ಪಟ್ಟಣದ

ಕಾಲುದಾರಿ ತೆರವು, ಸಂಘಟಿತ ಹೋರಾಟಕ್ಕೆ ಜಯ: ವೀರಣ್ಣ ಯಾರಿ……ಸುದ್ದಿ ಸಂಗ್ರಹ ವಾಡಿ
ರೈಲು ನಿಲ್ದಾಣ ಪ್ರಾರಂಭದಿಂದ ಇದ್ದ ಕಾಲುದಾರಿ ಏಕಾಏಕಿ ರೈಲ್ವೆ ಸಿಬ್ಬಂದಿ ತಡೆಯೊಡ್ಡಿದರು, ಇದಕ್ಕೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ ಪರಿಣಾಮ ತಕ್ಷಣ ತಡೆಯೊಡ್ಡಿದ್ದು ತೆರವುಗೊಳಿಸಿದ ಸಿಬ್ಬಂದಿ ಸಂಚಾರಕ್ಕೆ ಅನುವು ಮಾಡಿದರು. ಇದು ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮತ್ತು ಸಂಘಟಿತ ಹೋರಾಟಗಾರರ ಜಯ ಎಂದು ಹರ್ಷ ವ್ಯಕ್ತಪಡಿಸಿದರು…..ಈ ಸಂದರ್ಭದಲ್ಲಿ ವೀರಣ್ಣ ಯಾರಿ ಮಾತನಾಡಿ, ತಡೆ ಮಾಡಿರುವ ಬಗ್ಗೆ ರೈಲು ನಿಲ್ದಾಣದ ಪ್ರಭಂದಕರಿಗೆ, ಮುಂಬಯಿ ಹಾಗೂ ಸೊಲ್ಲಾಪುರ ಕೇಂದ್ರ ವಿಭಾಗಕ್ಕೆ ಮತ್ತು ಕೇಂದ್ರ ರೈಲ್ವೆ ಸಚಿವ ವಿ ಸೋಮಣ್ಣ ಅವರಿಗೆ ಈ ಮೆಲ್ ಮುಖಾಂತರ ಇಲ್ಲಿನ ಜನರ ಕಷ್ಟದ ಬಗ್ಗೆ, ಇಲ್ಲಿ ಮೆಲ್ಸೇತುವೆ, ಕೆಳಸೇತುವೆ ಇಲ್ಲದೆ ಅನುಭವಿಸುತ್ತಿರು ತೊಂದರೆ ಬಗ್ಗೆ ಸ್ಪಂದಿಸುವಂತೆ ಒತ್ತಾಯಿಸಲಾಗಿತ್ತು, ಈ ಬಗ್ಗೆ ಎಲ್ಲಾ ದಿನ ಪತ್ರಿಕೆಗಳಲ್ಲಿ ಮತ್ತು ಟಿವಿ ಮಾಧ್ಯಮದಲ್ಲಿ ಸುದ್ದಿ ಪ್ರಕಟಗೊಂಡಿತ್ತು, ಇದರ ಪರಿಣಾಮ ಮನಗಂಡು ತೆರವು ಗೊಳಿಸಿದ್ದಾರೆ ಎಂದರು.‌…..ಈ ಹೋರಾಟಕ್ಕೆ ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ಕರವೇ ಸೇರಿದಂತೆ ವಿವಿಧ ಸಂಘಟನೆಗಳು ಎದೆಯೊಡ್ಡಿ ನಿಂತಿರುವುವರಿಂದ ಜನರ ಕಷ್ಟ ನಿವಾರಣೆಯಾಗಿದೆ, ಅವರಿಗೂ ಮತ್ತು ನಮ್ಮ ಧ್ವನಿಗೆ ಮತ್ತಷ್ಟು ಶಕ್ತಿ ನೀಡಿದ ಎಲ್ಲಾ ಮಾಧ್ಯಮಕ್ಕೂ ಧನ್ಯವಾದಗಳು. ಸಾರ್ವಜನಿಕರು ಈ ಕಾಲು ದಾರಿಯಿಂದ ಸಾಗುವಾಗ ತುಂಬಾ ಜಾಗೃತವಾಗಿರಬೇಕು ಎಂದರು……ಬಿಜೆಪಿ ಎಸ್.ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಮುಕ್ಕನಾಳ, ಶ್ರೀರಾಮ‌ ಸೇನೆ ತಾಲೂಕು ಅಧ್ಯಕ್ಷ ವಿಶ್ವರಾಧ್ಯ ತಳವಾರ, ಮುಖಂಡ ಸುರೇಶ ನಾಯಕ ಸೇರಿದಂತೆ ಬಡಾವಣೆಯ ನಿವಾಸಿಗಳು ಇದ್ದರು.

Leave a Reply

Your email address will not be published. Required fields are marked *