ಸುದ್ದಿ ಸಂಗ್ರಹ ವಾಡಿ
ಪಟ್ಟಣದ ಬಿಜೆಪಿ ಕಛೇರಿಯಲ್ಲಿ ವೀರ ಸಾವರ್ಕರ್’ರ 60ನೇ ಪುಣ್ಯ ಸ್ಮರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ, ವಿನಾಯಕ ದಾಮೋದರ್ ಸಾವರ್ಕರ್ ಹೆಸರು ಕೇಳಿದರೆ ಈಗಲೂ ನಮ್ಮ ಮೈ ಮನ ರೋಮಾಂಚನಗೊಳ್ಳುತ್ತದೆ, ಅವರು ನಮ್ಮ ಸ್ವಾಭಿಮಾನದ ಸರ್ವಸ್ವ ಎಂದರು.
ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ತೆಗೆದುಕೊಂಡ ನಿಲುವುಗಳು ಈಗಲೂ ಈ ಮಣ್ಣಿನ ಯುವಕರಿಗೆ ಸ್ಪೂರ್ತಿದಾಯಕ. ತಾಯಿ-ತಂದೆಯನ್ನು ಚಿಕ್ಕ ವಯಸ್ಸಿನಲ್ಲೆ ಕಳೆದುಕೊಂಡರು ಎದೆಗುಂದದೆ ವಿದ್ಯಾಭ್ಯಾಸಕ್ಕೆ ಹೆಚ್ಚು ಮೊರೆ ಹೋದ ಸಾವರ್ಕರ್ ಅವರು, ಅಂದು ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೆಚ್ಚಿಸುವಲ್ಲಿ ಪ್ರಚಲಿತವಿದ್ದ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರ ಕೇಸರಿ ಪತ್ರಿಕೆಯು ಅವರಿಗೆ ಗಾಢವಾಗಿ ಪ್ರಭಾವ ಬೀರಿತು.
ಮುಂದೆ ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ತೆರಳಿದರು. ಇನ್ನೂ ಕಾನೂನು ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಸಾವರ್ಕರ್ ಪಾತ್ರರಾಗಿದ್ದರು. ಆದರೆ ಬ್ರಿಟಿಷ್ ಸರ್ಕಾರಕ್ಕೆ ನಿಷ್ಠೆಯ ಪ್ರಮಾಣ ವಚನ ಸ್ವೀಕರಿಸಲು ನೀರಾಕರಿಸಿದ್ದಕ್ಕೆ ವಕೀಲ ಬಿರುದು ನೀಡಲಿಲ್ಲ. ಲಂಡನ್‌ನಲ್ಲಿದ್ದಾಗ ಸ್ವತಂತ್ರ ಭಾರತ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಾವರ್ಕರ್ ಅವರ ಚಟುವಟಿಕೆಗಳನ್ನು ಗಮನಿಸಿದ ಬ್ರಿಟಿಷ್ ಸರ್ಕಾರ 1910 ರಂದು ಲಂಡನ್‌ನಲ್ಲಿ ಅವರನ್ನು ಬಂಧಿಸಿದರು. ಹಡುಗಿನ ಮೂಲಕ ಸಾವರ್ಕರ್ ಅವರನ್ನು ಭಾರತಕ್ಕೆ ಕರೆತರಲಾಯಿತು. ಮೊರ್ಸಿಲ್ಲೆಸ್ ಬಂದರಿನಲ್ಲಿ ಹಡಗು ಬಂದು ನಿಂತಾಗ ಸಮುದ್ರಕ್ಕೆ ಹಾರಿದ್ದ ಸಾವರ್ಕರ್, ಈಜಿ ದಡ ಸೇರಿದ್ದರು. ನಂತರ ಫ್ರೆಂಚ್ ಪೊಲೀಸರಿಗೆ ಶರಣಾಗಿದ್ದರು. ನಂತರ ಸಾವರ್ಕರ್ ಅವರನ್ನು ಅಂಡಮಾನ್‌ನ ಕಾಲಾಪಾನಿನಲ್ಲಿನ ಜೈಲಿನಲ್ಲಿ ಇಡಲಾಯಿತು. ಇಲ್ಲಿ 600ಕ್ಕೂ ಹೆಚ್ಚು ಸ್ವಾತಂತ್ರ್ಯ ಸೇನಾನಿಗಳಿಗೆ ತೀವ್ರ ರೂಪದ ಶಿಕ್ಷೆ ನೀಡಿ ಸಾವಿಗೆ ದುಡಿದಿದ್ದಾರೆ. 1921 ರಲ್ಲಿ ಸಾವರ್ಕರ್ ಅವರನ್ನ ಕಾಲಾಪಾನಿ ಜೈಲ್‌ನಿಂದ ರತ್ನಗಿರಿ ಜೈಲಿಗೆ ಕಳುಹಿಸಲಾಯಿತು. 1937ರಲ್ಲಿ ಅವರು ಜೈಲಿನಿಂದ ಬಿಡುಗಡೆಯಾದರು. ನಂತರ ಮತ್ತೆ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಂಡರು ಎಂದರು.
ಗಾಂಧಿ ಹತ್ಯೆಯಲ್ಲಿ ಒಂದೊಮ್ಮೆ ಹಿಂದೂ ಮಹಾಸಭೆಯ ಅಧ್ಯಕ್ಷನಾಗಿದ್ದ ಸಾವರ್ಕರ್‌ನ ಪಾತ್ರವೂ ಇದೆ ಎನ್ನುವ ಆಪಾದನೆಯಿಂದ ಸಾಕಷ್ಟು ಮನನೊಂದ ವೀರ ತಮ್ಮ 83ನೇ ವಯಸ್ಸಿನಲ್ಲಿ 1966ರ ಫ಼ೆಬ್ರವರಿ 1ರಂದು ಆಮರಣಾಂತ ಉಪಾವಾಸ ಕೈಗೊಂಡು ಫೆ.26ರಂದು ದೇಹತ್ಯಾಗ ಮಾಡಿ ಅಮರರಾದರು. ಸಮವಸ್ತ್ರ ಧರಿಸಿದ 2,500 ಸ್ವಯಂಸೇವಕರಿಂದ ಗೌರವ ಪಡೆದ ಏಕೈಕ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್, ಅದಕ್ಕಾಗಿ ಅವರು ಇಂದಿಗೂ ನಮ್ಮ ಸ್ವಾಭಿಮಾನದ ಸರ್ವಸ್ವವಾಗಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ರವಿ ನಾಯಕ,
ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ, ತಾಲೂಕು ಎಸ್’ಸಿ ಮೂರ್ಚಾ ಪ್ರಧಾನ ಕಾರ್ಯದರ್ಶಿ ಕಿಶನ ಜಾಧವ,
ಮುಖಂಡರಾದ ಶರಣಗೌಡ ಚಾಮನೂರ, ಗಿರಿಮಲ್ಲಪ್ಪ ಕಟ್ಟಿಮನಿ, ರವೀಂದ್ರ ನಾಯಕ, ಅಂಬದಾಸ ಜಾಧವ, ಕುಮಾರ ಜಾಧವ, ಬಸವರಾಜ ಹೇಮಾನಿ, ಹೀರಾಸಿಂಗ ರಾಠೋಡ, ರಂಗಪ್ಪ ದೊರೆ, ಚಂದರ ಚವ್ಹಾಣ, ಮಲ್ಲಿಕಾರ್ಜುನ ಪುಜಾರಿ ಸೇರಿದಂತೆ ಸೇರಿದಂತೆ ಅನೇಕರು ಇದ್ದರು.