ವಿಧಾನಸೌಧದ ಪಕ್ಕದಲ್ಲಿ ತಲೆ ಎತ್ತಲಿದೆ ದೇಶದ ಮೊದಲ ಧಾರ್ಮಿಕ ಸೌಧ: 27 ಕೋಟಿ ವೆಚ್ಚದಲ್ಲಿ ನಿರ್ಮಾಣ

ರಾಜ್ಯ

ಸುದ್ದಿ ಸಂಗ್ರಹ ಬೆಂಗಳೂರು
ವಿಧಾನಸೌಧದ ಸಮೀಪದ ಎಂ‌‌.ಎಸ್ ಬಿಲ್ಡಿಂಗ್ ಎದುರುಗಡೆ ಇರುವ ಮುಜರಾಯಿ ಇಲಾಖೆಯ ಜಾಗದಲ್ಲಿ ಧಾರ್ಮಿಕಸೌಧ ನಿರ್ಮಾಣವಾಗಲಿದೆ. ದೇಶದಲ್ಲೆ ಮೊದಲ ಬಾರಿಗೆ ಇಂತಹದೊಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಹೊಯ್ಸಲ ಮಾದರಿಯಲ್ಲಿ ಈ ಕಟ್ಟಡ ತಲೆ ಎತ್ತಲಿದೆ. ಧಾರ್ಮಿಕ ಸೌಧ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮ ಸೋಮವಾರ ನೆರವೇರಿದೆ.

ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಗುದ್ದಲಿ ಪೂಜೆ ನೆರವೇರಿಸುವರು.

ದೇಶದ ಪ್ರಥಮ ಧಾರ್ಮಿಕ ಸೌಧ
ದೇಶದ ಪ್ರಥಮ ಧಾರ್ಮಿಕ ಸೌಧ ಇದಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಬಾಡಿಗೆ ಕಟ್ಟದಲ್ಲೆ ಕಚೇರಿ ಇದೆ. ಹೀಗಾಗಿ ಈಗ 27 ಕೋಟಿ ರೂ ವೆಚ್ಚದಲ್ಲಿ ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಮುಂದಾಗಿದೆ. ಈ ಕಟ್ಟಡದ ವಾಸ್ತಶಿಲ್ಪ ಶೈಲಿ ಹೊಯ್ಸಳ ಮಾದರಿಯಲ್ಲಿ ಇರಲಿದೆ. ‌

ನಾಲ್ಕು ಅಂತಸ್ತಿನ ಕಟ್ಟಡ
ಧಾರ್ಮಿಕ ಸೌಧ ನಾಲ್ಕು ಅಂತಸ್ತಿನ ಕಟ್ಟಡವಾಗಲಿದೆ. ನೆಲ ಮಹಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಡಿಜಿಟಲ್ ಲೈಬ್ರರಿ , ಆರ್’ಡಿಪಿಆರ್, ರೆಕಾರ್ಡ್ಸ್ ಕೊಠಡಿ ಇರಲಿದೆ. ಮೊದಲನೆಯ ಮಹಡಿಯಲ್ಲಿ ಕೋರ್ಟ್ ಹಾಲ್, ಕಮಿಷನರ್ ಕಚೇರಿ, ಸರ್ವೆ ಇಲಾಖೆ ಮತ್ತು ಎಚ್ ಕ್ಯೂ ಮತ್ತು ಕ್ಯೂಎ ಕಚೇರಿಗಳು ಇರಲಿದೆ. ಎರಡನೆಯ ಮಹಡಿಯಲ್ಲಿ ಆಗಮ ಸೆಕ್ಷನ್ ಆಫೀಸರ್, ಐಟಿ ಸೆಕ್ಷನ್, ಇಂಜಿನಿಯರಿಂಗ್ ಸೆಕ್ಷನ್, ಮೀಟಿಂಗ್ ಹಾಲ್, ಎಚ್ ಕ್ಯೂ ಒನ್ ಚೇಂಬರ್ ಇರಲಿದೆ.‌‌

ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್ ಹಾಗೂ ಸೂಪರಿಟೆಂಡೆಂಟ್ ಕಚೇರಿಗಳು ಇರಲಿವೆ. ನಾಲ್ಕನೇ ಮಹಡಿಯಲ್ಲಿ ಆಡಿಟೋರಿಯಂ ಇರುವಂತೆ ವಿನ್ಯಾಸ ಮಾಡಲಾಗಿದೆ. ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ಇಲಾಖೆಗಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದು, ಈಗ ನೀಲಿ ನಕ್ಷೆ ಎಲ್ಲವೂ ಸಿದ್ಧವಾಗಿದ್ದು ಗುದ್ದಲಿ ಪೂಜೆ ಕಾರ್ಯಕ್ರಮ ನಡೆಯಿತು.

ಕಟ್ಟಡ ನಿರ್ಮಾಣದ ಕುರಿತಾಗಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ, ‘ಬೆಂಗಳೂರಿನಲ್ಲಿ ಧಾರ್ಮಿಕ ಸೌಧ ಕಟ್ಟಬೇಕು ಎಂಬ ನಿರ್ಧಾರ ಮಾಡಿದ್ದೆವೆ. ಇದಕ್ಕೆ ಕೇಂದ್ರದಿಂದಲೂ ಅನುದಾನ ಸಿಗಲಿದೆ. ಅದನ್ನು ಬಳಕೆ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿದ್ದೆವೆ. ಒಟ್ಟು 27 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗಲಿದೆ’ ಎಂದರು.

ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ, ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಇದ್ದವು. ಆದರೆ ಇದೀಗ ಸ್ವಂತ ಕಟ್ಟಡ ನಿರ್ಮಾಣವಾಗಲಿದೆ. ಇದು ಹೊಯ್ಸಳ ಶೈಲಿಯಲ್ಲಿ ತಲೆ ಎತ್ತಲಿದೆ. ಆದಷ್ಟು ಬೇಗ ಕಟ್ಟಡ ನಿರ್ಮಾಣಕಾರ್ಯ ಪೂರ್ಣಗೊಳ್ಳಲಿದೆ. ಕಟ್ಟಡದಲ್ಲಿ ಎಲ್ಲಾ ವ್ಯವಸ್ಥೆ ಇರಲಿದೆ ಎಂದು ಮಾಹಿತಿ ನೀಡಿದರು.

Leave a Reply

Your email address will not be published. Required fields are marked *