ಇಂದಿನಿಂದ ದೇಶದಲ್ಲಿ ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿ…..ದೇಶದ ಯುವ ಜನತೆ ಆನ್ಲೈನ್ ಗೇಮ್ಗಳಿಗೆ ಮಾರು ಹೋಗಿದ್ದಾರೆ. ಅದೆಷ್ಟರ ಮಟ್ಟಿಗೆ ಎಂದರೆ ದೇಶದ ಹಳ್ಳಿಯ ಮೂಲೆಯಲ್ಲೂ ಗೇಮ್ಗಳಲ್ಲಿ ತೊಡಗಿರುವವರು ಕಾಣಸಿಗುತ್ತಾರೆ. ಹೀಗೆ ಆಡುವವರಲ್ಲಿ ಅಪ್ರಾಪ್ತರು ಸೇರಿದಂತೆ ಅನೇಕರು ಹಣ ಹೂಡಿ ನಷ್ಟ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗುತ್ತಾರೆ. ಅದೆ ರೀತಿ ಅಪರಾಧ ಕೃತ್ಯಗಳಲ್ಲೂ ತೊಡಗಿದ ಉದಾಹರಣೆಗಳನ್ನು ನಾವು ನೋಡಿದ್ದೆವೆ. ಇದನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ಆನ್ಲೈನ್ ಗೇಮಿಂಗ್ ಕಾಯ್ದೆ ಜಾರಿಗೆ ತಂದಿದೆ……ಯಾವೆಲ್ಲ ಕಂಪನಿಗಳು ಹೊಸ ಲೈಸೆನ್ಸ್ ಪಡೆಯಬೇಕು ?
ನ್ಯಾಷನಲ್ ಗೇಮಿಂಗ್ ಅಥಾರಿಟಿ ಎಲ್ಲಾ ಗೇಮ್ಗಳಿಗೆ ಲೈಸೆನ್ಸ್ ಕೊಡುವ ಕೇಂದ್ರದ ಸಂಸ್ಥೆಯಾಗಿದೆ. Dream11, MPL, WinZO ಸೇರಿದಂತೆ ಹಲವಾರು ಕಂಪನಿಗಳು ಹೊಸ ಲೈಸೆನ್ಸ್ ಪಡೆಯಬೇಕಿದೆ……ಗೇಮ್ಗಳ ವರ್ಗೀಕರಣ
ಗೇಮ್ಗಳನ್ನು ಮೂರು ರೀತಿ ವರ್ಗೀಕರಿಸಲಾಗಿದೆ. 1) ಇ-ಸ್ಪೋರ್ಟ್ಸ್ – ಸಂಪೂರ್ಣ ಕಾನೂನುಬದ್ಧ 2) ಸ್ಕಿಲ್ ಗೇಮ್ – ಲೈಸೆನ್ಸ್ ಬೇಕು 3) ಬೆಟ್ಟಿಂಗ್ ಗೇಮ್ – ಸಂಪೂರ್ಣ ಬ್ಯಾನ್ ಮಾಡಲಾಗಿದೆ. ಆನ್ಲೈನ್ ಕ್ಯಾಸಿನೊ, 1XBet ಗೇಮ್ಗಳು ಬ್ಯಾನ್ ಆಗಲಿವೆ…….ವಯಸ್ಸು & ಸಮಯ ಮಿತಿ
18 ವರ್ಷ ಕೆಳಗಿನ ಮಕ್ಕಳಿಗೆ ದಿನಕ್ಕೆ 3 ಗಂಟೆ ಮಾತ್ರ ಆಡಲು ಅವಕಾಶ, ರಾತ್ರಿ 11 ರಿಂದ ಬೆಳಿಗ್ಗೆ 6ರ ವರೆಗೆ ಇವರಿಗೆ ಗೇಮ್ ಆಡುವುದು ನಿಷೇಧ. 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಿತಿ ಇಲ್ಲ. ಇನ್ನೂ ಮಕ್ಕಳು, ಶಾಲಾ ವಿದ್ಯಾರ್ಥಿಗಳಿಗೆ ಹಣದ ಕರ್ಚಿಗೆ ಕಡಿವಾಣ ಹಾಕಲಾಗಿದೆ. ಅಲ್ಲದೆ ಎಲ್ಲಾ ಹಣದ ಗೇಮ್ಗೆ ಆಧಾರ್ KYC ಕಡ್ಡಾಯವಾಗಿದೆ……ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತಿಂಗಳಿಗೆ 10,000 ರೂ. ಮಿತಿ ಇದೆ. ಗೇಮ್ಗೆ ಪೋಷಕರ OTP ಬೇಕಾಗಿದೆ. ಇದರಿಂದ ಪೋಷಕರಿಗೆ ನಿಯಂತ್ರಣ ಸಿಗಲಿದೆ. GST + TDS ಡೆಪಾಸಿಟ್ ಮೇಲೆ 28% GST ಮುಂದುವರಿಕೆಯಾಗಲಿದ್ದು, 10,000 ರೂ. ಕ್ಕಿಂತ ಹೆಚ್ಚು ಹಣ ಗೆದ್ದರೆ 30% TDS ಕಟ್ ಆಗಲಿದೆ……ಈ ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ ?
ಕಂಪನಿಗಳು ಈ ನಿಯಮ ಉಲ್ಲಂಘಿಸಿದರೆ ಮೊದಲ ಬಾರಿ 1 ಕೋಟಿ ರೂ. ದಂಡ. 2ನೇ ಬಾರಿ 5 ಕೋಟಿ ರೂ. ದಂಡ ಮತ್ತು CEO ಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ……ಜಾಹೀರಾತು ಮಾಡಿದರೂ ಶಿಕ್ಷೆ
ಸೆಲೆಬ್ರಿಟಿಗಳು ಹಾಗೂ ಇನ್ಫ್ಲುಯೆನ್ಸರ್ಗಳು ಬೆಟ್ಟಿಂಗ್ ಸೇರಿದಂತೆ ಬ್ಯಾನ್ ಆದ ಗೇಮ್ಗಳ ಜಾಹಿರಾತು ಮಾಡಿದರೆ 50 ಲಕ್ಷ ರೂ. ದಂಡ ಹಾಗೂ 1 ವರ್ಷ ಬ್ಯಾನ್ ಮಾಡಲಾಗುತ್ತದೆ……ಕದ್ದು ಮುಚ್ಚಿ ಆಡಿದ್ರೆ ಶಿಕ್ಷೆ ಏನು ?
ಬ್ಯಾನ್ ಆದ ಸೈಟ್ ಬಳಸಿ ಗೇಮ್ ಆಡಿದ್ರೆ ಬಳಕೆದಾರರಿಗೆ 10,000 ರೂ. ದಂಡ ವಿಧಿಸಲಾಗುತ್ತದೆ. ಪದೆ ಪದೆ ಇದನ್ನೆ ಮಾಡಿದರೆ ಕೇಸ್ ದಾಖಲಿಸಲಾಗುತ್ತದೆ. ಬ್ಯಾನ್ ಆದ ಗೇಮ್ಗೆ ಹಣ ಕಳಿಸಿದ್ರೆ ಬ್ಯಾಂಕ್ ಖಾತೆ ಫ್ರೀಜ್ ಆಗಲಿದೆ……ಕರ್ನಾಟಕದಲ್ಲಿ ಹಳೆಯ ಕಾಯ್ದೆ ರದ್ದು
2021ರಲ್ಲಿ ಕರ್ನಾಟಕ ಸರ್ಕಾರ ಬೆಟ್ಟಿಂಗ್ ಬ್ಯಾನ್ ಕಾಯ್ದೆಯನ್ನು ಹೈಕೋರ್ಟ್ ಈಗಾಗಲೇ ರದ್ದು ಮಾಡಿದೆ. ಈಗ ಕೇಂದ್ರ ಕಾಯ್ದೆ ಅನ್ವಯ ಆಗಲಿದೆ…….ಬೆಂಗಳೂರು ಗೇಮಿಂಗ್ ಹಬ್: MPL, Games24x7 ಸೇರಿದಂತೆ 200ಕ್ಕೂ ಹೆಚ್ಚು ಕಂಪನಿಗಳು ಬೆಂಗಳೂರಲ್ಲಿವೆ. ಲೈಸೆನ್ಸ್ಗೆ ಮೇ.1 ರೊಳಗೆ ಅರ್ಜಿ ಹಾಕಿರಬೇಕು. ಮೇ.1 ರಿಂದ VPN ಹಾಕಿ ಬೆಟ್ಟಿಂಗ್ ಆಡಿದರೂ ಸೈಬರ್ ಕ್ರೈಂ ಪೊಲೀಸರು ಟ್ರ್ಯಾಕ್ ಮಾಡಲಿದ್ದಾರೆ…….ಆನ್ಲೈನ್ ಗೇಮ್ಗಳ ನೋಂದಣಿ
ಆನ್ಲೈನ್ ಗೇಮ್ಗಳಿಗೆ ನೋಂದಣಿ ಅಗತ್ಯವಿರುತ್ತದೆ. ಅನುಮೋದಿತ ಗೇಮ್ ಫ್ಲಾಟ್ಫಾರ್ಮ್ಗಳಿಗೆ 10 ವರ್ಷಗಳವರೆಗೆ ಮಾನ್ಯವಾಗಿರುವ ಡಿಜಿಟಲ್ ಪ್ರಮಾಣ ಪತ್ರ ನೀಡಲಾಗುತ್ತದೆ. ನೋಂದಣಿ ವಿವರಗಳನ್ನು ಸ್ಪಷ್ಟವಾಗಿ ಕಂಪನಿಗಳು ಪ್ರದರ್ಶಿಸಬೇಕು. ಪಾವತಿ, ಡೇಟಾ ನಿರ್ವಹಣೆ ಮತ್ತು ಪಾರದರ್ಶಕತೆಯ ನಿಯಮಗಳು ಅನುಸರಿಸಬೇಕು……ಎರಡು ಹಂತದ ದೂರಿಗೆ ಅವಕಾಶ
ಏನಾದರೂ ಸಮಸ್ಯೆ ಇದ್ದರೆ ಬಳಕೆದಾರರು ಮೊದಲು ಗೇಮಿಂಗ್ ಕಂಪನಿಯನ್ನು ಸಂಪರ್ಕಿಸಬಹುದು. ಅಲ್ಲಿ ಬಗೆಹರಿಯದಿದ್ದರೆ ಪ್ರಾಧಿಕಾರಕ್ಕೆ ಮತ್ತು MeitY ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬಹುದು. ಸಮಸ್ಯೆಯನ್ನು 30 ದಿನಗಳಲ್ಲಿ ಪರಿಹರಿಸಲಾಗುತ್ತದೆ.