದೆ. ಚೈತ್ರ (20), ಶ್ವೇತಾ (38), ವಿಜಯಮ್ಮ (50), ಪ್ರಿಯಾಂಕಾ (28), ಮಹೇಶ್ ಮೃತಪಟ್ಟವರು. ಮೃತರು ಚನ್ನಪಟ್ಟಣ ಮೂಲದವರು.

ಮುತ್ತತ್ತಿಯ ಮುತ್ತೆತ್ತರಾಯ ದೇಗುಲಕ್ಕೆ ಕುಟುಂಬಸ್ಥರು ಬಂದಿದ್ದರು. ಈ ವೇಳೆ ಕಾವೇರಿ ನದಿಗಿಳಿದು ಪೋಟೊ ತೆಗೆದುಕೊಳ್ಳುವಾಗ ದುರ್ಘಟನೆ ನಡೆದಿದೆ. ಸದ್ಯ ಐವರ ಮೃತದೇಹವನ್ನು ಅಗ್ನಿಶಾಮಕದಳ ಸಿಬ್ಬಂದಿ ಹೊರತೆಗೆದಿದ್ದಾರೆ. ಹಲಗೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *