ಚಿತ್ತಾಪುರ: ನಮ್ಮ ಜೀವನ ಕೇವಲ ಸ್ವಾರ್ಥಕ್ಕಾಗಿ ಅಲ್ಲ, ಸಮಾಜಕ್ಕಾಗಿ ಮುಡಿಪಾಗಿಟ್ಟುಕೊಂಡರೆ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಮಾತನಾಡಿದ ಅವರು, ಪ್ರತಿಯೊಬ್ಬರು ಸ್ವಂತ ಲಾಭಕ್ಕಾಗಿ ಬದುಕುತ್ತಿರುವ ಇಂದಿನ ಸಂದರ್ಭದಲ್ಲಿ, ಹಿಂದಿನ ಮಹಾಪುರುಷರು ಸಂಸಾರ ಹಾಗೂ ಸಂಬಂಧಗಳನ್ನು ಬದಿಗಿಟ್ಟು ಸಮಾಜ ಮತ್ತು ಧರ್ಮದ ಉಳಿವಿಗಾಗಿ ಶ್ರಮಿಸಿದ್ದಾರೆ. ತಮ್ಮ ಜೀವನವನ್ನೇ ಸಮಾಜಕ್ಕೆ ಅರ್ಪಿಸಿದ ಕಾರಣದಿಂದಲೆ ಇಂದು ಅವರ ಜಯಂತಿಗಳನ್ನು ಆಚರಿಸಿ ಗೌರವಿಸುತ್ತೆವೆ ಎಂದರು.
ಅವರ ತತ್ವ–ಸಿದ್ಧಾಂತಗಳನ್ನು ಅನುಸರಿಸಿ, ಸ್ವಾರ್ಥ ಜೀವನದಿಂದ ದೂರವಿದ್ದು, ಸಮಾಜಮುಖಿಯಾಗಿ ಬದುಕಿದಾಗಲೇ ಜೀವನ ಸಾರ್ಥಕವಾಗುತ್ತದೆ ಎಂದರು.
ಶಂಕರಾಚಾರ್ಯರ ಜಯಂತಿ ಅಂಗವಾಗಿ ಅಕ್ಷತಾ ಜಾನೀಬ್ ಅವರು ಅವರ ಜೀವನ ಚರಿತ್ರೆ ಪರಿಚಯಿಸಿದರು. ವಿಪ್ರ ಸಮಾಜದ ಕೋಶಾಧ್ಯಕ್ಷ ಜಯಂತ ಮಾಲಗತ್ತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ರಾಜಕುಮಾರ್ ಮರತೂರ್, ಅಶ್ವತ್ಥ ನಾರಾಯಣ ಕುಲಕರ್ಣಿ, ಉಪ ನೋಂದಣಾಧಿಕಾರಿ ಆನಂದರಾವ್ ಕುಲಕರ್ಣಿ, ವಿಪ್ರ ಸಮಾಜದ ತಾಲೂಕು ಗೌರವಾಧ್ಯಕ್ಷ ದೇವಿದಾಸ್ ಕುಲಕರ್ಣಿ, ತಾಲೂಕು ಅಧ್ಯಕ್ಷ ಗಿರೀಶ್ ಜಾನೀಬ್, ಉಪಾಧ್ಯಕ್ಷ ವಿಶ್ವನಾಥ ಅಫಜಲಪುರಕರ್, ಹಣಮೇಶ್ ಆಚಾರ್ಯ, ಭೀಮರಾವ್ ಅಫಜಲಪುರಕರ್, ಗೌತಮ್ ನಾಯಕ್, ಗೋಪಾಲ್, ಸುರೇಶ್ ಕುಲಕರ್ಣಿ, ಗುಂಡೇರಾವ್ ಸರಾಫ್, ಪ್ರಕಾಶ್ ಮಾಲಖರೆ, ರಾಘವೇಂದ್ರ ಜಾನೀಬ್, ಮಾಣಿಕರಾವ್ ಡೋಣಗಾಂವ್, ರಾಘವೇಂದ್ರ ಡೋಣಗಾಂವ್, ಸಂಜೀವ್ ಜಾನೀಬ್, ನರಹರಿ ಮೋಹರೀರ್, ಆನಂದ ಪಟವಾರಿ, ಕಿಶನರಾವ್ ಕುಲಕರ್ಣಿ, ಸರೋಜಾ ಅಫಜಲಪುರಕರ, ಸಂಜೀವ್ ಜಾನೀಬ್, ನರಹರಿ ಮೋಹರೀರ್, ಆನಂದ ಪಟವಾರಿ, ಕಿಶನರಾವ್ ಕುಲಕರ್ಣಿ, ಸರೋಜಾ ಅಫಜಲಪುರಕರ್, ಶೃತಿ ಜಾನೀಬ್ ಸಕ್ಕುಬಾಯಿ ಕುಲಕರ್ಣಿ, ಲಕ್ಷ್ಮಿಬಾಯಿ ಸರಾಫ್, ಕಾವೇರಿ ಜೋಶಿ, ವೈಜಯಂತಿ ಕುಲಕರ್ಣಿ, ಚಂದ್ರಕಲಾ ಡೋಣಗಾಂವ್, ಛಾಯಾ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.